Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಲೈ ಲಾಮಾ ಹುಟ್ಟುಹಬ್ಬ ಆಚರಣೆಗೆ ಅಡ್ಡಿಪಡಿಸಿದ ಚೀನಾ ಸೈನಿಕರು; ಹಳ್ಳಿಗಳಿಗೆ ನುಗ್ಗಿ ಬ್ಯಾನರ್​, ಧ್ವಜ ಪ್ರದರ್ಶನ

Dalai Lama: ಜುಲೈ 6ರಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹುಟ್ಟುಹಬ್ಬ ಇತ್ತು. ಹೀಗಾಗಿ ಲಡಾಖ್​​ನ ಹಲವು ಹಳ್ಳಿಗಳ ಜನರು ಅದನ್ನು ಪ್ರತಿವರ್ಷದಂತೆ ಸಂಭ್ರಮದಿಂದ ಆಚರಿಸಿದ್ದಾರೆ.

ದಲೈ ಲಾಮಾ ಹುಟ್ಟುಹಬ್ಬ ಆಚರಣೆಗೆ ಅಡ್ಡಿಪಡಿಸಿದ ಚೀನಾ ಸೈನಿಕರು; ಹಳ್ಳಿಗಳಿಗೆ ನುಗ್ಗಿ ಬ್ಯಾನರ್​, ಧ್ವಜ ಪ್ರದರ್ಶನ
ಎಲ್​ಎಸಿ ಬಳಿ ಬ್ಯಾನರ್​, ಧ್ವಜ ಪ್ರದರ್ಶಿಸಿದ ಚೀನಾ ಸೈನಿಕರು
Follow us
TV9 Web
| Updated By: Lakshmi Hegde

Updated on: Jul 12, 2021 | 5:16 PM

ಜುಲೈ 6ರಂದು ನಡೆದ ಟಿಬೆಟಿಯನ್ ಧರ್ಮಗುರು ದಲೈ ಲಾಮಾ (Dalai Lama)ರ ಹುಟ್ಟುಹಬ್ಬದ ದಿನದಂದು ಚೀನಾದ ಸೈನಿಕರು ಮತ್ತು ಕೆಲವು ನಾಗರಿಕರು ಲಡಾಖ್​ನ ಡೆಮ್ಚುಕ್​ ಪ್ರದೇಶದಲ್ಲಿರುವ ಸಿಂಧು ನದಿಯ ಇನ್ನೊಂದು ಭಾಗದಲ್ಲಿ ದಾಂಧಲೆ ನಡೆಸಿದ್ದಾರೆ. ಅಲ್ಲಿ ಭಾರತೀಯ ಹಳ್ಳಿಗರು ದಲೈ ಲಾಮಾ ಅವರ ಜನ್ಮದಿನದ ಸಂಭ್ರಮದಲ್ಲಿ ಇದ್ದರು. ಅದೇ ವೇಳೆ ಆಗಮಿಸಿದ ಚೀನಾ ಸೈನಿಕರು (Chinese soldiers)  ಮತ್ತು ಒಂದಷ್ಟು ಮಂದಿ ನಾಗರಿಕರು ಪ್ರತಿಭಟನಾತ್ಮಕ ಬ್ಯಾನರ್​ಗಳನ್ನು ಮತ್ತು ಚೀನಾದ ಧ್ವಜವನ್ನು ಪ್ರದರ್ಶಿಸಿದ್ದಾರೆ.

ಡೆಮ್ಚುಕ್​ ಪ್ರದೇಶದ ಹಲವು ಹಳ್ಳಿಗಳಲ್ಲಿ ಜನರು ದಲೈ ಲಾಮಾರ ಜನ್ಮದಿನ ಆಚರಿಸುತ್ತಿದ್ದರು. ಆ ವೇಳೆ ಒಟ್ಟು 5 ವಾಹನಗಳಲ್ಲಿ ಆಗಮಿಸಿದ ಚೀನಾ ಸೈನಿಕರು ಮತ್ತೊಂದಷ್ಟು ಮಂದಿ ನಾಗರಿಕರು ಹಳ್ಳಿಗಳ ಸಮುದಾಯ ಕೇಂದ್ರದ ಬಳಿ ಈ ಬ್ಯಾನರ್​, ಧ್ವಜಗಳನ್ನು ಪ್ರದರ್ಶಿಸಿದ್ದಾರೆ. ದಲೈ ಲಾಮಾ ಹುಟ್ಟುಹಬ್ಬಕ್ಕೆ ಚೀನಾದ ಸೈನಿಕರು ಅಡಚಣೆ ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಜುಲೈ 6ರಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹುಟ್ಟುಹಬ್ಬ ಇತ್ತು. ಹೀಗಾಗಿ ಲಡಾಖ್​​ನ ಹಲವು ಹಳ್ಳಿಗಳ ಜನರು ಅದನ್ನು ಪ್ರತಿವರ್ಷದಂತೆ ಸಂಭ್ರಮದಿಂದ ಆಚರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ಅಂದು ಟ್ವೀಟ್ ಮಾಡಿ ದಲೈ ಲಾಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಾನು ಫೋನಿನಲ್ಲಿ ದಲೈ ಲಾಮಾ ಅವರೊಂದಿಗೆ ಮಾತನಾಡಿ ಶುಭ ಹಾರೈಸಿದ್ದೇನೆ. ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಈ ಮೂಲಕ ತಾವು ದಲೈ ಲಾಮಾ ಅವರೊಂದಿಗೆ ಮಾತುಕತೆ ನಡೆಸುವದನ್ನು ಇದೇ ಮೊದಲ ಬಾರಿಗೆ ಬಹಿರಂಗ ಪಡಿಸಿದ್ದಾರೆ.

ಭಾರತ ಮತ್ತು ಚೀನಾ ನಡುವೆ ಕಳೆದ ವರ್ಷ ಏಪ್ರಿಲ್​​ ತಿಂಗಳಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸಂಘರ್ಷ ಏರ್ಪಡುತ್ತಲೇ ಇದೆ. ಅದರಲ್ಲೂ ಚೀನಾದ ಸೈನಿಕರ ದಾಳಿಯಲ್ಲಿ ಭಾರತ 20 ಯೋಧರು ಹುತಾತ್ಮರಾದ ನಂತರ ಈ ಸಂಘರ್ಷ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಎರಡೂ ದೇಶಗಳ ನಡುವೆ ಹಲವು ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿದ್ದರೂ ಒಂದಲ್ಲ ಒಂದು ಹಂತದಲ್ಲಿ ಮತ್ತೆ ಸಂಘರ್ಷ ಏರ್ಪಡುತ್ತಿದೆ.

ಇದನ್ನೂ ಓದಿ: Copa America 2021: ‘ದೇವರು ಈ ಕ್ಷಣವನ್ನು ನನಗಾಗಿ ಕಾಯ್ದಿರಿಸಿದ್ದ ಅಂತ ಕಾಣುತ್ತೆ,’ ಎಂದು ಉದ್ಗರಿಸಿದ ಲಿಯೊನೆಲ್ ಮೆಸ್ಸಿ

Chinese soldiers object to Dalai Lama s birthday celebration in Ladakh Demchuk

ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ