ನವದೆಹಲಿ: ದೇಶದ ನಾಗರಿಕರು ರಾಷ್ಟ್ರಗೀತೆ ‘ಜನ ಗಣ ಮನ’ (National Anthem) ಮತ್ತು ರಾಷ್ಟ್ರೀಯ ಗಾಯನ ‘ವಂದೇ ಮಾತರಂ’ (Vande Mataram) ಗೆ ಸಮಾನ ಗೌರವ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ (Minister of Home Affairs) ಹೇಳಿದೆ. ಸುಪ್ರೀಂ ಕೋರ್ಟ್‌ನ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಉತ್ತರಿಸಿದ ಗೃಹ ಸಚಿವಾಲಯ ‘ಜನ ಗಣ ಮನ’ ಮತ್ತು ರಾಷ್ಟ್ರಗೀತೆ ‘ವಂದೇ ಮಾತರಂ’ ಒಂದೇ ಸಾಲಿನಲ್ಲಿ ನಿಲ್ಲುತ್ತೇವೆ, ಹೀಗಾಗಿ ಎರಡಕ್ಕೂ ಸಮಾನ ಗೌರವ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ದೆಹಲಿ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಲ್ಲಿಸಿದ್ದರು. ಈ ಹಿನ್ನೆಲೆ ಕೇಂದ್ರ ಗೃಹ ಸಚಿವಾಲಯ ಕೇಂದ್ರ ಸರ್ಕಾರದ ವಕೀಲ ಮನೀಶ್ ಮೋಹನ್ ಮೂಲಕ ಇಂದು (ನ. 5) ಪ್ರತಿಕ್ರಿಯಿಸಿದೆ.
ಮುಂದುವರೆದು ವಂದೇ ಮಾತರಂ ಹಾಡುವ ಅಥವಾ ನುಡಿಸುವ ಬಗ್ಗೆ ಯಾವುದೇ ದಂಡದ ನಿಬಂಧನೆಗಳು ಅಥವಾ ಸೂಚನೆಗಳಿಲ್ಲ. ಈ ಹಾಡು ಭಾರತೀಯರ ಭಾವನೆಗಳು ಮತ್ತು ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಹಾಡಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್‌ನ ಎಲ್ಲಾ ನಿರ್ದೇಶನಗಳು ಅನುಸರಿಸಲಾಗುತ್ತಿದೆ. ಎರಡಕ್ಕೂ ತನ್ನದೇ ಆದ ಪಾವಿತ್ರ್ಯತೆ ಇದೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಹಾಡು ಎರಡೂ ತಮ್ಮದೇ ಪಾವಿತ್ರ್ಯ ಹೊಂದಿವೆ ಮತ್ತು ಸಮಾನ ಗೌರವಕ್ಕೆ ಅರ್ಹವಾಗಿವೆ ಎಂದು ಒತ್ತಿ ಹೇಳಿರುವ ಕೇಂದ್ರ, ಪ್ರಸ್ತುತದ ವಿಚಾರಣೆಯಲ್ಲಿ ಎತ್ತಿಕೊಂಡಿರುವ ಸಂಗತಿಯು ರಿಟ್ ಅರ್ಜಿಗೆ ಪೂರಕವಾದ ವಿಷಯವಾಗುವುದಿಲ್ಲ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 pm, Sat, 5 November 22