ಶ್ರೀನಗರ ಮಾರ್ಚ್ 26 : ಖ್ಯಾತ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ (Sonam Wangchuk) ಅವರು ಲಡಾಖ್‌ಗೆ (Ladakh) ರಾಜ್ಯ ಸ್ಥಾನಮಾನ ಮತ್ತು ದುರ್ಬಲವಾದ ಹಿಮಾಲಯನ್ ಪರಿಸರವನ್ನು ರಕ್ಷಿಸಲು ಒತ್ತಾಯಿಸಿ ಕಳೆದ 21ದಿನಗಳಿಂದ ನಡೆಸುತ್ತಿದ್ದ ತಮ್ಮ ಉಪವಾಸ ಸತ್ಯಾಗ್ರಹವನ್ನು (hunger strike) ಕೊನೆಗೊಳಿಸಿದ್ದಾರೆ. ಉಪ್ಪು ಮತ್ತು ನೀರು ಮಾತ್ರ ಸೇವಿಸಿ ವಾಂಗ್‌ಚುಕ್ ಇಲ್ಲಿವರೆಗೆ ಪ್ರತಿಭಟನೆ ನಿರತರಾಗಿದ್ದರು. ಮಂಗಳವಾರ ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಅವರು ತಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ. “ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳಿಗಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ” ಎಂದು ಹೇಳಿ ವಾಂಗ್‌ಚುಕ್ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಉಪವಾಸ ಅಂತ್ಯಗೊಳ್ಳುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದು, ಇದೀಗ ಅದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಹಿಳಾ ಸಂಘಟನೆಗಳು ಹೇಳಿವೆ.
ಮಾರ್ಚ್ 6 ರಂದು ಅವರು ತಮ್ಮ ಉಪವಾಸವನ್ನು ಪ್ರಾರಂಭಿಸಿದಾಗ ಇದು ಆಮರಣಾಂತ ಉಪವಾಸ ಸತ್ಯಾಗ್ರಹ ಎಂದು ವಾಂಗ್‌ಚುಕ್ ಹೇಳಿದ್ದರು.
VIDEO | Climate activist Sonam Wangchuk ends his hunger strike to demand statehood for Ladakh and its inclusion in the Sixth Schedule of the Constitution. He, however, insisted that his fight will continue. pic.twitter.com/Eb4iMQR2Yd
— Press Trust of India (@PTI_News) March 26, 2024
ಇದಕ್ಕೂ ಮುನ್ನ ಸೋನಮ್ ವಾಂಗ್‌ಚುಕ್, ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ಮತ್ತು ಲಡಾಖ್ ಜನರ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿದ್ದರು. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅವರು ಹೆಪ್ಪುಗಟ್ಟಿದ ನೀರಿನ ಲೋಟವನ್ನು ತೋರಿಸಿದರು. ತಾಪಮಾನವು -10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೂ 350 ಜನರು ಉಪವಾಸದಲ್ಲಿ ತಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಲಡಾಖ್‌ನಲ್ಲಿರುವ ಹಿಮಾಲಯ ಪರ್ವತಗಳ ದುರ್ಬಲ ಪರಿಸರ ವ್ಯವಸ್ಥೆ ಮತ್ತು ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶಿಷ್ಟ ಸ್ಥಳೀಯ ಬುಡಕಟ್ಟು ಸಂಸ್ಕೃತಿಗಳನ್ನು ರಕ್ಷಿಸಲು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಆದರ್ಶಗಳನ್ನು ನೆನಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ
“ನಾವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜಿ ಅವರನ್ನು ಕೇವಲ ರಾಜಕಾರಣಿಗಳು ಎಂದು ಭಾವಿಸಲು ಬಯಸುವುದಿಲ್ಲ, ನಾವು ಅವರನ್ನು ಪ್ರತಿನಿಧಿಗಳು ಎಂದು ಭಾವಿಸಲು ಬಯಸುತ್ತೇವೆ ಆದರೆ, ಅದಕ್ಕಾಗಿ ಅವರು ದೂರದೃಷ್ಟಿಯನ್ನು ತೋರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.
ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳನ್ನು ಒಳಗೊಂಡಿರುವ ಲಡಾಖ್, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಆಗಸ್ಟ್ 5, 2019 ರಂದು ರದ್ದುಗೊಳಿಸಿದ ನಂತರ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಯಿತು.
ಬೌದ್ಧ ಪ್ರಾಬಲ್ಯದ ಲೇಹ್ ಮತ್ತು ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್‌ನ ನಾಯಕರು ರಾಜ್ಯತ್ವ ಮತ್ತು ಹಕ್ಕುಗಳ ರಕ್ಷಣೆಗೆ ಒತ್ತಾಯಿಸಲು ಅಪೆಕ್ಸ್ ಬಾಡಿ ಆಫ್ ಲೇಹ್ ಮತ್ತು ಮುಸ್ಲಿಂ ಪ್ರಾಬಲ್ಯದ ಕಾರ್ಗಿಲ್ ರಾಜ್ಯತ್ವವನ್ನು ಮತ್ತು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ತನ್ನ ಬಹುಸಂಖ್ಯಾತ ಬುಡಕಟ್ಟು ಜನಸಂಖ್ಯೆಯ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಲು ಅಪೆಕ್ಸ್ ಬಾಡಿ ಆಫ್ ಲೇಹ್ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್‌ನ ಬ್ಯಾನರ್‌ಗಳ ಅಡಿಯಲ್ಲಿ ಕೈಜೋಡಿಸಿತು.
ಇದನ್ನೂ ಓದಿ: Sonam Wangchuk: ಲಡಾಖ್‌ನಲ್ಲಿ ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ ಕೈಗೊಂಡಿರುವುದೇತಕ್ಕೆ?
ಬೇಡಿಕೆಗಳನ್ನು ಪರಿಶೀಲಿಸಲು ಕೇಂದ್ರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಆದರೆ ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಸರಣಿ ಸಭೆಗಳ ನಂತರ ಯಾವುದೇ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಮಾರ್ಚ್ 4 ರಂದು ಯುಟಿಯ ನಾಯಕರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಜನರ ಬೇಡಿಕೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಿದ ಎರಡು ದಿನಗಳ ನಂತರ ವಾಂಗ್‌ಚುಕ್ ಲೇಹ್‌ನಲ್ಲಿ ಉಪವಾಸ ಆರಂಭಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ