Gyanvapi mosque row ಶಿವನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಎಂಎಲ್​​ಸಿ ವಿರುದ್ಧ ಕೇಸು

ಜ್ಞಾನವಾಪಿ ಮಸೀದಿ ವಿವಾದದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಯಾದವ್ ಅವರು ಭಗವಾನ್ ಶಿವ ಮತ್ತು ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

Gyanvapi mosque row ಶಿವನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಎಂಎಲ್​​ಸಿ ವಿರುದ್ಧ ಕೇಸು
ಲಾಲ್ ಬಿಹಾರಿ ಯಾದವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 09, 2022 | 5:18 PM

ಲಖನೌ: ಶಿವನ ಬಗ್ಗೆ (Lord Shiva) ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ಸಮಾಜವಾದಿ ಪಕ್ಷದ (Samajwadi Party) ಎಂಎಲ್​​ಸಿ ಲಾಲ್ ಬಿಹಾರಿ ಯಾದವ್ (Lal Bihari Yadav) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೊರಾದಾಬಾದ್ ಪ್ರದೇಶದಲ್ಲಿರುವ ಕಾಂಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾದವ್ ವಿರುದ್ಧ ಐಪಿಸಿ 153A ಮತ್ತು 153B ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯಾದವ್ ವಿರುದ್ಧ ಬಜರಂಗ ದಳದ ನಾಯಕರೊಬ್ಬರು ದೂರು ನೀಡಿದ್ದರು. ಜ್ಞಾನವಾಪಿ ಮಸೀದಿ ವಿವಾದದಲ್ಲಿ(Gyanvapi mosque row) ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಯಾದವ್ ಅವರು ಭಗವಾನ್ ಶಿವ ಮತ್ತು ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಜ್ಞಾನವಾಪಿ ಮಸೀದಿಯಲ್ಲಿ ಕಲ್ಲಿನ ತುಂಡೊಂದು ಸಿಕ್ಕಿದೆ. ಅದನ್ನು ಶಿವಲಿಂಗ ಎಂದು ಹೇಗೆ ಹೇಳುತ್ತೀರಿ? ನನಗಿದು ಅರ್ಥವಾಗುತ್ತಿಲ್ಲ. ಶಿವ ಮನುಷ್ಯನೇ ಅಥವಾ ಕಲ್ಲೇ?, ಆದ್ಮಿ ಥಾ  ಯಾ ಪಥ್ಥರ್ ಥಾ?  ಎಂದು ಯಾದವ್ ಕೇಳಿದ್ದಾರೆ. ಹಿಂದೂಪರರು ಜ್ಞಾನಪಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಇದೆ ಎಂದು ವಾದಿಸಿದ್ದು ವಾರಣಾಸಿ ನ್ಯಾಯಾಲಯವು ವಿಡಿಯೊಗ್ರಫಿ ಸರ್ವೇ ನಡೆಸಲು ಆದೇಶಿಸಿತ್ತು. ಭಗವಾನ್ ಶಿವನ ಕುರಿತಾದ ಅವರ ಹೇಳಿಕೆಗಳ ವಿವಾದದ ನಡುವೆ, ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ ಹೊಸದಾಗಿ ಆಯ್ಕೆಯಾದ ವಿರೋಧ ಪಕ್ಷದ ನಾಯಕ ತಮ್ಮ ‘ಆದ್ಮಿ ಯಾ ಪಥ್ಥರ್’ ಹೇಳಿಕೆಯಿಂದ ಹಿಂದೆ ಸರಿಯಲಿಲ್ಲ.

ಟೈಮ್ಸ್ ನೌ ಜೊತೆ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ, ಕಲ್ಲನ್ನು ದೇವರ ರೂಪದಲ್ಲಿ ಮಾಡಲಾಗಿದೆ. ‘ಕಲಾವಿದನೊಬ್ಬ ಕಲ್ಲಿಗೆ ನೀಡುವ ರೂಪ.. ಅದನ್ನೇ ದೇವರೆಂದು ಒಪ್ಪಿಕೊಳ್ಳುತ್ತೇವೆ’ ಎಂದರು.

ಜ್ಞಾನವಾಪಿ ಮಸೀದಿ ವಿವಾದದ ಮಧ್ಯೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವುದು ಅವಿವೇಕದ ಸಂಗತಿ ಎಂದು ಹೇಳಿದ್ದಾರೆ. ಹಿಂದೂಗಳು ತಮ್ಮ ಮುಸ್ಲಿಂ ಸಹೋದರರೊಂದಿಗೆ ಕುಳಿತು ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ
Image
ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ: ಆರ್​ಎಸ್​ಎಸ್​ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಮೋಹನ್ ಭಾಗವತ್
Image
ವಾರಣಾಸಿಯ ಮಸೀದಿ ಸರ್ವೇ ವಿಡಿಯೋ ಮಾಧ್ಯಮಗಳಿಗೆ ಸೋರಿಕೆ: ಮಸೀದಿಯ ಒಳಗೆ ಏನೇನಿದೆ? ಇಲ್ಲಿದೆ ವಿಡಿಯೋ
Image
ಜ್ಞಾನವಾಪಿ ಮಸೀದಿ-ದೇಗುಲ ವಿವಾದದ ಸಮ್ಮುಖದಲ್ಲಿ ಜಗತ್ತಿನಲ್ಲಿ ಇನ್ನೂ ಯಾವೆಲ್ಲಾ ಧರ್ಮ ಸ್ಥಳಗಳ ಮಧ್ಯೆ ಕದನಗಳು ನಡೆಯುತಿವೆ ಗೊತ್ತಾ!?

“ಅಖಂಡ ಭಾರತದ ಇಬ್ಭಾಗವನ್ನು ಹಿಂದೂಗಳು ಒಪ್ಪಿಕೊಂಡಿದ್ದಾರೆ, ಅದು ಮುಸ್ಲಿಂ ರಾಷ್ಟ್ರವಾದ ಪಾಕಿಸ್ತಾನಕ್ಕೆ ದಾರಿ ಮಾಡಿಕೊಟ್ಟಿತು. ಇದರರ್ಥ ಭಾರತದಲ್ಲಿ ಮತ್ತೆ ಉಳಿದುಕೊಂಡಿರುವ ಮತ್ತು ಪಾಕಿಸ್ತಾನವನ್ನು ಆಯ್ಕೆ ಮಾಡದ ಉತ್ತಮ ಸಂಖ್ಯೆಯ ಮುಸ್ಲಿಮರು ನಮ್ಮ ಸಹೋದರರು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ. ದೇಶದ ಜ್ಞಾನವಾಪಿ ಮತ್ತು ಇತರ ಮಸೀದಿಗಳನ್ನು ರಕ್ಷಿಸಲು 1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯನ್ನು ಎತ್ತಿಹಿಡಿಯುವಂತೆ ಜಮಾತ್-ಎ-ಇಸ್ಲಾಮಿ ಹಿಂದ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:17 pm, Thu, 9 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ