ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಸಂದೇಶ್ಖಾಲಿ ಸಂತ್ರಸ್ತೆ ರೇಖಾ ಪಾತ್ರಾರನ್ನು ‘ಶಕ್ತಿ ಸ್ವರೂಪ’ ಎಂದು ಬಣ್ಣಿಸಿದ ಪ್ರಧಾನಿ ಮೋದಿ
ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶ್ಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಫೋನ್ ಕರೆ ಮಾಡಿದ್ದು, ಪ್ರಚಾರದ ಸಿದ್ಧತೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಮಾತನಾಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೆಹಲಿ ಮಾರ್ಚ್ 26: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಮತ್ತು ಸಂದೇಶ್ಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ (Rekha Patra) ಅವರಿಗೆ ಫೋನ್ ಕರೆ ಮಾಡಿ ಪ್ರಚಾರದ ಸಿದ್ಧತೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿಯವರು ಆಕೆಯನ್ನು ‘ಶಕ್ತಿ ಸ್ವರೂಪ’ ಎಂದು ಬಣ್ಣಿಸಿದ್ದಾರೆ. ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದ 19 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಸಂದೇಶ್ಖಾಲಿ ಪ್ರದೇಶಕ್ಕೆ ಒಳಪಡುವ ಬಸಿರ್ಹತ್ ಕ್ಷೇತ್ರದಿಂದ ರೇಖಾ ಪಾತ್ರಾ ಅವರನ್ನು ಕಣಕ್ಕಿಳಿಸಿದೆ.
ಪಾತ್ರಾ ಗೃಹಿಣಿಯಾಗಿದ್ದು, ಈಗ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ಮತ್ತು ಅವರ ಸಹಚರರಿಂದ ಚಿತ್ರಹಿಂಸೆ ಮತ್ತು ಕಿರುಕುಳಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.
ಬಸಿರ್ಹತ್ ಅಭ್ಯರ್ಥಿ ರೇಖಾ ಪಾತ್ರಾ ಅವರ ಪ್ರಚಾರ ಮತ್ತು ಬಿಜೆಪಿಗೆ ಬೆಂಬಲದ ಬಗ್ಗೆ ಪ್ರಧಾನಿ ಮೋದಿ ವಿಚಾರಿಸಿದ್ದು, ಸಂದೇಶ್ಖಾಲಿ ಸಂತ್ರಸ್ತರ ಸಂಕಟವನ್ನೂ ಅವರು ಆಲಿಸಿದ್ದಾರೆ.
ಮೋದಿ ಮಾತು
#LISTEN | The conversation between Prime Minister Narendra Modi and Rekha Patra, a BJP candidate from Basirhat and one of the Sandeshkhali victims.
She says, “…The situation in Sandeshkhali has been a matter of concern since 2011. If we were allowed to vote freely then this… pic.twitter.com/Y4KB7k1OKE
— ANI (@ANI) March 26, 2024
“ನೀವು ಸಂದೇಶ್ಖಾಲಿಯಲ್ಲಿ ದೊಡ್ಡ ಹೋರಾಟವನ್ನು ಮಾಡಿದ್ದೀರಿ, ನೀವು ಶಕ್ತಿ ಸ್ವರೂಪ. ಅಂತಹ ಶಕ್ತಿಶಾಲಿಗಳನ್ನು ನೀವು ಜೈಲಿಗೆ ಕಳುಹಿಸಿದ್ದೀರಿ. ನೀವು ತುಂಬಾ ಧೈರ್ಯದ ಕಾರ್ಯವನ್ನು ಮಾಡಿದ್ದೀರಿ ”ಎಂದು ಪ್ರಧಾನ ಮಂತ್ರಿ ಪತ್ರಾ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾರೆ.
“ಮಹಿಳೆಯರ ಬೆಂಬಲದಿಂದಾಗಿ ನಾನು ಅದನ್ನು ಮಾಡಲು ಸಾಧ್ಯವಾಯಿತು. ಅವರು ತೋರಿಸಿದ ಹಾದಿಯಲ್ಲಿ ನಾನು ಸಾಗುತ್ತೇನೆ ಮತ್ತು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ” ಎಂದು ಪಾತ್ರಾ ಉತ್ತರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದರು.
ಇದನ್ನೂ ಓದಿ: ಸಂದೇಶ್ಖಾಲಿ ಸಂತ್ರಸ್ತೆಯನ್ನು ಕಣಕ್ಕಿಳಿಸಿದ ಬಿಜೆಪಿ, ಎಲ್ಲೆಡೆ ರೇಖಾ ವಿರೋಧಿ ಪೋಸ್ಟರ್ಗಳು
“ಸಂದೇಶ್ಖಾಲಿ ಮಹಿಳೆಯರು ಧ್ವನಿ ಎತ್ತುವುದು ಸಾಮಾನ್ಯ ವಿಷಯವಲ್ಲ. ನಿಮ್ಮ ಧೈರ್ಯವು ಬಂಗಾಳದ ನಾರಿ ಶಕ್ತಿಯು ನಮ್ಮನ್ನು ಆಶೀರ್ವದಿಸುತ್ತದೆ ಎಂದು ತೋರಿಸುತ್ತದೆ. ಕೇಂದ್ರದಿಂದ ಆಗಿರುವ ಕೆಲಸಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಒತ್ತಾಯಿಸುತ್ತೇನೆ. ಬಂಗಾಳದ ಟಿಎಂಸಿ ಸರ್ಕಾರದಿಂದ ಜನರು ಬೇಸತ್ತಿದ್ದಾರೆ, ಇದು ರಾಜ್ಯದಲ್ಲಿ ಕೇಂದ್ರ ಯೋಜನೆಗಳನ್ನು ಜಾರಿಗೆ ತರಲು ಬಿಡುವುದಿಲ್ಲ ”ಎಂದು ಪಾತ್ರಾ ಜತೆ ಮಾತನಾಡಿದ ಮೋದಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Tue, 26 March 24