ಮೋದಿ ನೇತೃತ್ವದಲ್ಲಿ ಭಾರತದಲ್ಲಿನ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಚೀನಾ ಮಾಧ್ಯಮ

ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ ಅಸಮತೋಲನವನ್ನು ಚರ್ಚಿಸುವಾಗ, ಭಾರತೀಯ ಪ್ರತಿನಿಧಿಗಳು ವ್ಯಾಪಾರದ ಅಸಮತೋಲನವನ್ನು ಕಡಿಮೆ ಮಾಡಲು ಚೀನಾದ ಕ್ರಮಗಳ ಮೇಲೆ ಪ್ರಾಥಮಿಕವಾಗಿ ಗಮನಹರಿಸುತ್ತಿದ್ದರು. ಆದರೆ ಈಗ ಅವರು ಭಾರತದ ರಫ್ತು ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಗ್ಲೋಬಲ್ ಟೈಮ್ಸ್‌ನಲ್ಲಿನ ಲೇಖನದಲ್ಲಿ ಹೇಳಿದೆ.

ಮೋದಿ ನೇತೃತ್ವದಲ್ಲಿ ಭಾರತದಲ್ಲಿನ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಚೀನಾ ಮಾಧ್ಯಮ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Jan 04, 2024 | 9:06 PM

ದೆಹಲಿ ಜನವರಿ 04: ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ನೇತೃತ್ವದಲ್ಲಿ ಆರ್ಥಿಕ, ಸಾಮಾಜಿಕ ಆಡಳಿತ ಮತ್ತು ವಿದೇಶಾಂಗ ನೀತಿಯ ಕ್ಷೇತ್ರಗಳಲ್ಲಿ ಭಾರತದ ಮಹತ್ವದ ಪ್ರಗತಿಯನ್ನು ಶ್ಲಾಘಿಸಿರುವ ಚೀನಾದ (China) ಗ್ಲೋಬಲ್ ಟೈಮ್ಸ್‌ನಲ್ಲಿನ (Global Times) ಲೇಖನವು “ಭಾರತ್ ನಿರೂಪಣೆ” ಅನ್ನು ರಚಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಭಾರತವು ಹೆಚ್ಚು ಹೆಚ್ಚು ಕಾರ್ಯತಂತ್ರವಾಗಿ ಆತ್ಮವಿಶ್ವಾಸ ಮತ್ತು ಕ್ರಿಯಾಶೀಲತೆ ಹೊಂದಿದೆ ಎಂದು ಹೇಳಿದೆ. ಚೀನಾದ ಪ್ರಮುಖ ಮಾಧ್ಯಮವಾದ ಗ್ಲೋಬಲ್ ಟೈಮ್ಸ್, ಶಾಂಘೈನ ಫುಡಾನ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ನಿರ್ದೇಶಕ ಜಾಂಗ್ ಜಿಯಾಡಾಂಗ್ ಬರೆದ ಲೇಖನವನ್ನು ಪ್ರಕಟಿಸಿದ್ದು , ಇದು ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸುತ್ತದೆ.

ಇದು ಭಾರತದ ದೃಢವಾದ ಆರ್ಥಿಕ ಬೆಳವಣಿಗೆ, ನಗರ ಆಡಳಿತದಲ್ಲಿನ ಸುಧಾರಣೆಗಳು ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಕಡೆಗೆ, ವಿಶೇಷವಾಗಿ ಚೀನಾದೊಂದಿಗಿನ ವರ್ತನೆಯ ಬದಲಾವಣೆಯನ್ನು ಅಂಗೀಕರಿಸುತ್ತದೆ. ಉದಾಹರಣೆಗೆ, ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ ಅಸಮತೋಲನವನ್ನು ಚರ್ಚಿಸುವಾಗ, ಭಾರತೀಯ ಪ್ರತಿನಿಧಿಗಳು ವ್ಯಾಪಾರದ ಅಸಮತೋಲನವನ್ನು ಕಡಿಮೆ ಮಾಡಲು ಚೀನಾದ ಕ್ರಮಗಳ ಮೇಲೆ ಪ್ರಾಥಮಿಕವಾಗಿ ಗಮನಹರಿಸುತ್ತಿದ್ದರು. ಆದರೆ ಈಗ ಅವರು ಭಾರತದ ರಫ್ತು ಸಾಮರ್ಥ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಜಾಂಗ್ ಲೇಖನದಲ್ಲಿ ಹೇಳಿದ್ದಾರೆ.

ಕ್ಷಿಪ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ, ಭಾರತವು “ಭಾರತ್ ನಿರೂಪಣೆ” ಯನ್ನು ರಚಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಕಾರ್ಯತಂತ್ರವಾಗಿ ಆತ್ಮವಿಶ್ವಾಸ ಮತ್ತು ಹೆಚ್ಚು ಕ್ರಿಯಾಶೀಲವಾಗಿದೆ ಎಂದು ಲೇಖನ ಹೇಳಿದೆ.

ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ, ಭಾರತವು ಪಶ್ಚಿಮದೊಂದಿಗಿನ ತನ್ನ ಪ್ರಜಾಸತ್ತಾತ್ಮಕ ಒಮ್ಮತವನ್ನು ಒತ್ತಿಹೇಳುವ ಮೂಲಕ ಪ್ರಜಾಸತ್ತಾತ್ಮಕ ರಾಜಕೀಯದ ‘ಭಾರತೀಯ ವೈಶಿಷ್ಟ್ಯ’ವನ್ನು ಎತ್ತಿ ಹಿಡಿಯುವತ್ತ ಸಾಗಿದೆ. ಪ್ರಸ್ತುತ, ಪ್ರಜಾಸತ್ತಾತ್ಮಕ ರಾಜಕೀಯದ ಭಾರತೀಯ ಮೂಲದ ಮೇಲೆ ಇನ್ನೂ ಹೆಚ್ಚಿನ ಒತ್ತು ನೀಡಲಾಗಿದೆ ಲೇಖನದಲ್ಲಿ ಹೇಳಿದೆ. ಜನವರಿ 2ರಂದು ಈ ಲೇಖನ ಪ್ರಕಟವಾಗಿದೆ.

ಈ ಬದಲಾವಣೆಯು ತನ್ನ ಐತಿಹಾಸಿಕ ವಸಾಹತುಶಾಹಿ ನೆರಳಿನಿಂದ ತಪ್ಪಿಸಿಕೊಳ್ಳಲು ಮತ್ತು ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ “ವಿಶ್ವ ಮಾರ್ಗದರ್ಶಕ” ವಾಗಿ ಕಾರ್ಯನಿರ್ವಹಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದು ಲೇಖಕರು ಪ್ರತಿಪಾದಿಸಿದ್ದಾರೆ.

ಇದಲ್ಲದೆ, ಲೇಖನವು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿಯ ಕಾರ್ಯತಂತ್ರವನ್ನು ಶ್ಲಾಘಿಸಿದೆ. ಇದು ರಾಷ್ಟ್ರದ ಬಹು-ಜೋಡಣೆ ವಿಧಾನ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಸೂಕ್ಷ್ಮವಾದ ನಿಲುವನ್ನು ಪ್ರದರ್ಶಿಸುವಾಗ ಯುಎಸ್, ಜಪಾನ್ ಮತ್ತು ರಷ್ಯಾದಂತಹ ಪ್ರಮುಖ ಜಾಗತಿಕ ಶಕ್ತಿಗಳೊಂದಿಗೆ ಸಂಬಂಧಗಳನ್ನು ಬಲಪಡಿಸುವುದನ್ನು ಹೈಲೈಟ್ ಮಾಡಿದೆ.

ವಿದೇಶಾಂಗ ನೀತಿಯಲ್ಲಿ ಭಾರತದ ಕಾರ್ಯತಂತ್ರದ ಚಿಂತನೆಯು ಮತ್ತೊಂದು ಬದಲಾವಣೆಗೆ ಒಳಗಾಗಿದ್ದು ಸ್ಪಷ್ಟವಾಗಿ ದೊಡ್ಡ ಶಕ್ತಿಯ ತಂತ್ರದತ್ತ ಸಾಗುತ್ತಿದೆ ಎಂದು ಲೇಖನವು ಗಮನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ, ಅವರು ಬಹು-ಜೋಡಣೆ ತಂತ್ರವನ್ನು ಪ್ರತಿಪಾದಿಸಿದ್ದಾರೆ, ಯುಎಸ್, ಜಪಾನ್, ರಷ್ಯಾ ಮತ್ತು ಇತರ ದೇಶಗಳು ಮತ್ತು ಪ್ರಾದೇಶಿಕ ಸಂಸ್ಥೆಗಳೊಂದಿಗೆ ಭಾರತದ ಸಂಬಂಧಗಳನ್ನು ಉತ್ತೇಜಿಸುತ್ತಿದ್ದಾರೆ” ಎಂದು ಜಾಂಗ್ ಲೇಖನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಸ್ನೋರ್ಕೆಲ್ಲಿಂಗ್ ನಡೆಸಿ ಮತ್ತೊಮ್ಮೆ ತಮ್ಮ ಸಾಹಸಮಯ ಪ್ರವೃತ್ತಿ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ

ಭಾರತವು ಯಾವಾಗಲೂ ತನ್ನನ್ನು ತಾನು ವಿಶ್ವಶಕ್ತಿ ಎಂದು ಪರಿಗಣಿಸಿದೆ. ಆದಾಗ್ಯೂ, ಭಾರತವು ಬಹು-ಸಮತೋಲನದಿಂದ ಬಹು-ಹೊಂದಾಣಿಕೆಗೆ ಬದಲಾಗಿ  ಕೇವಲ 10 ವರ್ಷಗಳಿಗಿಂತಲೂ ಕಡಿಮೆ ವರ್ಷ ಆಗಿದ್ದು. ಈಗ ಅದು ಬಹುಧ್ರುವ ಜಗತ್ತಿನಲ್ಲಿ ಧ್ರುವವಾಗುವ ತಂತ್ರದತ್ತ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಅಂತಹ ಬದಲಾವಣೆಗಳ ವೇಗವು ಅಂತರರಾಷ್ಟ್ರೀಯ ಸಂಬಂಧಗಳ ಇತಿಹಾಸದಲ್ಲಿ ಅಪರೂಪವಾಗಿ ಕಂಡುಬರುತ್ತದೆ. ಪರಿವರ್ತಿತ, ಬಲವಾದ ಮತ್ತು ಹೆಚ್ಚು ದೃಢವಾದ ಭಾರತವು ಅನೇಕ ದೇಶಗಳು ಪರಿಗಣಿಸಬೇಕಾದ ಹೊಸ ಭೌಗೋಳಿಕ ರಾಜಕೀಯ ಅಂಶವಾಗಿ ಮಾರ್ಪಟ್ಟಿದೆ ಎಂದು ಲೇಖನದಲ್ಲಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ