Lok Sabha Election: ವರುಣ್ ಗಾಂಧಿ ಬದಲಾಗಿ ತಾಯಿ ಮೇನಕಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ
ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಗಳನ್ನು ಬಿಡುಗಡೆ ಮಾಡುತ್ತಿವೆ. ಲೋಕಸಭಾ ಚುನಾವಣೆ 2024ರ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ಬಿಜೆಪಿ ಬಿಡುಗಡೆ ಮಾಡಿದ್ದು, ವರುಣ್ ಗಾಂಧಿ ಹೆಸರು ಕೈಬಿಟ್ಟಿದ್ದು ಅವರ ತಾಯಿ ಮೇನಕಾ ಗಾಂಧಿಗೆ ಸುಲ್ತಾನ್ಪುರದಿಂದ ಟಿಕೆಟ್ ನೀಡಲಾಗಿದೆ.
ಲೋಕಸಭಾ ಚುನಾವಣೆ 2024ರ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಭಾನುವಾರ ಬಿಜೆಪಿ ಬಿಡುಗಡೆ ಮಾಡಿದ್ದು, ವರುಣ್ ಗಾಂಧಿ(Varun Gandhi) ಹೆಸರು ಕೈಬಿಟ್ಟಿದ್ದು ಅವರ ತಾಯಿ ಮೇನಕಾ ಗಾಂಧಿಗೆ ಸುಲ್ತಾನ್ಪುರದಿಂದ ಟಿಕೆಟ್ ನೀಡಲಾಗಿದೆ. ಈ ಪಟ್ಟಿಯಲ್ಲಿ ಬಿಜೆಪಿ ಉತ್ತರ ಪ್ರದೇಶದ 13 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಪಕ್ಷವು ಪಿಲಿಭಿತ್ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ. ಈ ಬಾರಿ ಬಿಜೆಪಿ ಹಾಲಿ ಸಂಸದ ವರುಣ್ ಗಾಂಧಿಯನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿಲ್ಲ.
ಮೇನಕಾ ಗಾಂಧಿ 1989 ರಲ್ಲಿ ಮೊದಲ ಬಾರಿಗೆ ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು. ನಂತರ ಚುನಾವಣೆಯಲ್ಲಿ ಸುಮಾರು 1.31 ಲಕ್ಷ ಅಂತರದಿಂದ ಗೆದ್ದಿದ್ದರು. ಇದಾದ ನಂತರ ಗಾಂಧಿ ಕುಟುಂಬ ಪ್ರತಿ ಬಾರಿಯೂ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದೆ. ಮೇನಕಾ ಗಾಂಧಿ 2004 ರವರೆಗೆ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಇದರ ನಂತರ, 2009 ರಲ್ಲಿ, ಮೇನಕಾ ಗಾಂಧಿ ಅವರು ತಮ್ಮ ಮಗ ವರುಣ್ ಗಾಂಧಿಗಾಗಿ ಈ ಸ್ಥಾನವನ್ನು ಖಾಲಿ ಮಾಡಿದರು. ಇದಾದ ನಂತರ 2009ರಲ್ಲಿ ವರುಣ್ ಗಾಂಧಿ ಗೆದ್ದಿದ್ದರು.
ಪ್ರತಿ ಬಾರಿಯೂ ಅಭ್ಯರ್ಥಿ ಬದಲಾಗುತ್ತಿದ್ದರು
2009ರಲ್ಲಿ ಮೊದಲ ಬಾರಿಗೆ ವರುಣ್ ಗಾಂಧಿ ಈ ಕ್ಷೇತ್ರದಿಂದ ಸುಮಾರು 2.80 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಇದಾದ ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಮೇನಕಾ ಗಾಂಧಿಗೆ ಪಿಲಿಭಿತ್‌ನಿಂದ ಟಿಕೆಟ್ ನೀಡಿತ್ತು. ಆಗ ಸುಮಾರು 3 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.
ಮತ್ತಷ್ಟು ಓದಿ:Lok Sabha Election: ಬಿಜೆಪಿ ಐದನೇ ಪಟ್ಟಿಯಲ್ಲಿ ವರುಣ್ ಗಾಂಧಿ, ವಿಕೆ ಸಿಂಗ್ ಹೆಸರು ಕೈ ಬಿಡುವ ಸಾಧ್ಯತೆ
ಆದರೆ, ಇದಾದ ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಅಭ್ಯರ್ಥಿಯನ್ನು ಬದಲಿಸಿ ವರುಣ್ ಗಾಂಧಿ ಅವರನ್ನು ಪಿಲಿಭಿತ್‌ನ ಅಭ್ಯರ್ಥಿಯನ್ನಾಗಿ ಮಾಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ವರುಣ್ ಗಾಂಧಿ ಬಿಜೆಪಿ ಟಿಕೆಟ್‌ನಲ್ಲಿ ಸುಮಾರು 2.55 ಲಕ್ಷ ಅಂತರದಿಂದ ಗೆದ್ದಿದ್ದರು.
ಆದರೆ ಈ ಗೆಲುವಿನ ನಂತರ ವರುಣ್ ಗಾಂಧಿ ತಮ್ಮ ರಾಗ ಬದಲಿಸಲು ಆರಂಭಿಸಿದ್ದಾರೆ. ಬಹಳ ಕಾಲ ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡು ಸರ್ಕಾರದ ಹಲವು ಯೋಜನೆಗಳ ಬಗ್ಗೆ ಪ್ರಶ್ನೆ ಎತ್ತಿದ್ದರು. ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದ ಜಿತಿನ್ ಪ್ರಸಾದ್ ಅವರನ್ನು ಬಿಜೆಪಿ ಈ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಅಂದರೆ 1989ರ ನಂತರ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದಿಂದ ಯಾರೂ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ.
ಬಾಲಿವುಡ್ ನಟಿ ಕಂಗನಾ ರಣಾವತ್, ರಾಮಾಯಣ ಧಾರಾವಾಹಿಯ ರಾಮ್ ಅರುಣ್ ಗೋವಿಲ್ ಮತ್ತು ನವೀನ್ ಜಿಂದಾಲ್ ಹಾಗೂ ರಂಜಿತ್ ಚೌತಾಲಾರನ್ನು ಕಣಕ್ಕಿಳಿಸಲಾಗಿದೆ. ವಯನಾಡಿನಿಂದ ರಾಹುಲ್ ಗಾಂಧಿ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ.
ಮತ್ತಷ್ಟು ಓದಿ: ಬಿಜೆಪಿ ಟಿಕೆಟ್ ಕೈತಪ್ಪಿದರೆ ವರುಣ್ ಗಾಂಧಿ ಸ್ವತಂತ್ರ ಸ್ಪರ್ಧೆ ಸಾಧ್ಯತೆ
ಜಾರ್ಖಂಡ್ನಲ್ಲಿ ಈಗಷ್ಟೆ ಪಕ್ಷಕ್ಕೆ ಸೇರ್ಪಡೆಗೊಂಡ ಸೀತಾ ಸೊರೆನ್ಗೆ ಟಿಕೆಟ್ ನೀಡಲಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಸತ್ಯದೇವ್ ಪಚೌರಿ ಬದಲಿಗೆ ರಮೇಶ್ ಅವಸ್ಥಿಗೆ ಟಿಕೆಟ್ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 am, Mon, 25 March 24