Ravneet Singh Bittu: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲುಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟೂ
ಲುಧಿಯಾನ ಸಂಸದ ರವನೀತ್ ಸಿಂಗ್ ಬಿಟ್ಟೂ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 76,372 ಮತಗಳಿಂದ ಲೋಕ್ ಇನ್ಸಾಫ್ ಪಕ್ಷದ ಸಿಮರ್ಜೀತ್ ಸಿಂಗ್ ಬೈನ್ಸ್ ಅವರನ್ನು ಸೋಲಿಸಿದರು. 2014 ರಲ್ಲಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹರ್ವಿಂದರ್ ಸಿಂಗ್ ಫೂಲ್ಕಾ ಅವರನ್ನು 19,709 ಮತಗಳ ಅಂತರದಿಂದ ಸೋಲಿಸಿದ್ದರು.
ದೆಹಲಿ ಮಾರ್ಚ್ 26 : ಲೋಕಸಭೆ ಚುನಾವಣೆಗೆ (Lok Sabha Elections) ಮುನ್ನ ಲುಧಿಯಾನ (Ludhiana) ಸಂಸದ ರವನೀತ್ ಸಿಂಗ್ (Ravneet Singh Bittu) ಬಿಟ್ಟೂ ಮಂಗಳವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿಗೆ ಸೇರ್ಪಡೆಗೊಂಡ ನಂತರ ಬಿಟ್ಟೂ ಅವರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದು, ಪ್ರಧಾನಿ ಮೋದಿಯವರು ಪಂಜಾಬ್‌ನ ಮೇಲೆ ಹೆಚ್ಚಿನ ಪ್ರೀತಿಯನ್ನು ತೋರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಯಸಿದ್ದಾರೆ ಎಂದು ಅವರು ಹೇಳಿದರು.
“ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞನಾಗಿದ್ದೇನೆ.ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರು ಪಂಜಾಬ್‌ನ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ. ಅವರು ರಾಜ್ಯಕ್ಕಾಗಿ ಬಹಳಷ್ಟು ಮಾಡಲು ಬಯಸುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಪಂಜಾಬ್ ಯಾಕೆ ಹಿಂದುಳಿಯಬೇಕು? ” ಎಂದು ಬಿಟ್ಟೂ ಕೇಳಿದ್ದಾರೆ.
ಬಿಜೆಪಿ ಸೇರಿದ ಬಿಟ್ಟೂ ಏನಂದ್ರು?
#WATCH | Delhi: On joining the BJP after quitting Congress, Ravneet Singh Bittu says, “The Prime Minister and the Home Minister always took it positively whenever I raised the issues of Punjab…We want to take Punjab forward…When the country is benefitting, why should Punjab… pic.twitter.com/NPyZNp9FKh
— ANI (@ANI) March 26, 2024
ರಾಜ್ಯದಲ್ಲಿ ಭಯೋತ್ಪಾದನೆಯ ಕರಾಳ ದಿನಗಳನ್ನು ನೆನಪಿಸಿಕೊಂಡ ಅವರು, ಶಾಂತಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪಾತ್ರವನ್ನು ಶ್ಲಾಘಿಸಿದರು.ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬರಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹೇಳಿದ್ದಾರೆ.
ಜನವರಿಯಲ್ಲಿ ಸ್ಥಾಪಿಸಲಾದ 27 ಸದಸ್ಯರ ಪಂಜಾಬ್ ಘಟಕದ ಪ್ರದೇಶ್ ಚುನಾವಣಾ ಸಮಿತಿಯಲ್ಲಿ ರವನೀತ್ ಸಿಂಗ್ ಬಿಟ್ಟೂ ಇದ್ದರು.
ಬಿಟ್ಟೂ ರಾಜಕೀಯ ಕುಟುಂಬದಿಂದ ಬಂದವರು. ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ಮತ್ತು ಮಾಜಿ ಪಂಜಾಬ್ ಸಚಿವ ತೇಜ್ ಪ್ರಕಾಶ್ ಸಿಂಗ್ ಅವರ ಮಗ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಸಂಸದ ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರಕ್ಕೆ ಮಾರ್ಚ್ 30 ರಂದು ಚಾಲನೆ ನೀಡಲಿದ್ದಾರೆ ಮೋದಿ
“ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿಟ್ಟೂ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ 76,372 ಮತಗಳಿಂದ ಲೋಕ್ ಇನ್ಸಾಫ್ ಪಕ್ಷದ ಸಿಮರ್ಜೀತ್ ಸಿಂಗ್ ಬೈನ್ಸ್ ಅವರನ್ನು ಸೋಲಿಸಿದರು. 2014 ರಲ್ಲಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹರ್ವಿಂದರ್ ಸಿಂಗ್ ಫೂಲ್ಕಾ ಅವರನ್ನು 19,709 ಮತಗಳ ಅಂತರದಿಂದ ಸೋಲಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Tue, 26 March 24