
ಚೆನ್ನೈ, ಆಗಸ್ಟ್ 31: ತಮಿಳುನಾಡು ರಾಜಧಾನಿ ನಗರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಚೆನ್ನೈನ ಕೆಲವೆಡೆ ಮೇಘಸ್ಫೋಟ (cloud burst) ಸಂಭವಿಸಿ ತೀವ್ರ ಮಟ್ಟದ ಮಳೆಯಾಗಿದೆ. ಹಲವೆಡೆ 200 ಎಂಎಂಗಿಂತಲೂ ಹೆಚ್ಚು ಮಟ್ಟದ ಮಳೆ (heavy rainfall) ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮಾಹಿತಿ ನೀಡಿದೆ. ಮನಾಲಿಯಲ್ಲಿ 270 ಎಂಎಂ, ನ್ಯೂ ಮನಾಲಿ ಟೌನ್ನಲ್ಲಿ 260 ಎಂಎಂ, ವಿಮ್ಕೋ ನಗರ್ನಲ್ಲಿ 230 ಎಂಎಂ ಮಳೆಯಾಗಿದೆ ಎಂದು ಹೇಳಲಾಗಿದೆ. ಒಟ್ಟು ಆರು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಐಎಂಡಿ ಹೇಳಿದೆ.
ಈ ಮೇಲಿನ ಸ್ಥಳಗಳಲ್ಲಿ ಮೇಘಸ್ಫೋಟದಿಂದ ಇಷ್ಟು ತೀವ್ರ ಮಳೆಯಾಗಿದೆ. ಇವಲ್ಲದೇ ಚೆನ್ನೈ ಇನ್ನೂ ಹಲವು ಸ್ಥಳಗಳಲ್ಲೂ ಭಾರೀ ಮಳೆಯಾಗಿದೆ. ಇಂದು ಭಾನುವಾರಕ್ಕೆ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ಕೊಟ್ಟಿಲ್ಲ.
ಇದನ್ನೂ ಓದಿ: Modi Mann Ki Baat: ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ: ಪ್ರಧಾನಿ ಮೋದಿ
ಕ್ಲೌಡ್ಬರ್ಸ್ಟ್ ಅಥವಾ ಮೇಘಸ್ಫೋಟ ಎಂಬುದು ತೀವ್ರ ಮಳೆಗೆ ಉಪಯೋಗಿಸುವ ಪದ. 2030 ಚದರ ಕಿಮೀ ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 100 ಎಂಎಂ ಮಳೆಯಾದಾಗ ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಇದು ವಿಶ್ವ ಹವಾಮಾನ ಸಂಸ್ಥೆ ಹಾಗೂ ಭಾರತೀಯ ಹವಾಮಾನ ಇಲಾಖೆ ಮೇಘಸ್ಫೋಟವೆಂದು ವರ್ಗೀಕರಿಸಲು ನಿಗದಿ ಮಾಡಿರುವ ಮಾನದಂಡ.
ನಿನ್ನೆ ಶನಿವಾರ ರಾತ್ರಿ ಆರು ಸ್ಥಳಗಳಲ್ಲಿ ಗಂಟೆಗೆ 10 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ. ಇದು ಮೇಘ ಸ್ಫೋಟವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮನಾಲಿ, ವಿಮ್ಕೋ ನಗರ್, ಕೊರಟ್ಟೂರು, ನ್ಯೂ ಮಲಾನಿ ಟೌನ್, ಎಣ್ಣೋರ್ ಮೊದಲಾದ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ಅಯಪಕ್ಕಂ, ಪ್ಯಾರಿಸ್, ಅಂಬತ್ತೂರು, ನೇರಕುಂಡ್ರಂ, ಕೊಳತ್ತೂರು, ಕಾಸಿಮೆಡು, ರೆಡ್ ಹಿಲ್ಸ್ ಸೇರಿದಂತೆ ಚೆನ್ನೈ ಬಹುತೇಕ ಸ್ಥಳಗಳಲ್ಲಿ ಜೋರು ಮಳೆಯಾಗಿದೆ.
ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವದ ಮೇಲೆ ನಮ್ಮ ಸಂಬಂಧ ಮುಂದುವರೆಸಲು ಬದ್ಧ: ಜಿನ್ಪಿಂಗ್ಗೆ ಮೋದಿ ಸಂದೇಶ
ವಿಮಾನಗಳ ಮಾರ್ಗಬದಲಾವಣೆ
ಚೆನ್ನೈನಲ್ಲಿ ಭಾರೀಯ ಮಳೆಯಾಗುತ್ತಿದ್ದುದರಿಂದ, ಅಲ್ಲಿಗೆ ಹೊರಟಿದ್ದ ಮೂರು ಫ್ಲೈಟ್ಗಗಳನ್ನು ಬೆಂಗಳೂರಿಗೆ ಮಾರ್ಗಬದಲಾವಣೆ ಮಾಡಿ ಕಳುಹಿಸಲಾಗಿದೆ. ಫ್ರಾಂಕ್ಫುರ್ಟ್, ಮಂಗಳೂರು ಮತ್ತು ನವದೆಹಲಿಯಿಂದ ಚೆನ್ನೈಗೆ ಹೋಗಿದ್ದ ವಿಮಾನಗಳಿಗೆ, ಚೆನ್ನೈನಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಬೆಂಗಳೂರು ಏರ್ಪೋರ್ಟ್ಗೆ ಬರಬೇಕಾಯಿತು ಎಂದು ವರದಿಗಳು ಹೇಳಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ