ಭಾರತ-ಆಮೆರಿಕ ನಡುವೆ 2+2 ಮೀಟಿಂಗ್, ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ನಡುಕ ಶುರು
ದೆಹಲಿ: ವಿಶ್ವದ ದೊಡ್ಡಣ್ಣ, ಬಲಿಷ್ಠ ರಾಷ್ಟ್ರ ಅಮೆರಿಕ ಅಧ್ಯಕ್ಷರ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಇಂದಿಗೆ ಸರಿಯಾಗಿ ಒಂದು ವಾರಕ್ಕೆ ಅಮೆರಿಕ ಪ್ರೆಸಿಡೆಂಟ್ ಎಲೆಕ್ಷನ್ ಫಿಕ್ಸ್ ಆಗಿದೆ. ಈ ಹೊತ್ತಲ್ಲೇ ಭಾರತದ ಶತ್ರು ರಾಷ್ಟ್ರಗಳಿಗೆ ಟಾಂಗ್ ಕೊಡಲು ಅಮೆರಿಕ ಸಜ್ಜಾಗಿದೆ. ಅಮೆರಿಕ ಮತ್ತು ಭಾರತದ ನಡುವೆ ಮಾತುಕತೆ ನಡೆಯಲಿದ್ದು, ಇಡೀ ಜಗತ್ತಿನ ಗಮನ ಈ ಸಭೆಯ ಮೇಲೆ ಕೇಂದ್ರಿಕೃತವಾಗಿದೆ. ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಅಂತಾ ಸಾರಿ ಸಾರಿ ಹೇಳಬಹುದು. ಯಾಕಂದ್ರೆ ಕುತಂತ್ರಿ ಚೀನಾದ ಬಲೆಯಲ್ಲಿ […]
ದೆಹಲಿ: ವಿಶ್ವದ ದೊಡ್ಡಣ್ಣ, ಬಲಿಷ್ಠ ರಾಷ್ಟ್ರ ಅಮೆರಿಕ ಅಧ್ಯಕ್ಷರ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ಇಂದಿಗೆ ಸರಿಯಾಗಿ ಒಂದು ವಾರಕ್ಕೆ ಅಮೆರಿಕ ಪ್ರೆಸಿಡೆಂಟ್ ಎಲೆಕ್ಷನ್ ಫಿಕ್ಸ್ ಆಗಿದೆ. ಈ ಹೊತ್ತಲ್ಲೇ ಭಾರತದ ಶತ್ರು ರಾಷ್ಟ್ರಗಳಿಗೆ ಟಾಂಗ್ ಕೊಡಲು ಅಮೆರಿಕ ಸಜ್ಜಾಗಿದೆ. ಅಮೆರಿಕ ಮತ್ತು ಭಾರತದ ನಡುವೆ ಮಾತುಕತೆ ನಡೆಯಲಿದ್ದು, ಇಡೀ ಜಗತ್ತಿನ ಗಮನ ಈ ಸಭೆಯ ಮೇಲೆ ಕೇಂದ್ರಿಕೃತವಾಗಿದೆ.
ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಅಂತಾ ಸಾರಿ ಸಾರಿ ಹೇಳಬಹುದು. ಯಾಕಂದ್ರೆ ಕುತಂತ್ರಿ ಚೀನಾದ ಬಲೆಯಲ್ಲಿ ಸಿಲುಕಿ ಭಾರತ ವಿರುದ್ಧವೇ ನೆರೆ ರಾಷ್ಟ್ರಗಳು ವಿಷ ಕಕ್ಕುತ್ತಿವೆ. ಅದರಲ್ಲೂ ಭಾರತದ ಬದ್ಧ ವೈರಿಯಾಗಿರುವ ಪಾಪಿ ಪಾಕ್ ಹಾಗೂ ಭಾರತದಿಂದಲೇ ಸಹಾಯ ಪಡೆದು ತಿರುಗಿಬಿದ್ದಿರುವ ನೇಪಾಳ, ಇವರನ್ನೆಲ್ಲಾ ಸೂತ್ರದ ಗೊಂಬೆಯಂತೆ ಆಡಿಸುತ್ತಿರುವ ಚೀನಾ ಭಾರತಕ್ಕೆ ಕೇಡು ಬಯಸಿ ಕಾಯುತ್ತಿವೆ. ಇವರಿಗೆ ತಿರುಗೇಟು ಕೊಟ್ಟು ಶಾಕ್ ನೀಡಲು ಭಾರತ, ಅಮೆರಿಕದ ಜೊತೆಗಿನ ಸಂಬಂಧವನ್ನು ವೃದ್ಧಿಸುತ್ತಿದೆ. ಇದರ ಭಾಗವಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ.
ಭಾರತ, ಅಮೆರಿಕ ಟು ಪ್ಲಸ್ ಟು ಸಭೆ! ಒಂದೆಡೆ ಚೀನಾ ಜೊತೆಗಿನ ಗಡಿ ವಿವಾದ, ಮತ್ತೊಂದೆಡೆ ಅಮೆರಿಕ ಚೀನಾದ ಸಾಮ್ರಾಜ್ಯಶಾಹಿ ಧೋರಣೆ ವಿರುದ್ಧ ಗುಟುರು ಹಾಕ್ತಿದೆ. ಎರಡೂ ದೇಶಗಳ ಸಮಾನ ಶತ್ರು ಚೀನಾ. ಈ ಚೀನಾ ವಿರುದ್ಧ ಈಗ ಭಾರತ ಮತ್ತು ಅಮೆರಿಕ ಒಂದಾಗಿವೆ. ಇದರ ಭಾಗವಾಗಿಯೇ ಇಂದು ಭಾರತ ಮತ್ತು ಅಮೆರಿಕಾ ಟು ಪ್ಲೆಸ್ ಟು ಸಭೆ ನಡೆಸಲಿದ್ದು, ಮೊದಲೇ ಭಾರತದ ಮೇಲೆ ಉರಿ ಉರಿ ಇಟ್ಟುಕೊಂಡಿದ್ದ ಚೀನಾಗೆ ಈ ಸಭೆ ಇನ್ನಷ್ಟು ಕೋಪ ತರಿಸಿದೆ.
ರಕ್ಷಣಾ ಸಚಿವ ರಾಜನಾಥ್ರಿಂದ ಸ್ವಾಗತ ಟು ಪ್ಲಸ್ ಟು ಸಭೆಯಲ್ಲಿ ಭಾಗಿಯಾಗೋಕೆ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ, ರಕ್ಷಣಾ ಸಚಿವ ಮಾರ್ಕ್ ಎಸ್ಪರ್ ದೆಹಲಿಗೆ ಬಂದಿಳಿದಿದ್ದಾರೆ. ಅಮೆರಿಕ ರಕ್ಷಣಾ ಸಚಿವರ ಬರಮಾಡಿಕೊಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರೆಡ್‌ಕಾರ್ಪೆಟ್‌ನಲ್ಲಿ ಸ್ವಾಗತ ಕೋರಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ರು. ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಜತೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
2+2 ಸಭೆಯ ಉದ್ದೇಶವೇನು? 2+2 ಮೀಟಿಂಗ್ ಎಂದರೆ ಉಭಯ ದೇಶಗಳ ಸಚಿವರ ಸಭೆ ಎಂದು ಅರ್ಥ. ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಜೊತೆ ಭಾರತದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಸಭೆ ನಡೆಸಲಿದ್ದಾರೆ. ಪ್ರಾದೇಶಿಕ ಭದ್ರತೆ, ರಕ್ಷಣಾ ವ್ಯಾಪಾರದ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು 2+2 ಮೀಟಿಂಗ್ನಲ್ಲಿ ಡ್ರ್ಯಾಗನ್ ದೇಶದ ವಿರುದ್ಧ ರಣತಂತ್ರ ರೂಪಿಸುವ ಸಾಧ್ಯತೆ ಇದೆ. ಗಡಿಭದ್ರತೆ ಕುರಿತು ಭಾರತ-ಅಮೆರಿಕ ಮಹತ್ವದ ಚರ್ಚೆ ನಡೆಸಲಿದ್ದು, ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯ ಕುಗ್ಗಿಸುವುದೇ ಎರಡೂ ದೇಶಗಳ ಅಜೆಂಡಾ. ಆಕ್ರಮಣಕಾರಿ ನೀತಿ ವಿರುದ್ಧ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಿದ್ರೆ ಚೀನಾಗೆ ಬಲವಾದ ಪೆಟ್ಟು ಕೊಟ್ಟಂತಾಗಲಿದೆ.
ಟು ಪ್ಲಸ್ ಟು ಸಚಿವರ ಸಭೆ ಮೂರನೇ ಬಾರಿಗೆ ನಡೀತಿದೆ. 2018ರಲ್ಲಿ ದೆಹಲಿ, 2019ರಲ್ಲಿ ವಾಷಿಂಗ್ಟನ್ ನಂತ್ರ ಮತ್ತೆ ದೆಹಲಿಯಲ್ಲಿ ಸಭೆ ನಡೀತಿದೆ. ಮತ್ತೊಂದೆಡೆ ಭಾರತದ ಪ್ರತಿರೋಧಕ್ಕೆ ಪತರಗುಟ್ಟೋ ಚೀನಾ, ಅಮೆರಿಕ ಮತ್ತು ಭಾರತದ 2+2 ಸಭೆ ಮೇಲೆ ಕಣ್ಣಿಟ್ಟಿದೆ. ಏಕೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಲಡಾಖ್ ಗಡಿ ವಿವಾದದಲ್ಲಿ ಚೀನಾ ನಡೆ ಖಂಡಿಸಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೀತ್ತಿದ್ದು, ಹೀಗಾಗಿ ಟ್ರಂಪ್ ನಡೆ ಬಗ್ಗೆ ಚೀನಾ ನಾಯಕರಿಗೂ ಕುತೂಹಲ ಹೆಚ್ಚುವಂತೆ ಮಾಡಿದೆ.