ನವದೆಹಲಿ: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ. ಇದು ಸಾಮಾನ್ಯ ವರ್ಗಕ್ಕೆ ದೊಡ್ಡ ಹೊರೆ ಆಗಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಸಾಮಾನ್ಯರಿಗೆ ಮತ್ತೊಂದು ಹೊರೆಯನ್ನು ಹೊರಿಸಿದೆ. ದೇಶೀಯ ವಿಮಾನ ಹಾರಾಟ ಇನ್ನುಮುಂದೆ ಮತ್ತಷ್ಟು ತುಟ್ಟಿ ಆಗಲಿದೆ. ಕೇಂದ್ರ ಸರ್ಕಾರ ದೇಶೀಯ ವಿಮಾನಯಾನ ದರವನ್ನು ಶೇ.10-30 ಏರಿಕೆ ಮಾಡಿರುವುದು ಇದಕ್ಕೆ ಕಾರಣ. ಹೀಗಾಗಿ, ದೇಶದೊಳಗೆ ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತೀರಿ ಎಂದಾದರೆ, ಹೆಚ್ಚಿನ ಹಣ ನೀಡುವುದು ಅನಿವಾರ್ಯ ಆಗಿದೆ. ಈ ಹೊಸ ಆದೇಶ ಮಾರ್ಚ್ 31,2021ರವರೆಗೆ ಜಾರಿಯಲ್ಲಿರಲಿದೆ. ನಂತರ ಯಾವುದೇ ಆದೇಶ ಕೇಂದ್ರ ಸರ್ಕಾರದ ಕಡೆಯಿಂದ ಬರದೆ ಇದ್ದರೆ, ಇದೇ ಆದೇಶ ಮುಂದುವರಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ವಿಮಾನದ ಪ್ರಯಾಣದ ಅವಧಿ ಆಧರಿಸಿ ಕಳೆದ ವರ್ಷ ಮೇ 21ರಂದು ವಿಮಾನಯಾನ ಸಚಿವಾಲಯ ಏಳು ಟಿಕೆಟ್ ಬ್ಯಾಂಡ್ಗಳನ್ನು ರಚಿಸಿತ್ತು. ಮೊದಲ ಬ್ಯಾಂಡ್ನಲ್ಲಿ ಕನಿಷ್ಠ ದರವನ್ನು ಈಗ 2000 ರೂಪಾಯಿಯಿಂದ 2,200 ರೂಪಾಯಿಗೆ ಏರಿಕೆ ಮಾಡಿದೆ. ಈ ಬ್ಯಾಂಡ್ನ ಗರಿಷ್ಠ ದರವನ್ನು 6000 ರೂಪಾಯಿಯಿಂದ 7,800 ರೂಪಾಯಿಗೆ ಹೆಚ್ಚಿಸಿದೆ.
ಉಳಿದ ವಿಮಾನಗಳ ದರದ ಬಗ್ಗೆ ಇಲ್ಲಿದೆ ಮಾಹಿತಿ:
ಪ್ರಯಾಣದ ಅವಧಿ ಹಳೆಯ ದರ ಪರಿಷ್ಕೃತ ದರ
(ನಿಮಿಷಗಳಲ್ಲಿ)
40-60 ₹ 2,500 – ₹ 7,500 ₹ 2,800 – ₹ 9,800
60-90 ₹ 3,000 – ₹ 9,000 ₹ 3,300 – ₹ 11,700
90-120 ₹ 3,500 – ₹ 10,000 ₹ 3,900 – ₹ 13,000
120-150 ₹ 4,500 – ₹ 13,000 ₹ 5,000 – ₹ 16,900
150-180 ₹ 5,500 – ₹ 15,700 ₹ 6,100 – ₹ 20,400
180-210 ₹ 6,500 – ₹ 18,600 ₹ 7,200 – ₹ 24,200
ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ದೇಶದಲ್ಲಿ ವಿಮಾನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮೇ 25ರಿಂ ದೇಶೀಯ ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿತ್ತು.
ಇದನ್ನೂ ಓದಿ: Aero India 2021 ಲಘು ಯುದ್ಧ ವಿಮಾನ ತೇಜಸ್ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos
Published On - 9:25 pm, Thu, 11 February 21