ಮತ್ತೆ ಹಿಂಸಾಚಾರ: ಪ್ರತಿಭಟನಾನಿರತ ರೈತರು ಮತ್ತು ಸ್ಥಳೀಯರ ಮಧ್ಯೆ ಜಟಾಪಟಿ.. ಪೊಲೀಸ್​ ಮೇಲೆ ತಲ್ವಾರ್‌ನಿಂದ ದಾಳಿ

|

Updated on: Jan 29, 2021 | 3:35 PM

ಗಲಭೆಯನ್ನು ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆ ಪ್ರತಿಭಟನಾನಿರತ ರೈತರ ಗುಂಪಿನಿಂದ ಒಬ್ಬಾತ ತಲ್ವಾರ್‌ನಿಂದ ಹಲ್ಲೆ ಮಾಡಲಾಗಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ.

ಮತ್ತೆ ಹಿಂಸಾಚಾರ: ಪ್ರತಿಭಟನಾನಿರತ ರೈತರು ಮತ್ತು ಸ್ಥಳೀಯರ ಮಧ್ಯೆ ಜಟಾಪಟಿ.. ಪೊಲೀಸ್​ ಮೇಲೆ ತಲ್ವಾರ್‌ನಿಂದ ದಾಳಿ
ರೈತರು ಹಾಗೂ ಸ್ಥಳೀಯರ ನಡುವೆ ಗಲಾಟೆ. ಪೊಲೀಸರಿಂದ ಲಾಠಿ ಚಾರ್ಜ್​
Follow us on

ದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಸಿಂಘು ಗಡಿಯಲ್ಲಿ ಹೋರಾಟ ನಡೆಸುತ್ತಿದ್ದು, ಇಂದು ರೈತರು ನಡೆಸುತ್ತಿರುವ ಪ್ರತಿಭಟನೆ ವಿರುದ್ಧ ಸ್ಥಳೀಯರು ತಿರುಗಿ ಬಿದ್ದಿದ್ದಾರೆ. ಅಲ್ಲದೆ ಕೂಡಲೇ ಸ್ಥಳದಿಂದ ತೆರಳುವಂತೆ ರೈತರ ವಿರುದ್ದ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪೊಲೀಸರಿಂದ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ
ಪ್ರತಿಭಟನಾನಿರತ ಸ್ಥಳೀಯರಿಂದ ರೈತರ ಟೆಂಟ್‌ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಸ್ಥಳೀಯರು ರೈತರ ಟೆಂಟ್‌ಗಳನ್ನು ಕೆಡವಲು ಯತ್ನಿಸಿದ್ದಾರೆ. ಹೀಗಾಗಿ ಸ್ಥಳೀಯರು ಹಾಗೂ ಪ್ರತಿಭಟನಾನಿರತ ರೈತರ ಮಧ್ಯೆ ಗಲಾಟೆ ಆರಂಭವಾಗಿದೆ. ಗಲಾಟೆಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದಾರೆ.

ಅಲ್ಲದೆ ಗಲಭೆಯನ್ನು ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆ ಪ್ರತಿಭಟನಾನಿರತ ರೈತರ ಗುಂಪಿನಿಂದ ಒಬ್ಬಾತ ತಲ್ವಾರ್‌ನಿಂದ ಹಲ್ಲೆ ಮಾಡಲಾಗಿದ್ದು, ಘಟನೆಯಲ್ಲಿ ಪೊಲೀಸ್ ಇನ್ಸ್​ಪೆಕ್ಟರ್​ಗೆ ಗಂಭೀರವಾಗಿ ಗಾಯವಾಗಿದೆ.

ಓರ್ವ ಸ್ಥಳೀಯನಿಗೂ ಸಹ ಗಂಭೀರ ಗಾಯಗಳಾಗಿದೆ. ಹಾಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಆಲಿಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಗಂಭೀರ ಗಾಯಗಳಾಗಿದ್ದು, ತಲ್ವಾರ್‌ನಿಂದ ಪೊಲೀಸರ ಮೇಲೆ ದಾಳಿ ಮಾಡಿದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟ: 7ನೇ ಸುತ್ತಿನ ಮಾತುಕತೆಗೆ ಸರ್ಕಾರ ಸಿದ್ಧತೆ, ಇಂದಾದರೂ ಈಡೇರುತ್ತಾ ರೈತರ ಬೇಡಿಕೆಗಳು?

Published On - 3:32 pm, Fri, 29 January 21