ಉದ್ಯೋಗ ಹಗರಣ: ಬಿಜೆಪಿ ಶಾಸಕ ಪಾರ್ಥಸಾರಥಿ ಚಟರ್ಜಿ ಮನೆಯಲ್ಲಿ ಸಿಬಿಐ ಶೋಧ

|

Updated on: Oct 09, 2023 | 2:37 PM

Parthasarathi Chatterjee: ಸಿಬಿಐ ತಂಡಗಳು ಉಲುಬೇರಿಯಾ ಪುರಸಭೆ ಮತ್ತು ಅದರ ಮಾಜಿ ಅಧ್ಯಕ್ಷ ಅರ್ಜುನ್ ಸರ್ಕಾರ್ ಅವರ ನಿವಾಸ ಮತ್ತು ಡೈಮಂಡ್ ಹಾರ್ಬರ್‌ನಲ್ಲಿರುವ ಸ್ಥಳಗಳಲ್ಲಿ ಶೋಧ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳದ ನಾಗರಿಕ ಸಂಸ್ಥೆಗಳಲ್ಲಿ ಜನರ ನೇಮಕಾತಿಯಲ್ಲಿನ ಅಕ್ರಮಗಳಲ್ಲಿ ಈ ಜನರು ಭಾಗಿಯಾಗಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ. ನಾವು ಸಂಬಂಧಿತ ದಾಖಲೆಗಳನ್ನು ಹುಡುಕುತ್ತಿದ್ದೇವೆ

ಉದ್ಯೋಗ ಹಗರಣ: ಬಿಜೆಪಿ ಶಾಸಕ ಪಾರ್ಥಸಾರಥಿ ಚಟರ್ಜಿ ಮನೆಯಲ್ಲಿ ಸಿಬಿಐ ಶೋಧ
ಸಿಬಿಐ
Follow us on

ಕೊಲ್ಕತ್ತಾ ಅಕ್ಟೋಬರ್ 09: ಪಶ್ಚಿಮ ಬಂಗಾಳದ ಸಚಿವ ಫಿರ್ಹಾದ್ ಹಕೀಮ್ ಮತ್ತು ಟಿಎಂಸಿ ಶಾಸಕ ಮದನ್ ಮಿತ್ರಾ ಅವರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಅವರನ್ನು ವಿಚಾರಣೆಗೊಳಪಡಿಸಿದ ಒಂದು ದಿನದ ನಂತರ, ಸಿಬಿಐ ಸೋಮವಾರ ಬಿಜೆಪಿ(BJP) ಶಾಸಕರ ಮನೆ ಮತ್ತು ಇತರ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಿದೆ. ನಾಡಿಯಾ ಜಿಲ್ಲೆಯ ರಣಘಾಟ್ ಉತ್ತರ ಪಶ್ಚಿಮದ ಬಿಜೆಪಿ ಶಾಸಕ ಪಾರ್ಥಸಾರಥಿ(Parthasarathi Chatterjee )ಚಟರ್ಜಿ ಅವರ ಮನೆ ಮೇಲೆ ಸಿಬಿಐ (CBI) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸಿಬಿಐ ತಂಡಗಳು ಉಲುಬೇರಿಯಾ ಪುರಸಭೆ ಮತ್ತು ಅದರ ಮಾಜಿ ಅಧ್ಯಕ್ಷ ಅರ್ಜುನ್ ಸರ್ಕಾರ್ ಅವರ ನಿವಾಸ ಮತ್ತು ಡೈಮಂಡ್ ಹಾರ್ಬರ್‌ನಲ್ಲಿರುವ ಸ್ಥಳಗಳಲ್ಲಿ ಶೋಧ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳದ ನಾಗರಿಕ ಸಂಸ್ಥೆಗಳಲ್ಲಿ ಜನರ ನೇಮಕಾತಿಯಲ್ಲಿನ ಅಕ್ರಮಗಳಲ್ಲಿ ಈ ಜನರು ಭಾಗಿಯಾಗಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿವೆ. ನಾವು ಸಂಬಂಧಿತ ದಾಖಲೆಗಳನ್ನು ಹುಡುಕುತ್ತಿದ್ದೇವೆ. ನಮ್ಮ ಅಧಿಕಾರಿಗಳು ಅವರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.

ಡೈಮಂಡ್ ಹಾರ್ಬರ್ ಮುನ್ಸಿಪಾಲಿಟಿ ಮತ್ತು ಅದರ ಮಾಜಿ ಅಧ್ಯಕ್ಷೆ ಮೀರಾ ಹಾಲ್ಡರ್ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ.

ಎರಡು ತಂಡಗಳು ಡೈಮಂಡ್ ಹಾರ್ಬರ್‌ಗೆ ಹೋಗಿವೆ, ಒಂದು ತಂಡವು ಹಾಲ್ಡರ್ ಅವರ ನಿವಾಸದಲ್ಲಿ ಶೋಧ ನಡೆಸುತ್ತಿದೆ, ಇನ್ನೊಂದು ತಂಡವ ಅಧ್ಯಕ್ಷ ಪ್ರಣಬ್ ದಾಸ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ದಾಖಲೆಗಳನ್ನು ಹುಡುಕುತ್ತಿದೆ. ನಾವು ಕಳೆದ ನಾಲ್ಕೈದು ವರ್ಷಗಳಲ್ಲಿ ನೇಮಕಗೊಂಡವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಮತ್ತೊಂದು ಸಿಬಿಐ ತಂಡವು ಮಧ್ಯಮಗ್ರಾಮ ಪುರಸಭೆಯ ಕಚೇರಿಯಲ್ಲಿ ಶೋಧ ನಡೆಸುತ್ತಿದ್ದು ಅದರ ಅಧ್ಯಕ್ಷರೊಂದಿಗೆ ಮಾತನಾಡುತ್ತಿದೆ.
ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಗಳ ಹೊರಗೆ ಪೊಲೀಸ್ ಪಡೆಗಳು ಕಾವಲು ಕಾಯುತ್ತಿವೆ ಮತ್ತು ಕಟ್ಟಡಗಳ ಒಳಗೆ ಮತ್ತು ಹೊರಗೆ ಬರಲು ಯಾರಿಗೂ ಅವಕಾಶವಿರಲಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ:  Assembly Elections 2023: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ

ಇದೇ ವಿಷಯದ ತನಿಖೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಮತ್ತು ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ ನಿವಾಸ ಸೇರಿದಂತೆ ಪಶ್ಚಿಮ ಬಂಗಾಳದ 12 ಸ್ಥಳಗಳಲ್ಲಿ ಸಿಬಿಐ ಭಾನುವಾರ ದಾಳಿ ನಡೆಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Mon, 9 October 23