ಅಯೋಧ್ಯೆಗಿಂತ ದೊಡ್ಡ ರಾಮ ಮಂದಿರವನ್ನು ಸೀತಾಮಾರಿಯಲ್ಲಿ ಕಟ್ಟುತ್ತೇವೆ -ಚಿರಾಗ್​ ಪಾಸ್ವಾನ್​ ಘೋಷಣೆ

|

Updated on: Oct 26, 2020 | 12:22 PM

ಪಾಟ್ನಾ: ಬಿಹಾರದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಚುನಾವಣಾ ಱಲಿಗಳಂತೂ ಆರೋಪ, ಪ್ರತ್ಯಾರೋಪಗಳಿಂದ ತುಂಬಿವೆ. ಈ ಮಧ್ಯೆ, ಇತ್ತೀಚೆಗೆ NDAಯಿಂದ ಅನಧಿಕೃತವಾಗಿ ಹೊರ ಬಂದಿರುವ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅಯೋಧ್ಯೆಯಲ್ಲಿ ಕಟ್ಟಲು ಹೊರಟಿರುವ ರಾಮ ಮಂದಿರಕ್ಕಿಂತ ದೊಡ್ಡದಾದ ರಾಮನ ದೇಗುಲವನ್ನು ಬಿಹಾರದ ಸೀತಾಮಾರಿಯಲ್ಲಿ ಕಟ್ಟುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಬಿಹಾರದ ಮಿಥಿಲಾ ವಿಭಾಗದಲ್ಲಿರುವ ಸೀತಾಮಾರಿ ಜಿಲ್ಲೆಗೆ ಪೌರಾಣಿಕ ನಂಟಿದೆ. ಇದೇ ಸೀತಾಮಾರಿಯಲ್ಲಿ ಸೀತೆ ಹುಟ್ಟಿದ್ದು ಎಂದು ಜನ ನಂಬಿದ್ದಾರೆ. ಈಗ […]

ಅಯೋಧ್ಯೆಗಿಂತ ದೊಡ್ಡ ರಾಮ ಮಂದಿರವನ್ನು ಸೀತಾಮಾರಿಯಲ್ಲಿ ಕಟ್ಟುತ್ತೇವೆ -ಚಿರಾಗ್​ ಪಾಸ್ವಾನ್​ ಘೋಷಣೆ
Follow us on

ಪಾಟ್ನಾ: ಬಿಹಾರದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಚುನಾವಣಾ ಱಲಿಗಳಂತೂ ಆರೋಪ, ಪ್ರತ್ಯಾರೋಪಗಳಿಂದ ತುಂಬಿವೆ. ಈ ಮಧ್ಯೆ, ಇತ್ತೀಚೆಗೆ NDAಯಿಂದ ಅನಧಿಕೃತವಾಗಿ ಹೊರ ಬಂದಿರುವ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅಯೋಧ್ಯೆಯಲ್ಲಿ ಕಟ್ಟಲು ಹೊರಟಿರುವ ರಾಮ ಮಂದಿರಕ್ಕಿಂತ ದೊಡ್ಡದಾದ ರಾಮನ ದೇಗುಲವನ್ನು ಬಿಹಾರದ ಸೀತಾಮಾರಿಯಲ್ಲಿ ಕಟ್ಟುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಬಿಹಾರದ ಮಿಥಿಲಾ ವಿಭಾಗದಲ್ಲಿರುವ ಸೀತಾಮಾರಿ ಜಿಲ್ಲೆಗೆ ಪೌರಾಣಿಕ ನಂಟಿದೆ. ಇದೇ ಸೀತಾಮಾರಿಯಲ್ಲಿ ಸೀತೆ ಹುಟ್ಟಿದ್ದು ಎಂದು ಜನ ನಂಬಿದ್ದಾರೆ. ಈಗ ಈ ಭಾವನಾತ್ಮಕ ವಿಷಯವನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಲಾಭ ಪಡೆಯಲು ಚಿರಾಗ್ ಪಾಸ್ವಾನ್ ಹೊರಟಂತಿದೆ.

ರವಿವಾರ ಚುನಾವಣಾ ಱಲಿಯೊಂದರಲ್ಲಿ ಮಾತನಾಡಿರುವ ಪಾಸ್ವಾನ್ ಸೀತಾಮಾರಿಯಲ್ಲಿ ರಾಮಮಂದಿರವನ್ನು ಕಟ್ಟುತ್ತೇವೆ ಎಂದು ಘೋಷಿಸಿದ್ದಾರೆ. ಅಷ್ಟಕ್ಕೆ ನಿಲ್ಲದೆ, ಚಿರಾಗ್​ ಒಂದು ಹೆಜ್ಜೆ ಮುಂದೆ ಹೋಗಿ ಅಯೋಧ್ಯೆಗಿಂತ ದೊಡ್ಡದಾದ ಮಂದಿರ ನಿರ್ಮಾಣ ಮಾಡುತ್ತೇವೆ. ಆಮೇಲೆ ಅಯೋಧ್ಯೆ ಮತ್ತು ಸೀತಾಮಾರಿ ನಡುವೆ ನೇರ ರಸ್ತೆ ಸಂಪರ್ಕ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.

ಮೊದಲು NDA ಜೊತೆಗಿದ್ದ ಪಾಸ್ವಾನ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಜಕೀಯ ಸಮರ ಸಾರಿದ್ದಾರೆ. ಈಗ NDA ವಿರೋಧ ಪಕ್ಷವಾದ RJD ಪಕ್ಷದ ಜೊತೆ ಕೈ ಜೋಡಿಸಿದ್ದಾರೆ.