AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Election: ಸಂದೇಶ್​ಖಾಲಿ ದುರ್ಘಟನೆಯ ಸಂತ್ರಸ್ತೆಯನ್ನೇ ಕಣಕ್ಕಿಳಿಸಿದ ಬಿಜೆಪಿ

ಸಂದೇಶ್​ಖಾಲಿ ಸಂತ್ರಸ್ತೆ ರೇಖಾ ಪಾತ್ರಾ(Rekha Patra) ಅವರನ್ನು ಬಿಜೆಪಿ ಈ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಸಂದೇಶ್​ಖಾಲಿಯಲ್ಲಿ ಮಹಿಳೆಯರು ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆ ಆರೋಪ ಮಾಡಿದ್ದರು. ಇದಾದ ನಂತರ ಟಿಎಂಸಿ ಷಹಜಹಾನ್ ಅವರನ್ನು ಪಕ್ಷದಿಂದ ಹೊರಹಾಕಿತು.

Lok Sabha Election: ಸಂದೇಶ್​ಖಾಲಿ ದುರ್ಘಟನೆಯ ಸಂತ್ರಸ್ತೆಯನ್ನೇ ಕಣಕ್ಕಿಳಿಸಿದ ಬಿಜೆಪಿ
ಬಿಜೆಪಿ
ನಯನಾ ರಾಜೀವ್
|

Updated on: Mar 25, 2024 | 8:49 AM

Share

ಕಳೆದ ಹಲವು ದಿನಗಳಿಂದ ಪಶ್ಚಿಮ ಬಂಗಾಳದ ಸಂದೇಶ್​ಖಾಲಿ(Sandeshkhali) ಚರ್ಚೆಯಲ್ಲಿದೆ. ಈ ಪ್ರದೇಶವು ಬಸಿರ್ಹತ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಸಂದೇಶ್​ಖಾಲಿ ಸಂತ್ರಸ್ತೆ ರೇಖಾ ಪಾತ್ರಾ(Rekha Patra) ಅವರನ್ನು ಬಿಜೆಪಿ ಈ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಸಂದೇಶ್​ಖಾಲಿಯಲ್ಲಿ ಮಹಿಳೆಯರು ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆ ಆರೋಪ ಮಾಡಿದ್ದರು. ಇದಾದ ನಂತರ ಟಿಎಂಸಿ ಷಹಜಹಾನ್ ಅವರನ್ನು ಪಕ್ಷದಿಂದ ಹೊರಹಾಕಿತು.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಟ್ವಿಟ್ಟರ್‌ನಲ್ಲಿ ಬಿಜೆಪಿ ಬಂಗಾಳದ ಬಸಿರ್‌ಹತ್ ಕ್ಷೇತ್ರದಿಂದ ರೇಖಾ ಪಾತ್ರಾ ಅವರನ್ನು ಕಣಕ್ಕಿಳಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ. ಶೇಖ್ ಷಹಜಹಾನ್‌ನಿಂದ ನೊಂದ ಸಂದೇಶ್​ಖಾಲಿ ಸಂತ್ರಸ್ತರಲ್ಲಿ ರೇಖಾ ಪಾತ್ರಾ ಒಬ್ಬರು, ಮತ ಕೇಳುವ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೊಂದಿರುವ ಮತ್ತು ಅವರ ನಿರ್ಲಕ್ಷ್ಯಕ್ಕೆ ಬಲಿಯಾದ ಅವರಂತಹ ಮಹಿಳೆಯರ ಕಣ್ಣೀರು ಒರೆಸಲಿ. ಸಂದೇಶಖಾಲಿ ಮತ್ತು ಬಂಗಾಳದ ಮಹಿಳೆಯರೊಂದಿಗೆ ಬಿಜೆಪಿ ನಿಂತಿದೆ ಎಂದು ಬರೆದಿದ್ದಾರೆ.

ಮಾರ್ಚ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶಖಾಲಿಯಲ್ಲಿ ಮಹಿಳೆಯರನ್ನು ಭೇಟಿಯಾಗಿದ್ದರು. ಭಾರತೀಯ ಜನತಾ ಪಕ್ಷವು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಟಿಕೆಟ್ ನೀಡಿದೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು.

ಮತ್ತಷ್ಟು ಓದಿ: ಸಂದೇಶ್​​ಖಾಲಿ ಪ್ರಕರಣದಲ್ಲಿ ಷಹಜಹಾನ್‌ನನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಡಿಜಿಪಿ ಹೇಳಿದ್ದಾರೆ: ಎನ್‌ಸಿಡಬ್ಲ್ಯೂ ಅಧ್ಯಕ್ಷೆ

ಸಂದೇಶ್​ಖಾಲಿಯ ಮಹಿಳೆಯರ ಪರವಾಗಿ ಧ್ವನಿಯನ್ನು ಮೊದಲು ಎತ್ತಿದವರು ಅವರು, ಮೂವರು ಆರೋಪಿಗಳಾದ ಟಿಎಂಸಿ ಶಾಸಕ ಶೇಖ್ ಷಹಜಹಾನ್, ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಜೈಲು ಸೇರಿದ್ದಾರೆ.

ಲೋಕಸಭೆ ಚುನಾವಣೆ ಪಶ್ಚಿಮ ಬಂಗಾಳದ 42 ಸಂಸದೀಯ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯು ಏಳು ಹಂತಗಳಲ್ಲಿ ನಡೆಯಲಿದ್ದು, ಇದು ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.

ಹಂತ 1 (ಏಪ್ರಿಲ್ 19): ಕೂಚ್‌ಬೆಹಾರ್, ಅಲಿಪುರ್‌ದುವಾರ್ ಮತ್ತು ಜಲ್ಪೈಗುರಿ ಹಂತ 2 (ಏಪ್ರಿಲ್ 26): ಡಾರ್ಜಿಲಿಂಗ್, ರಾಯಗಂಜ್ ಮತ್ತು ಬಲೂರ್‌ಘಾಟ್ ಹಂತ 3 (ಮೇ 7): ಮಲ್ದಹಾ ಉತ್ತರ, ಮಲ್ದಹಾ ದಕ್ಷಿಣ, ಜಂಗಿಪುರ ಮತ್ತು ಮುರ್ಷಿದಾಬಾದ್ ಹಂತ 4 (ಮೇ 13): ಬಹರಂಪುರ್, ಕೃಷ್ಣನಗರ, ರಾಣಾಘಾಟ್, ಬರ್ಧಮಾನ್ ಪುರ್ಬಾ, ಬರ್ಧಮಾನ್-ದುರ್ಗಾಪುರ, ಅಸನ್ಸೋಲ್, ಬೋಲ್ಪುರ್ ಮತ್ತು ಬಿರ್ಭೂಮ್ ಹಂತ 5 (ಮೇ 20): ಬಂಗಾವ್, ಬರಾಕ್‌ಪುರ, ಹೌರಾ, ಉಲುಬೇರಿಯಾ, ಶ್ರೀರಾಂಪುರ, ಹೂಗ್ಲಿ ಮತ್ತು ಆರಂಬಾಗ್ ಹಂತ 6 (ಮೇ 25): ತಮ್ಲುಕ್, ಕಂಠಿ, ಘಟಾಲ್, ಜಾರ್ಗ್ರಾಮ್, ಮೇದಿನಿಪುರ್, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್ ಹಂತ 7 (ಜೂನ್ 1): ದಮ್ ದಮ್, ಬರಾಸತ್, ಬಸಿರ್ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‌ಪುರ, ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ.

2019 ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 22 ಸ್ಥಾನಗಳನ್ನು ಗಳಿಸಿದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದ 42 ಸಂಸದೀಯ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಕೇವಲ ಎರಡು ಸ್ಥಾನಗಳಿಗೆ ಸೀಮಿತವಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ