ಬಿಹಾರದ ಜನಸಂಖ್ಯೆ ನಿಯಂತ್ರಣ: ಎರಡು ಮಕ್ಕಳನ್ನು ಹೊಂದಿರುವವರಿಗೆ ಬಹುಮಾನ ನೀಡಿ; ನಿತೀಶ್ ಕುಮಾರ್ಗೆ ಬಿಜೆಪಿ ಸಲಹೆ
ಈ ವಿಚಾರವನ್ನು ಸಿಎಂ ಜತೆ ಚರ್ಚಿಸಿದ್ದೀರಾ ಎಂದು ಜೈಸ್ವಾಲ್ ಅವರಲ್ಲಿ ಕೇಳಿದಾಗ “ನಾವು ಅದರ ಬಗ್ಗೆ ಸ್ವಲ್ಪ ಸಮಯದಿಂದ ಮಾತನಾಡುತ್ತಿದ್ದೇವೆ. ಕಾನೂನನ್ನು ಮರೆತು, ಪ್ರೋತ್ಸಾಹ ನೀಡಲಿ. ಬಿಹಾರ ಸರ್ಕಾರವು 10 ನೇ ತರಗತಿಯ ನಂತರದ 12 ನೇ ತರಗತಿಯ ವಿದ್ಯಾರ್ಥಿವೇತನಗಳು...
ಪಟನಾ: ಬಿಹಾರದ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಜನಸಂಖ್ಯಾ ನಿಯಂತ್ರಣದ ಮೇಲೆ ಕಾನೂನನ್ನು ತರುವ ಕೇಂದ್ರದ ಯಾವುದೇ ಪ್ರಯತ್ನವನ್ನು ಸಾರಾಸಗಟಾಗಿ ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಮಿತ್ರಪಕ್ಷ ಬಿಜೆಪಿಯು(BJP) ರಾಜ್ಯವು ಕನಿಷ್ಠ ಕುಟುಂಬ ಯೋಜನೆಯನ್ನು ಪ್ರೋತ್ಸಾಹಿಸುವತ್ತ ಗಮನಹರಿಸಬೇಕು ಎಂದಿದೆ. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಬಿಜೆಪಿಯ ಬಿಹಾರ ಘಟಕದ ಮುಖ್ಯಸ್ಥ ಮತ್ತು ಪಶ್ಚಿಮ ಚಂಪಾರಣ್‌ನ ಸಂಸದ ಸಂಜಯ್ ಜೈಸ್ವಾಲ್, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರದ ದಂಪತಿಗೆ ಪ್ರೋತ್ಸಾಹವನ್ನು ನೀಡುವುದರಿಂದ ರಾಜ್ಯದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂದಿದ್ದಾರೆ. 2011 ರ ಜನಗಣತಿಯ ಮಾಹಿತಿಯ ಪ್ರಕಾರ, ಬಿಹಾರವು 10 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೂರನೇ ರಾಜ್ಯವಾಗಿದೆ. ಇದು ಭಾರತದ ಅತ್ಯಂತ ಜನ ಸಾಂದ್ರತೆ ಇರುವ ರಾಜ್ಯವೂ ಆಗಿದೆ. ಕಡಿಮೆ ಮಕ್ಕಳನ್ನು ಹೊಂದಲು ಪ್ರೋತ್ಸಾಹ ನೀಡುವ ಯೋಜನೆಗಳಲ್ಲಿ ತಿಂಗಳಿಗೆ 25 ಕೆಜಿ ಉಚಿತ ಪಡಿತರವನ್ನು ಒಳಗೊಂಡಿರುತ್ತದೆ. “ಜನಸಂಖ್ಯೆಯು ಬಿಹಾರದ ಸಮಸ್ಯೆಯೇ ಹೊರತು ಭಾರತದಷ್ಟು ಅಲ್ಲ. ಹತ್ತು ವರ್ಷಗಳ ಹಿಂದೆ, ಬಿಹಾರದ ಫಲವಂತಿಕೆ ದರವು 3.4 ಆಗಿತ್ತು, ಅದು ಕೇವಲ 2.96 ಕ್ಕೆ ಇಳಿದಿದೆ. ಉತ್ತರ ಪ್ರದೇಶದಲ್ಲಿ 10 ವರ್ಷಗಳಲ್ಲಿ 3.2 ರಿಂದ 2.4 ರಷ್ಟು ಕಡಿಮೆಯಾಗಿದೆ.
“ಬಿಹಾರ ಸರ್ಕಾರವು ತಮ್ಮ ಶಾಲಾ ಶುಲ್ಕವನ್ನು ಪಾವತಿಸಬಹುದಾದ ಸಾರ್ವಜನಿಕ ಶಾಲೆಗಳಲ್ಲಿ ಸರ್ಕಾರವು (ಇಬ್ಬರು ಮಕ್ಕಳಿಗೆ) ಮೀಸಲಾತಿಯನ್ನು ಒದಗಿಸಬೇಕು ಎಂದಿದ್ದಾರೆ ಜೈಸ್ವಾಲ್.
ಈ ವಿಚಾರವನ್ನು ಸಿಎಂ ಜತೆ ಚರ್ಚಿಸಿದ್ದೀರಾ ಎಂದು ಜೈಸ್ವಾಲ್ ಅವರಲ್ಲಿ ಕೇಳಿದಾಗ “ನಾವು ಅದರ ಬಗ್ಗೆ ಸ್ವಲ್ಪ ಸಮಯದಿಂದ ಮಾತನಾಡುತ್ತಿದ್ದೇವೆ. ಕಾನೂನನ್ನು ಮರೆತು, ಪ್ರೋತ್ಸಾಹ ನೀಡಲಿ. ಬಿಹಾರ ಸರ್ಕಾರವು 10 ನೇ ತರಗತಿಯ ನಂತರದ 12 ನೇ ತರಗತಿಯ ವಿದ್ಯಾರ್ಥಿವೇತನಗಳು, ಸ್ನಾತಕೋತ್ತರ ಪದವಿಯವರೆಗಿನ ಶಾಲಾ ಮತ್ತು ಕಾಲೇಜು ಶುಲ್ಕಗಳ ಮನ್ನಾ ಮುಂತಾದ ವಿವಿಧ ಪ್ರೋತ್ಸಾಹಗಳನ್ನು ನೀಡಬಹುದಾದರೆ, ಜನಸಂಖ್ಯೆಯನ್ನು ನಿಯಂತ್ರಿಸಲು ಯಾಕೆ ಪ್ರೋತ್ಸಾಹ ನೀಡಲ್ಲ? ಎಂದು ಕೇಳಿದ್ದಾರೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್, ರಾಜ್ಯ ಸಚಿವ ನೀರಜ್ ಸಿಂಗ್ ಬಬ್ಲು ಮತ್ತು ಶಾಸಕ ಹರಿಭೂಷಣ್ ಠಾಕೂರ್ ಅವರಂತಹ ಅನೇಕ ಬಿಜೆಪಿ ನಾಯಕರು ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರುವ ಅಗತ್ಯತೆಯ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದಾರೆ.
ಈ ವಾರದ ಆರಂಭದಲ್ಲಿ, ಜನಸಂಖ್ಯೆ ನಿಯಂತ್ರಣದ ಕಾನೂನು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ನಿತೀಶ್ ಹೇಳಿದರು. ಆದರೆ ಹುಡುಗಿಯರು ಮತ್ತು ಮಹಿಳೆಯರಿಗೆ ಶಿಕ್ಷಣ ನೀಡಿದರೆ ಇದು ಫಲವತ್ತತೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಕಾನೂನು ಮಾಡುವುದರಿಂದ ಏನೂ ಆಗುವುದಿಲ್ಲ. ಪ್ರಕೃತಿಯ ಭಾಗವಾಗುವಂತೆ ಕೆಲಸ ಮಾಡಬೇಕು. ಚೀನಾದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ಬಂದ ನಂತರ ಏನಾಯಿತು ಎಂಬುದನ್ನು ಎಲ್ಲರೂ ನೋಡಬೇಕು ಎಂದು ಜನಸಂಖ್ಯೆ ನಿಯಂತ್ರಣಕ್ಕೆ ಕೇಂದ್ರವು ಕಾನೂನು ತರಲು ಮುಂದಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 8:16 pm, Thu, 9 June 22