ಸಂಜೆ ಹೈದರಾಬಾದ್‌ಗೆ BSY ಭೇಟಿ, ಕೊರೊನಾ ಮುಕ್ತಿಗಾಗಿ ವಿಶೇಷ ಪೂಜೆಯಲ್ಲಿ ಭಾಗಿ?

| Updated By: ಸಾಧು ಶ್ರೀನಾಥ್​

Updated on: Jul 25, 2020 | 1:10 PM

ಹೈದರಾಬಾದ್​: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ. ಇಂದು ಇಲ್ಲಿನ ನಿಗದಿತ ಕಾರ್ಯಕ್ರಮಗಳನ್ನ ಮುಗಿಸಿದ ನಂತರ ಸಿಎಂ ಯಡಿಯೂರಪ್ಪ ಹೈದಾರಾಬಾದ್‌ಗೆ ತೆರಳಿ ಅಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಹೊರವಲಯದಲ್ಲಿರುವ ಶ್ರೀರಾಮ್‌ ನಗರದ ಚಿನ್ನಜಿಯರ್‌ ಆಶ್ರಮದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಭಾಗವಹಿಸಲಿದ್ದಾರೆ. ಕೇವಲ ಬಿಎಸ್‌ವೈ ಮಾತ್ರವಲ್ಲ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಉಭಯ ನಾಯಕರು ಆಶ್ರಮದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಕೊರೊನಾ ಹೆಮ್ಮಾರಿಯಿಂದ ಮುಕ್ತಿಗಾಗಿ ಈ ವಿಶೇಷ […]

ಸಂಜೆ ಹೈದರಾಬಾದ್‌ಗೆ BSY ಭೇಟಿ, ಕೊರೊನಾ ಮುಕ್ತಿಗಾಗಿ ವಿಶೇಷ ಪೂಜೆಯಲ್ಲಿ ಭಾಗಿ?
ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
Follow us on

ಹೈದರಾಬಾದ್​: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ. ಇಂದು ಇಲ್ಲಿನ ನಿಗದಿತ ಕಾರ್ಯಕ್ರಮಗಳನ್ನ ಮುಗಿಸಿದ ನಂತರ ಸಿಎಂ ಯಡಿಯೂರಪ್ಪ ಹೈದಾರಾಬಾದ್‌ಗೆ ತೆರಳಿ ಅಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಹೊರವಲಯದಲ್ಲಿರುವ ಶ್ರೀರಾಮ್‌ ನಗರದ ಚಿನ್ನಜಿಯರ್‌ ಆಶ್ರಮದ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್‌ವೈ ಭಾಗವಹಿಸಲಿದ್ದಾರೆ. ಕೇವಲ ಬಿಎಸ್‌ವೈ ಮಾತ್ರವಲ್ಲ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಉಭಯ ನಾಯಕರು ಆಶ್ರಮದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಕೊರೊನಾ ಹೆಮ್ಮಾರಿಯಿಂದ ಮುಕ್ತಿಗಾಗಿ ಈ ವಿಶೇಷ ಪೂಜೆಯನ್ನ ಸ್ವಾಮೀಜಿಯವರು ಆಯೋಜಿಸಿದ್ದಾರೆನ್ನಲಾಗ್ತಿದೆ.

ಆದ್ರೆ ಈ ಪೂಜೆಯ ಸಂದರ್ಭದಲ್ಲಿ ಬಿಜೆಪಿಯ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಹೀಗೆ ಮೂರನೇ ರಾಜ್ಯದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರೋದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಯಾಕಂದ್ರೆ ಈ ಹಿಂದಿನ ಇಂಥ ಘಟನೆಗಳನ್ನ ನೆನಪಿಸಿಕೊಂಡರೆ ಭೇಟಿ ನಂತರ ಸಂಬಂಧಿಸಿದ ಮುಖ್ಯಮಂತ್ರಿಗಳ ಪಾಲಿಗೆ ಸಕಾರಾತ್ಮಕವಾದ ಬೆಳವಣಿಗೆಗಳು ನಡೆದಿಲ್ಲ!

Published On - 4:38 pm, Thu, 25 June 20