Copa America 2021: ‘ದೇವರು ಈ ಕ್ಷಣವನ್ನು ನನಗಾಗಿ ಕಾಯ್ದಿರಿಸಿದ್ದ ಅಂತ ಕಾಣುತ್ತೆ,’ ಎಂದು ಉದ್ಗರಿಸಿದ ಲಿಯೊನೆಲ್ ಮೆಸ್ಸಿ

ಕೋಪಾ ಅಮೇರಿಕಾ ಕಪ್ ಎತ್ತಿಕೊಂಡ ನಂತರ ಅವರು ಮಾಡಿದ ಮತ್ತೊಂದು ಕೆಲಸವೆಂದರೆ ತಮ್ಮ ಕುಟುಂಬಕ್ಕೆ ವಿಡಿಯೊ ಕಾಲ್ ಮಾಡಿ ಕಪ್ ಮತ್ತು ತಮ್ಮ ಕೊರಳಲ್ಲಿದ್ದ ಚಿನ್ನದ ಮೆಡಲ್ ತೋರಿಸಿದ್ದು! ಸಾಕರ್ ಲಿವಿಂಗ್ ಲೆಜೆಂಡ್ ಅಂತ ಕರೆಸಿಕೊಳ್ಳುವ ಅವರ ಮುಂದಿನ ಗುರಿ ಮುಂದಿನ ವರ್ಷ ಕತಾರ್​ನಲ್ಲಿ ನಡೆಯುವ ಫಿಫಾ ವಿಶ್ವಕಪ್ ಆಗಿದೆ.

Copa America 2021: ‘ದೇವರು ಈ ಕ್ಷಣವನ್ನು ನನಗಾಗಿ ಕಾಯ್ದಿರಿಸಿದ್ದ ಅಂತ ಕಾಣುತ್ತೆ,’ ಎಂದು ಉದ್ಗರಿಸಿದ ಲಿಯೊನೆಲ್ ಮೆಸ್ಸಿ
ಇನ್ನು ಪ್ರಸ್ತುತ ಫುಟ್​ಬಾಲ್​ ಅಂಗಳದಲ್ಲಿ ಕಣಕ್ಕಿಳಿಯುವವರಲ್ಲಿ 100 ಗೋಲು ದಾಖಲಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ರೊನಾಲ್ಡೊಗೆ ಸಲ್ಲುತ್ತದೆ. ಈ ಪಟ್ಟಿಯಲ್ಲಿ ಮತ್ತೋರ್ವ ಖ್ಯಾತ ಆಟಗಾರ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 8ನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಇದುವರೆಗೆ 151 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು 76 ಗೋಲು ದಾಖಲಿಸಿದ್ದಾರೆ.
Follow us
TV9 Web
| Updated By: Digi Tech Desk

Updated on:Jul 12, 2021 | 5:35 PM

ಅರ್ಜೆಂಟೀನಾದಲ್ಲಿ ಸಂಭ್ರಮಾಚರಣೆಗಳು ನಿಲ್ಲುವ ಲಕ್ಷಣಗಳಿಲ್ಲ. ಅದು ಸ್ವಾಭಾವಿಕವೂ ಹೌದು. ಫುಟ್ಬಾಲ್ ಹುಚ್ಚಿನ ಈ ದಕ್ಷಿಣ ಅಮೇರಿಕ ರಾಷ್ಟ್ರವು 28 ವರ್ಷಗಳ ನಂತರ ಕೋಪಾ ಅಮೇರಿಕ ಟ್ರೋಫಿಯನ್ನು ಗೆದ್ದಿದೆ. ಲೆಜೆಂಡರಿ ಡಿಯಾಗೋ ಮರಡೊನ ನಂತರ ಅರ್ಜೇಂಟೀನಾದ ಸಾಕರ್ ಸೂಪರ್ ಸ್ಟಾರ್ ಲಿಯೋನಿಲ್ ಮೆಸ್ಸಿ ಸುಮಾರು ಒಂದೂವರೆ ದಶಕಗಳಿಂದ ವಿಶ್ವದ ಶ್ರೇಷ್ಠ ಆಟಗಾರನೆನಿಸಿಕೊಂಡಿದ್ದರೂ ತನ್ನ ದೇಶಕ್ಕೆ ಫೀಫಾ ವಿಶ್ವಕಪ್ ಸೇರಿದಂತೆ ಯಾವುದೇ ಪ್ರಮುಖ ಸಾಕರ್ ಟೂರ್ನಿ ಗೆದ್ದು ಕೊಡುವುದು ಸಾಧ್ಯವಾಗಿರಲಿಲ್ಲ. ಆದರೆ, ಶನಿವಾರ ಬ್ರೆಜಿಲ್ ವಿರುದ್ಧ ರಿಯೋ ಡಿ ಜನೆರೋದ ಮರಕಾನ ಸ್ಟೇಡಿಯಂನಲ್ಲಿ ಅರ್ಜೇಟೀನಾವನ್ನು 1-0 ಗೆಲುವಿಗೆ ಮುನ್ನಡೆಸುವ ಮೂಲಕ ಮೆಸ್ಸಿ ತಮ್ಮ ವೃತ್ತಿಬದುಕಿನ ಬಹುದೊಡ್ಡ ಆಸೆಯನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ 4 ಗೋಲು ಬಾರಿಸಿದ್ದೂ ಅಲ್ಲದೆ ಇನ್ನೈದು ಗೋಲು ಗಳಿಕೆಗೆ ನೆರವಾದ ಮೆಸ್ಸಿ ನಿಸ್ಸಂದೇಹವಾಗಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರನಾಗಿದ್ದರು. ಅಂದಹಾಗೆ, ಸದರಿ ಪಂದ್ಯದಲ್ಲಿ ಆಡುವ ಮೂಲಕ ಅವರು 151 ಅಂತರರಾಷ್ಟ್ರೀಯ ಗೇಮ್​ಗಳನ್ನು ಆಡಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

‘ರಾಷ್ಟ್ರೀಯ ತಂಡಕ್ಕೆ ಇದುವರೆಗೆ ಯಾವ ಸಾಧನೆಯನ್ನೂ ಮಾಡದ ಕಳಂಕದಿಂದ ನಾನು ಹೊರ ಬರಬೇಕಿತ್ತು,’ ಎಂದು ಬ್ರೆಜಿಲ್ ತಂಡವನ್ನು ಸೋಲಿಸಿದ ನಂತರ ತಮ್ಮ ಜೊತೆ ಆಟಗಾರರೊಂದಿಗೆ ಸಂಭ್ರಮ ಆಚರಿಸುತ್ತಾ ಮೆಸ್ಸಿ ಹೇಳಿದರು. ಪಂದ್ಯ ಮುಗಿಯಿತೆಂದು ಸೂಚಿಸುವ ವಿಶಲ್ ಅನ್ನು ರೆಫರಿ ಊದಿದ ತಕ್ಷಣ ಮೊಣಕಾಲೂರಿ ಕುಳಿತ ಮೆಸ್ಸಿ ಎರಡೂ ಕೈಗಳಿಂದ ತಮ್ಮ ಮುಖ ಮುಚ್ಚಿಕೊಂಡರು.

ಕೋಪಾ ಅಮೇರಿಕಾ ಕಪ್ ಎತ್ತಿಕೊಂಡ ನಂತರ ಅವರು ಮಾಡಿದ ಮತ್ತೊಂದು ಕೆಲಸವೆಂದರೆ ತಮ್ಮ ಕುಟುಂಬಕ್ಕೆ ವಿಡಿಯೊ ಕಾಲ್ ಮಾಡಿ ಕಪ್ ಮತ್ತು ತಮ್ಮ ಕೊರಳಲ್ಲಿದ್ದ ಚಿನ್ನದ ಮೆಡಲ್ ತೋರಿಸಿದ್ದು! ಸಾಕರ್ ಲಿವಿಂಗ್ ಲೆಜೆಂಡ್ ಅಂತ ಕರೆಸಿಕೊಳ್ಳುವ ಅವರ ಮುಂದಿನ ಗುರಿ ಮುಂದಿನ ವರ್ಷ ಕತಾರ್​ನಲ್ಲಿ ನಡೆಯುವ ಫಿಫಾ ವಿಶ್ವಕಪ್ ಆಗಿದೆ. 1986 ರಲ್ಲಿ ಮರಡೋನ ನೇತೃತ್ವದ ಅರ್ಜೆಂಟೀನಾ ವಿಶ್ವ ಚಾಂಪಿಯನ್​ಗಳಾದ ನಂತರ ಆ ಸಾಧನೆ ಇದುವರೆಗೆ ಪುನರಾವರ್ತನೆಗೊಂಡಿಲ್ಲ.

2005 ರಲ್ಲಿ ಅಂಡರ್-20 ವಿಶ್ವಕಪ್ ಮತ್ತು 2008 ಬೀಜಿಂಗ್ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು ಬಿಟ್ಟರೆ, ಮೆಸ್ಸಿ ತಮ್ಮ ದೇಶಕ್ಕೆ ಮೇಜರ್ ಟೂರ್ನಿಯೊಂದನ್ನು ಗೆದ್ದಿರಲಿಲ್ಲ. 2006 ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡದ ಭಾಗವಾಗಿದ್ದ ಅವರು ತಮ್ಮ ತಂಡ ಕಾರ್ಟರ್​ ಫೈನಲ್ ಹಂತದಲ್ಲೇ ನಿರ್ಗಮಿಸಿದಾಗ ಹತಾಷರಾಗಿದ್ದರು. ಮರುವರ್ಷದ ಕೋಪಾ ಅಮೇರಿಕ ಟೂರ್ನಿಯ ಫೈನಲ್​ನಲ್ಲಿ ಬ್ರೆಜಿಲ್ ತಂಡವು ಅರ್ಜೆಂಟೀನಾವನ್ನು 3-0 ಅಂತರದಿಂದ ಸೋಲಿಸಿದಾ ಅವರ ಹತಾಷೆ ಇನ್ನಷ್ಟು ಹೆಚ್ಚಿತ್ತು.

2014 ವಿಶ್ವಕಪ್​ನಲ್ಲಿ ಮೆಸ್ಸಿ ತಮ್ಮ ದೇಶಕ್ಕೆ ವಿಶ್ವಕಪ್​ ಗೆದ್ದುಕೊಡುವ ಹೊಸ್ತಿಲವರೆಗೆ ಹೋಗಿದ್ದರು. ಆದರೆ ಜರ್ಮನಿ ವಿರುದ್ಧ 0-1 ಅಂತದಿಂದ ಸೋತಾಗ ಅವರು ಅಕ್ಷರಶಃ ಹತಾಷೆಯ ಮಡುವಿನಲ್ಲಿ ಮುಳುಗಿದರು. ವೈಯಕ್ತಿಕವಾಗಿ ಅವರು ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿ ಗಿಟ್ಟಿಸಿದರೂ ಅದು ಅವರಿಗೆ ಸಂತೋಷ ನೀಡಿರಲಿಲ್ಲ.

ಆದರೆ ತಮ್ಮ ಬಾರ್ಸಿಲೋನಾ ಕ್ಲಬ್​ಗೆ ಅವರ ಚಾಂಪಿಯನ್ ಪ್ರದರ್ಶನಗಳು ಯಾವತ್ತೂ ನಿಂತಿಲ್ಲ. 2015 ಮತ್ತು 2016ರಲ್ಲಿ ಕೋಪಾ ಆಮೆರಿಕಾ ಟೂರ್ನಿಯಲ್ಲಿ ಅರ್ಜೆಂಟೀನಾವನ್ನು ಫೈನಲ್​ವರಗೆ ಕೊಂಡೊಯ್ದಿದ್ದ ಮೆಸ್ಸಿಗೆ ಎರಡು ಬಾರಿಯೂ ಚಿಲಿ ಮುಳುವಾಗಿತ್ತು. ಈ ಫೈನಲ್​ಗಳು ಪೆನಾಲ್ಟಿ ಶೂಟ್ಔಟ್​ ಮೂಲಕ ಫಲಿತಾಂಶ ಕಂಡಿದ್ದವು.

2016 ರ ಸೋಲು ಅವರನ್ನು ಎಷ್ಟು ಕಂಗೆಡಿಸಿತ್ತೆಂದರೆ, ಮಾಧ್ಯಮದವರಿಗೆ, ‘ಇನ್ನು ನಾನು ರಾಷ್ಟ್ರೀಯ ತಂಡಕ್ಕೆ ಆಡಲಾರೆ. ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆಲ್ಲವುದು ಪ್ರಾಯಶಃ ನನ್ನಿಂದಾಗದು,’ ಎಂದು ಹೇಳಿದ್ದರು. ಆದರೆ, ಅರ್ಜೆಂಟೀನಾಗೆ ಆಡುವುದನ್ನು ಮುಂದುವರಿಸಲು ಅವರ ಮನವೊಲಿಸಲಾಯಿತು.

2019ರ ಕೋಪಾ ಅಮೇರಿಕಾ ಟೂರ್ನಿಯಲ್ಲಿ ಮೆಸ್ಸಿ ಯುರೋಪಿಯನ್ ಆಟಗಾರರಂತೆ ಹೆಚ್ಚು ಆಕ್ರಮಣಕಾರಿ ಫುಟ್ಬಾಲ್ ಆಡಲಾರಂಭಿಸಿದರು. ಆದರೂ ಪ್ರಶಸ್ತಿ ದಕ್ಕಿರಲಿಲ್ಲ. ಲಿಯೊನೆಲ್ ಸ್ಕಲೋನಿ ಕೋಚ್ ಆಗಿರುವ ಈಗಿನ ಅರ್ಜೆಂಟೀನಾ ತಂಡ ಯುವ ಆಟಗಾರರಿಂದ ಕೂಡಿದೆ. ಸ್ಕಲೋನಿ ಮತ್ತು ಈ ಆಟಗಾರರು, 34 ವರ್ಷ ವಯಸ್ಸಿನ ಮೆಸ್ಸಿ ತಮ್ಮ ಸಂಪೂರ್ಣ ಸಾಮರ್ಥ್ಯ ಒರೆಗೆ ಹಚ್ಚುವಂತೆ ಮಾಡಿದರು. ಅವರ ವೃತ್ತಿ ಬದುಕಿನ ಅತಿದೊಡ್ಡ ಕೊರತೆ ಈಗ ನೀಗಿದೆ.

View this post on Instagram

A post shared by Leo Messi (@leomessi)

ಅರ್ಜೆಂಟೀನಾದ ಗೆಲುವನ್ನು ಮೆಸ್ಸಿ ‘ಸೊಬಗಿನ ಹುಚ್ಚುತನ’ ಎಂದ ಬಣ್ಣಿಸಿದ್ದಾರೆ. ತಮ್ಮ ಇನ್ಸ್​ಟಾಗ್ರಾಮ್ ಪೋಸ್ಟ್ ಒಂದರಲ್ಲಿ, ‘ಇದು ನಂಬಲಸದಳ! ದೇವರಿಗೆ ಕೃತಜ್ಞತೆಗಳು, ನಾವೀಗ ಚಾಂಪಿಯನ್​ಗಳು,’ ಎಂದು ಅವರು ಬರೆದುಕೊಂಡಿದ್ದಾರೆ. ಅರ್ಜೆಂಟೀನಾದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರು, ‘ಮೆಸ್ಸಿ ಈ ಟ್ರೋಫಿ ಗೆಲ್ಲಲು ಅತ್ಯಂತ ಅರ್ಹರಾಗಿದ್ದರು,’ ಎಂದು ಹೇಳಿದ್ದಾರೆ.

ನಂತರ ನಡೆದ ಒಂದು ಸುದ್ದಿ ಗೋಷ್ಟಿಯಲ್ಲಿ ಮೆಸ್ಸಿ,‘ ಗೆಲುವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಹಿಂದೆ ನನಗೆ ದುಃಖವಾಗಿದ್ದು ನಿಜ; ಆದರೆ ಮುಂದೊಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿತ್ತು. ಬ್ರೆಜಿಲ್ ವಿರುದ್ಧ ಅವರ ದೇಶದಲ್ಲೇ ಗೆಲ್ಲುವುದು, ಪ್ರಾಯಶಃ ದೇವರು ನನಗಾಗಿ ಈ ಕ್ಷಣವನ್ನು ಕಾಯ್ದಿರಿಸಿದ್ದ ಎಂದು ಭಾವಿಸುತ್ತೇನೆ,’ ಎಂದು ಹೇಳಿದರು.

ಇದನ್ನೂ ಓದಿ: Copa America Final: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ

Published On - 5:03 pm, Mon, 12 July 21

ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು