ಸಂದೇಶ್ಖಾಲಿ ಸಂತ್ರಸ್ತೆಯನ್ನು ಕಣಕ್ಕಿಳಿಸಿದ ಬಿಜೆಪಿ, ಎಲ್ಲೆಡೆ ರೇಖಾ ವಿರೋಧಿ ಪೋಸ್ಟರ್‌ಗಳು
ಲೋಕಸಭಾ ಚುನಾವಣೆಗೆ ಸಂದೇಶ್ಖಾಲಿ ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರನ್ನು ಬಿಜೆಪಿ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಇದಾದ ಬಳಿಕ ಎಲ್ಲೆಡೆ ರೇಖಾ ವಿರೋಧಿ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಬಸಿರ್‌ಹತ್ ಲೋಕಸಭಾ ಕ್ಷೇತ್ರದಿಂದ ರೇಖಾ ಪಾತ್ರಾ ಅಭ್ಯರ್ಥಿ ಎಂದು ಘೋಷಿಸಿದ ನಂತರ, ಪ್ರದೇಶದ ಕೆಲವು ಸ್ಥಳಗಳಲ್ಲಿ ಅವರ ವಿರುದ್ಧ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
2024 ರ ಲೋಕಸಭಾ ಚುನಾವಣೆಗೆ ಸಂದೇಶ್ಖಾಲಿ(Sandesh Khali) ಪ್ರಕರಣದ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರನ್ನು ಬಿಜೆಪಿ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಇದಾದ ಬಳಿಕ ಎಲ್ಲೆಡೆ ರೇಖಾ ವಿರೋಧಿ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಬಸಿರ್‌ಹತ್ ಲೋಕಸಭಾ ಕ್ಷೇತ್ರದಿಂದ ರೇಖಾ ಪಾತ್ರಾ ಅಭ್ಯರ್ಥಿ ಎಂದು ಘೋಷಿಸಿದ ನಂತರ, ಪ್ರದೇಶದ ಕೆಲವು ಸ್ಥಳಗಳಲ್ಲಿ ಅವರ ವಿರುದ್ಧ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ತೃಣಮೂಲ ಕಾಂಗ್ರೆಸ್ ನಾಯಕ ಷಹಜಾನ್ ಶೇಖ್ ಮತ್ತು ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಅವರ ಉಮೇದುವಾರಿಕೆಯನ್ನು ಖಂಡಿಸಿವೆ. ಪಾತ್ರಾ ವಿರುದ್ಧ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಬಿಜೆಪಿ ಬೆರಳು ತೋರಿಸಿದೆ.
ಆದರೆ ಟಿಎಂಸಿ ಆರೋಪವನ್ನು ತಿರಸ್ಕರಿಸಿದೆ. ಇನ್ನೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗದ ಪಾತ್ರಾ ಅವರನ್ನು ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಸಂದೇಶ್ಖಾಲಿ ಬಸಿರ್ಹತ್ ಕ್ಷೇತ್ರದ ಭಾಗವಾಗಿದೆ. ಬಿಜೆಪಿಯು ಈ ಸ್ಥಾನದಿಂದ ಪಾತ್ರಾ ಅವರ ನಾಮನಿರ್ದೇಶನವನ್ನು ಘೋಷಿಸಿದ ಒಂದು ದಿನದ ನಂತರ ಮಾರ್ಚ್ 25 ರಂದು ಪೋಸ್ಟರ್‌ಗಳನ್ನು ಹಾಕಿರುವುದು ಕಂಡುಬಂದಿದೆ. ಅದರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರೇಖಾ ನಮಗೆ ಬೇಡ ಎಂದು ಬರೆಯಲಾಗಿತ್ತು.
ಮತ್ತಷ್ಟು ಓದಿ: Lok Sabha Election: ಸಂದೇಶ್ಖಾಲಿ ದುರ್ಘಟನೆಯ ಸಂತ್ರಸ್ತೆಯನ್ನೇ ಕಣಕ್ಕಿಳಿಸಿದ ಬಿಜೆಪಿ
ಪಾತ್ರಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಕ್ಷೇತ್ರದ ಕೆಲ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ಟಿಎಂಸಿಯ ಶಹಜಹಾನ್ ಷೇಖ್ನಿಂದ ಲೈಂಗಿಕ ಕಿರುಕುಳ ನಡೆದಿತ್ತು, ಈ ವಿಚಾರವನ್ನು ಬಯಲಿಗೆಳೆದು ಅವರ ವಿರುದ್ಧ ಪ್ರತಿಭಟನೆ ಮಾಡಿದವರಲ್ಲಿ ರೇಖಾ ಮೊದಲಿಗರು.
ಚಲನಚಿತ್ರ ನಟಿ ನುಸ್ರತ್ ಜಹಾನ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಬಸಿರ್‌ಹತ್‌ನಿಂದ ಗೆದ್ದಿದ್ದರು. ಈ ಬಾರಿ ತೃಣಮೂಲ ಕಾಂಗ್ರೆಸ್ ನುಸ್ರತ್ ಜಹಾನ್ ಗೆ ಟಿಕೆಟ್ ನೀಡಿಲ್ಲ. ಲೋಕಸಭೆ ಚುನಾವಣೆ ಪಶ್ಚಿಮ ಬಂಗಾಳದ 42 ಸಂಸದೀಯ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದ್ದು, ಇದು ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.
ಹಂತ 1 (ಏಪ್ರಿಲ್ 19): ಕೂಚ್‌ಬೆಹಾರ್, ಅಲಿಪುರ್‌ದುವಾರ್ ಮತ್ತು ಜಲ್ಪೈಗುರಿ ಹಂತ 2 (ಏಪ್ರಿಲ್ 26): ಡಾರ್ಜಿಲಿಂಗ್, ರಾಯಗಂಜ್ ಮತ್ತು ಬಲೂರ್‌ಘಾಟ್ ಹಂತ 3 (ಮೇ 7): ಮಲ್ದಹಾ ಉತ್ತರ, ಮಲ್ದಹಾ ದಕ್ಷಿಣ, ಜಂಗಿಪುರ ಮತ್ತು ಮುರ್ಷಿದಾಬಾದ್ ಹಂತ 4 (ಮೇ 13): ಬಹರಂಪುರ್, ಕೃಷ್ಣನಗರ, ರಾಣಾಘಾಟ್, ಬರ್ಧಮಾನ್ ಪುರ್ಬಾ, ಬರ್ಧಮಾನ್-ದುರ್ಗಾಪುರ, ಅಸನ್ಸೋಲ್, ಬೋಲ್ಪುರ್ ಮತ್ತು ಬಿರ್ಭೂಮ್ ಹಂತ 5 (ಮೇ 20): ಬಂಗಾವ್, ಬರಾಕ್‌ಪುರ, ಹೌರಾ, ಉಲುಬೇರಿಯಾ, ಶ್ರೀರಾಂಪುರ, ಹೂಗ್ಲಿ ಮತ್ತು ಆರಂಬಾಗ್ ಹಂತ 6 (ಮೇ 25): ತಮ್ಲುಕ್, ಕಂಠಿ, ಘಟಾಲ್, ಜಾರ್ಗ್ರಾಮ್, ಮೇದಿನಿಪುರ್, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್ ಹಂತ 7 (ಜೂನ್ 1): ದಮ್ ದಮ್, ಬರಾಸತ್, ಬಸಿರ್ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‌ಪುರ, ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ.
2019 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 22 ಸ್ಥಾನಗಳನ್ನು ಗಳಿಸಿದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದ 42 ಸಂಸದೀಯ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಕೇವಲ ಎರಡು ಸ್ಥಾನಗಳಿಗೆ ಸೀಮಿತವಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:17 am, Tue, 26 March 24