Chinese visa case ವೀಸಾ ಹಗರಣ: ಕಾರ್ತಿ ಚಿದಂಬರಂ ಆಪ್ತ ಭಾಸ್ಕರರಾಮನ್​​ಗೆ ಜಾಮೀನು

| Updated By: ರಶ್ಮಿ ಕಲ್ಲಕಟ್ಟ

Updated on: Jun 09, 2022 | 7:12 PM

ಚೀನಾ ವೀಸಾ ಹಗರಣ 2011 ರಲ್ಲಿ ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಅವರ ತಂದೆ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ ನಡೆದಿತ್ತು. ಕಳೆದ ವಾರ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ ನಾಗ್ಪಾಲ್...

Chinese visa case ವೀಸಾ ಹಗರಣ: ಕಾರ್ತಿ ಚಿದಂಬರಂ ಆಪ್ತ ಭಾಸ್ಕರರಾಮನ್​​ಗೆ ಜಾಮೀನು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಚೀನಾದ ಪ್ರಜೆಗಳಿಗೆ ವೀಸಾ ಕೊಡಿಸಿದ ಹಗರಣಕ್ಕೆ (Visa Scam) ಸಂಬಂಧಿಸಿದಂತೆ ಮೇ 19ರಂದು ಸಿಬಿಐ ಬಂಧನಕ್ಕೊಳಗಾಗಿದ್ದ ಎಸ್. ಭಾಸ್ಕರರಾಮನ್ (Bhaskararaman) ಅವರಿಗೆ ದೆಹಲಿ ನ್ಯಾಯಾಲಯ ಇಂದ(ಗುರುವಾರ) ಜಾಮೀನು ನೀಡಿದೆ. ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ (Karti Chidambaram) ಅವರ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ ಭಾಸ್ಕರ ರಾಮನ್. ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಧೀಶರರು ಜಾಮೀನು ಅನುಮತಿಸಿದ್ದಾರೆ. ಚೀನಾ ವೀಸಾ ಹಗರಣ 2011 ರಲ್ಲಿ ಶಿವಗಂಗಾ ಸಂಸದ ಕಾರ್ತಿ ಚಿದಂಬರಂ ಅವರ ತಂದೆ ಪಿ.ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ ನಡೆದಿತ್ತು. ಕಳೆದ ವಾರ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ ನಾಗ್ಪಾಲ್ ಅವರು ಕಾರ್ತಿ ಮತ್ತು ಎಸ್. ಭಾಸ್ಕರ ರಾಮನ್ ಸೇರಿದಂತೆ ಇತರ ಆರೋಪಿಗಳಾದ ತಲ್ವಂಡಿ ಸಾಬೋ ಪವರ್‌ನ ಸಹಾಯಕ ಉಪಾಧ್ಯಕ್ಷ ವಿಕಾಸ್ ಮಖಾರಿಯಾ ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನಿರಾಕರಿಸಿದ್ದರು. ಕಾರ್ತಿ ಅವರು ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಬಾಗಿಲು ತಟ್ಟಿದ್ದು, ಪ್ರಕರಣದ ತೀರ್ಪನ್ನು ಕಾಯ್ದಿರಿಸಲಾಗಿದೆ.

ವಿಚಾರಣಾ ನ್ಯಾಯಾಲಯದಲ್ಲಿ ಕಳೆದ ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು 2011 ರ ಆಪಾದಿತ ವಹಿವಾಟು ಎಂದು ವಾದಿಸಿದ್ದರು. ದೀರ್ಘಾವಧಿಯ ನಂತರ ಇಡಿ ಪ್ರಕರಣವನ್ನು ದಾಖಲಿಸಿದೆ, ಇಷ್ಟು ವರ್ಷಗಳಲ್ಲಿ ಯಾವುದೇ ತನಿಖೆ ನಡೆದಿಲ್ಲ ಎಂದು ತೋರಿಸಿದರು. ಆಪಾದಿತ ವಹಿವಾಟಿನ ಮೌಲ್ಯ 50 ಲಕ್ಷ, ಅದು 1 ಕೋಟಿ ರೂ.ಗಿಂತ ಕಡಿಮೆಯಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬೇಕು ಎಂದು ವಕೀಲರು ವಾದಿಸಿದ್ದಾರೆ.

ಎಫ್ಐಆರ್ ಪ್ರಕಾರ, ಮಾನ್ಸಾ ಮೂಲದ ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ಮಧ್ಯವರ್ತಿಯ ಸಹಾಯವನ್ನು ಪಡೆದುಕೊಂಡಿದೆ ಮತ್ತು ಗಡುವಿನ ಮೊದಲು ಯೋಜನೆಯನ್ನು ಪೂರ್ಣಗೊಳಿಸಲು ಚೀನಾದ ಪ್ರಜೆಗಳಿಗೆ ವೀಸಾಗಳನ್ನು ನೀಡಲು 50 ಲಕ್ಷ ರೂ.ನೀಡಿದೆ. ಮಾನ್ಸಾ ಮೂಲದ ಖಾಸಗಿ ಕಂಪನಿಯಿಂದ ಚೆನ್ನೈನಲ್ಲಿರುವ ಖಾಸಗಿ ವ್ಯಕ್ತಿಗೆ ಮತ್ತು ಮುಂಬೈ ಮೂಲದ ಕಂಪನಿಯೊಂದರ ಮೂಲಕ ಅವರ ಆಪ್ತರಿಗೆ ಲಂಚದ ಪಾವತಿಯನ್ನು ಕನ್ಸಲ್ಟೆನ್ಸಿಗಾಗಿ ಮತ್ತು ಚೀನೀ ವೀಸಾ ಸಂಬಂಧಿತ ಕೆಲಸಗಳಿಗಾಗಿ ಪಾವತಿಸಿದ ಹಣದ ಸುಳ್ಳು ಇನ್ ವಾಯ್ಸ್ ಮಾಡಲಾಗಿದೆ ಎಫ್‌ಐಆರ್​​ನಲ್ಲಿ ಹೇಳಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ