ಗಡಿ ದಾಟಿ.. ದೇಶದ ಭೂ ಭಾಗ ಪ್ರವೇಶಿಸಿದ ಚೀನಾ ಸೈನಿಕ ಭಾರತೀಯ ಸೇನೆ ವಶಕ್ಕೆ

| Updated By: KUSHAL V

Updated on: Jan 09, 2021 | 4:13 PM

ಲಡಾಖ್​ ಗಡಿ ಭಾಗದಲ್ಲಿ ಮತ್ತೊಮ್ಮೆ ಚೀನಾ ಸೇನೆಯ ಉಪಟಳ ಪ್ರಾರಂಭವಾಗಿದೆ. ಇಂದು ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಭಾಗದಲ್ಲಿ ಭಾರತ ಪ್ರವೇಶಿಸಿದ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.

ಗಡಿ ದಾಟಿ.. ದೇಶದ ಭೂ ಭಾಗ ಪ್ರವೇಶಿಸಿದ ಚೀನಾ ಸೈನಿಕ ಭಾರತೀಯ ಸೇನೆ ವಶಕ್ಕೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ​: ಲಡಾಖ್ ಗಡಿ ಭಾಗದಲ್ಲಿ ಮತ್ತೊಮ್ಮೆ ಚೀನಾ ಸೇನೆಯ ಉಪಟಳ ಪ್ರಾರಂಭವಾಗಿದೆ. ಇಂದು ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಭಾಗದಲ್ಲಿ ಭಾರತ ಪ್ರವೇಶಿಸಿದ ಚೀನಾ ಸೈನಿಕನೋರ್ವನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.

ಭಾರತಕ್ಕೆ ಸೇರಿರುವ ಭೂ​​ ಭಾಗದಲ್ಲಿ ನಿನ್ನೆ ಬೆಳಗ್ಗೆ ಚೀನಾ ಸೈನಿಕನೊಬ್ಬ ಕಾಣಿಸಿಕೊಂಡಿದ್ದಾನೆ. ಹಾಗಾಗಿ, ಈತನನ್ನು ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದಾರೆ ಎಂದು ಭಾರತೀಯ ಸೇನೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಯ, ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ, ಚೀನಾ ಸೇನೆ ಗಡಿ ಭಾಗದಲ್ಲಿ ಟ್ಯಾಂಕ್​ಗಳನ್ನು​ ನಿಯೋಜಿಸಿದೆ. ರೆಜಾಂಗ್ ಲಾ, ರೆಚಿನ್ ಲಾ ಮತ್ತು ಮುಖೋಸ್ರಿ ಪ್ರದೇಶಗಳಲ್ಲಿ ಚೀನಾ ಸೇನೆ ಕಾರ್ಯಪ್ರವೃತ್ತವಾಗಿದೆ. ಈ ಭಾಗದಲ್ಲಿ 30ರಿಂದ 35 ಟ್ಯಾಂಕ್​ಗಳನ್ನು​ ನಿಯೋಜನೆ ಮಾಡಿದೆ. ಈ ಟ್ಯಾಂಕ್‌ಗಳು ಅತ್ಯಂತ ಲಘುವಾಗಿದ್ದು ಆಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಇತ್ತ, ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಕೂಡ ರೆಜಾಂಗ್ ಲಾ, ರೆಚಿನ್ ಲಾ ಮತ್ತು ಮುಖೋಸ್ರಿ ಪ್ರದೇಶಗಳಲ್ಲಿ ಟ್ಯಾಂಕ್‌ಗಳನ್ನು ನಿಯೋಜಿಸಿದೆ. ಈ ಸಂದರ್ಭದಲ್ಲಿ, ಚೀನಾದ ಸೈನಿಕ ಭಾರತದ ಗಡಿ ಪ್ರವೇಶಿಸಿರುವುದು ಆತಂಕ ಮೂಡಿಸಿದೆ.

ನ್ಯೂ ಇಯರ್ ಹಿಂದಿನ ದಿನ.. PoKಯಿಂದ ಗಡಿ ದಾಟಿ ಬಂದ ಪೋರನಿಗೆ ಸಿಕ್ತು ಭಾರತದ ರಾಜಾತಿಥ್ಯ