ದೆಹಲಿ ಮೊಹಲ್ಲಾ ಕ್ಲಿನಿಕ್​​ಗಳಲ್ಲಿ ನಕಲಿ ರೋಗನಿರ್ಣಯ ಪರೀಕ್ಷೆ?; ಸಿಬಿಐ ತನಿಖೆಗೆ ಆದೇಶ

ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಮೇಲೆ ಹೊರಿಸಲಾಗಿರುವ ಹೊಸ ಆಪಾದಿತ ಹಗರಣದ ಕುರಿತು ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಮೊಹಲ್ಲಾ ಕ್ಲಿನಿಕ್ ಎಂದು ಕರೆಯಲ್ಪಡುವವು ರೋಗಶಾಸ್ತ್ರೀಯ ಪರೀಕ್ಷೆಗೆ ಸೌಲಭ್ಯವನ್ನು ಒದಗಿಸಿದೆ. ವಿಜಿಲೆನ್ಸ್ ವರದಿಗಳು ಮತ್ತು ಇಲಾಖಾ ಸಂಶೋಧನೆಗಳ ಆಧಾರದ ಮೇಲೆ, ಪರೀಕ್ಷೆಗಳು ಈಗ ತನಿಖೆಯಲ್ಲಿವೆ ಎಂದು ಹೇಳಿದ್ದಾರೆ.

ದೆಹಲಿ ಮೊಹಲ್ಲಾ ಕ್ಲಿನಿಕ್​​ಗಳಲ್ಲಿ ನಕಲಿ ರೋಗನಿರ್ಣಯ ಪರೀಕ್ಷೆ?; ಸಿಬಿಐ ತನಿಖೆಗೆ ಆದೇಶ
ಮೊಹಲ್ಲಾ ಕ್ಲಿನಿಕ್
Follow us
ರಶ್ಮಿ ಕಲ್ಲಕಟ್ಟ
|

Updated on:Jan 04, 2024 | 6:42 PM

ದೆಹಲಿ ಜನವರಿ 04: ದೆಹಲಿ (Delhi) ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್​​ಗಳಲ್ಲಿ (mohalla clinics) ನಕಲಿ ರೋಗನಿರ್ಣಯ ಪರೀಕ್ಷೆ ನಡೆಯುತ್ತಿದೆ ಎಂಬ ಆರೋಪಗಳ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (VK Saxena) ಅವರು ಗುರುವಾರ ಕೇಂದ್ರೀಯ ತನಿಖಾ ಸಂಸ್ಥೆ (CBI) ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ವರದಿಗಳ ಪ್ರಕಾರ, ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲು ರೋಗಿಗಳ ಪ್ರವೇಶವನ್ನು ಗುರುತಿಸಲು ನಕಲಿ ಮೊಬೈಲ್ ಸಂಖ್ಯೆಗಳನ್ನು ಬಳಸಲಾಗಿದೆ. ಕೆಲವು ಜೀವರಕ್ಷಕ ಔಷಧಗಳು ಸೇರಿದಂತೆ ನಕಲಿ ಮತ್ತು ಪ್ರಮಾಣಿತವಲ್ಲದ ಔಷಧಗಳ ಸಂಗ್ರಹಣೆ ಮತ್ತು ಪೂರೈಕೆಯ ಬಗ್ಗೆ ಇದೇ ರೀತಿಯ ತನಿಖೆಗೆ ರಾಜ್ಯಪಾಲರು ಆದೇಶಿಸಿದ ಕೆಲವು ದಿನಗಳ ನಂತರ ಇದು ಬಂದಿದೆ.

ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಮೇಲೆ ಹೊರಿಸಲಾಗಿರುವ ಹೊಸ ಆಪಾದಿತ ಹಗರಣದ ಕುರಿತು ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಮೊಹಲ್ಲಾ ಕ್ಲಿನಿಕ್ ಎಂದು ಕರೆಯಲ್ಪಡುವವು ರೋಗಶಾಸ್ತ್ರೀಯ ಪರೀಕ್ಷೆಗೆ ಸೌಲಭ್ಯವನ್ನು ಒದಗಿಸಿದೆ. ವಿಜಿಲೆನ್ಸ್ ವರದಿಗಳು ಮತ್ತು ಇಲಾಖಾ ಸಂಶೋಧನೆಗಳ ಆಧಾರದ ಮೇಲೆ, ಪರೀಕ್ಷೆಗಳು ಈಗ ತನಿಖೆಯಲ್ಲಿವೆ. ಒಂದು ದಿನದಲ್ಲಿ, ಚಿಕಿತ್ಸಾಲಯಗಳು ಗರಿಷ್ಠ ಸಂಖ್ಯೆಯ 533 ರೋಗಿಗಳನ್ನು ಪರೀಕ್ಷೆ  ಮಾಡಿವೆ. ಕ್ಲಿನಿಕ್‌ಗಳ ಸಮಯ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ. ಈಗ ಊಹಿಸಿ, ಅವರು 240 ನಿಮಿಷಗಳಲ್ಲಿ 533 ರೋಗಿಗಳನ್ನು ಪರೀಕ್ಷಿಸಿದರೆ, ಅವರು ಕೇವಲ ಅರ್ಧ ನಿಮಿಷಕ್ಕೆ ರೋಗಿಯನ್ನು ನೋಡಿದ್ದಾರೆ ಎಂದರ್ಥ. ಅಮೃತ್ ಕಾಲ್ ಅನ್ನು ಪರಿಚಯಿಸಿದ ನಂತರವೂ, ಸೂಪರ್-ಸ್ಪೆಷಾಲಿಟಿ ಇನ್ಸ್ಟಿಟ್ಯೂಟ್ ಅಥವಾ ಲ್ಯಾಬ್ ಮಾಡುವ ಬದಲು, ರಾಷ್ಟ್ರೀಯ ರಾಜಧಾನಿ ಇನ್ನೂ ಹಳೆಯ ಮೊಹಲ್ಲಾ ಕ್ಲಿನಿಕ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ ಎಂದಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಗಿನ ಆರೋಗ್ಯ ಸಚಿವ ಮನೀಶ್ ಸಿಸೋಡಿಯಾ ಮತ್ತು ಹಾಲಿ ಸಚಿವ ಸೌರಭ್ ಭಾರದ್ವಾಜ್ ಅವರಿಗೆ ಈ ಹಗರಣದ ಬಗ್ಗೆ ತಿಳಿದಿತ್ತು ಎಂದು ಆರೋಪಿಸಿದರು.

ಕೇವಲ 20 ದಿನಗಳ ಹಿಂದೆ, ಅರವಿಂದ್ ಕೇಜ್ರಿವಾಲ್ ಆಳ್ವಿಕೆಯ ದೆಹಲಿ ಸರ್ಕಾರದ ಆಸ್ಪತ್ರೆಗಳಲ್ಲಿ ನಕಲಿ ಮತ್ತು ಕಳಪೆ ಔಷಧಗಳ ವಿತರಣೆಯ ಹಗರಣದ ಬಗ್ಗೆ ದೆಹಲಿ ಮತ್ತು ದೇಶದ ಜನರು ಆಘಾತಕ್ಕೊಳಗಾಗಿದ್ದರು ಎಂಬುದು ಬಹಳ ವಿಷಾದನೀಯ. ಸರ್ಕಾರದ ಆರೋಗ್ಯ ಇಲಾಖೆಯಿಂದ ನೂರಾರು ಕೋಟಿ ಮೌಲ್ಯದ ಮತ್ತೊಂದು ಪೆಥಾಲಜಿ ಟೆಸ್ಟ್ ಹಗರಣ ಬೆಳಕಿಗೆ ಬಂದ ನಂತರ ದೆಹಲಿಯ ಜನರು ನಾಚಿಕೆಪಡುತ್ತಾರೆ ಎಂದು ಅವರು ಹೇಳಿದರು.

ಆಪಾದಿತ ಹಗರಣದ ಕುರಿತು ಎಎಪಿಯ ಪ್ರತಿಕ್ರಿಯೆ

ಏತನ್ಮಧ್ಯೆ, ಕೇಂದ್ರದಿಂದ ನೇಮಕಗೊಂಡ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಡಯಾಗ್ನೋಸ್ಟಿಕ್ ಲ್ಯಾಬ್‌ಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಕೇಜ್ರಿವಾಲ್ ಸರ್ಕಾರ ಹೇಳಿದೆ. ಕೆಲವು ವೈದ್ಯರು ತಮ್ಮ ವಿಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು ಉದ್ಯೋಗಿಗಳಿಗೆ ನೀಡಿದ್ದರು. ಅದರ ಮೂಲಕ ಅವರು ಪ್ರತಿದಿನ ಅಪ್ಲಿಕೇಶನ್‌ನಲ್ಲಿ ತಮ್ಮ ಹಾಜರಾತಿಯನ್ನು ಗುರುತಿಸುತ್ತಿದ್ದರು. ಈ ಪ್ರಕರಣದಲ್ಲಿ, ಏಳು ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ 26 ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಅದು ಮೊಹಲ್ಲಾ ಕ್ಲಿನಿಕ್ ಆಗಿರಲಿ ಅಥವಾ ಔಷಧಿ ಅಂಗಡಿಯಾಗಿರಲಿ, ಯಾರಾದರೂ ತಪ್ಪು ಫೋನ್ ಸಂಖ್ಯೆಯನ್ನು ನೀಡಿದಾಗ, ಪರಿಶೀಲಿಸುವುದು ಅಧಿಕಾರಿಗಳ ಕೆಲ ಎಂದು ಸೌರಭ್ ಭಾರದ್ವಾಜ್ ಹೇಳಿದರು.

ಇದನ್ನೂ ಓದಿ:ನರೇಂದ್ರ ಮೋದಿ ಪುನಃ ಪ್ರಧಾನ ಮಂತ್ರಿಯಾದಾಗ ಭಾರತ ಹಿಂದೂರಾಷ್ಟ್ರವಾಗದಂತೆ ತಡೆಯಲು ಯಾರಿಗೂ ಸಾಧ್ಯವಿಲ್ಲ: ಪ್ರಮೋದ್ ಮುತಾಲಿಕ್ 

ಎಲ್‌ಜಿ ತನಿಖೆ ನಡೆಸುತ್ತಿದ್ದಾರೆ. ಎಎಪಿ ಸರ್ಕಾರವು ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ತೆಗೆದುಹಾಕಲು ಲಿಖಿತವಾಗಿ ಆದೇಶ ನೀಡಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Thu, 4 January 24

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು