CNG Price Hike: ಬೆಲೆ ಏರಿಕೆ ಬಿಸಿ! ದೆಹಲಿಯಲ್ಲಿ ಸಿಎನ್​ಜಿ ದರ 2.5 ರೂಪಾಯಿ ಹೆಚ್ಚಳ

CNG Price Hike: ಬೆಲೆ ಏರಿಕೆ ಬಿಸಿ! ದೆಹಲಿಯಲ್ಲಿ ಸಿಎನ್​ಜಿ ದರ 2.5 ರೂಪಾಯಿ ಹೆಚ್ಚಳ
ಸಿಎನ್​ಜಿ (ಪ್ರಾತಿನಿಧಿಕ ಚಿತ್ರ)

CNG Price Hike in Delhi: ಬೆಲೆ ಏರಿಕೆಯಿಂದ ದೆಹಲಿಯಲ್ಲಿ ಸಿಎನ್​ಜಿ ಬೆಲೆ ಕೆಜಿಗೆ 64.11 ರೂಪಾಯಿ ಆಗಿದೆ. ಇದೀಗ ಮತ್ತೆ ದರ ಹೆಚ್ಚಿದ್ದು ಇಂದಿನಿಂದಲೇ (ಏಪ್ರಿಲ್ 4) ನೂತನ ದರ ಜಾರಿ ಆಗಲಿದೆ. ಇದಕ್ಕೂ ಮೊದ,ಲು ಏಪ್ರಿಲ್ 1 ರಂದು ಸಿಎನ್​ಜಿ ಬೆಲೆ ಕೆಜಿಗೆ 80 ಪೈಸೆ ಹೆಚ್ಚಿಸಲಾಗಿತ್ತು.

TV9kannada Web Team

| Edited By: ganapathi bhat

Apr 04, 2022 | 9:41 AM

ದೆಹಲಿ: ಜನಸಾಮಾನ್ಯರು ಮತ್ತೊಮ್ಮೆ ಬೆಲೆ ಏರಿಕೆಯಿಂದ ತತ್ತರಿಸಿ ಹೋಗುವಂತಾಗಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಏರಿಕೆ ಕಂಡಿದೆ. ಇದೀಗ (ಏಪ್ರಿಲ್ 4, 2022) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಸಿಎನ್​ಜಿ ಬೆಲೆ ಹೆಚ್ಚಳವಾಗಿದೆ. ದೆಹಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ದೆಹಲಿಯಲ್ಲಿ ಸಿಎನ್​ಜಿ ಬೆಲೆಯನ್ನು ಪ್ರತಿ ಕೆಜಿಗೆ 2.5 ರೂಪಾಯಿ ಹೆಚ್ಚಳ ಮಾಡಿದೆ. ಬೆಲೆ ಏರಿಕೆಯಿಂದ ದೆಹಲಿಯಲ್ಲಿ ಸಿಎನ್​ಜಿ ಬೆಲೆ ಕೆಜಿಗೆ 64.11 ರೂಪಾಯಿ ಆಗಿದೆ. ಇದೀಗ ಮತ್ತೆ ದರ ಹೆಚ್ಚಿದ್ದು ಇಂದಿನಿಂದಲೇ (ಏಪ್ರಿಲ್ 4) ನೂತನ ದರ ಜಾರಿ ಆಗಲಿದೆ. ಇದಕ್ಕೂ ಮೊದ,ಲು ಏಪ್ರಿಲ್ 1 ರಂದು ಸಿಎನ್​ಜಿ ಬೆಲೆ ಕೆಜಿಗೆ 80 ಪೈಸೆ ಹೆಚ್ಚಿಸಲಾಗಿತ್ತು.

ಇತ್ತ ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತವಾಗಿ ಏರಿಕೆ ಮಾಡಲಾಗುತ್ತಿದ್ದು, ಇಂದಿನ ಬೆಲೆ ಏರಿಕೆಯ ಬಳಿಕ (ಏಪ್ರಿಲ್ 4, 2022) ಇಂಧನ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಮಾರ್ಚ್ 22ರಂದು ಆರಂಭವಾದ ಬೆಲೆ ಏರಿಕೆ ಸತತವಾಗಿ ಹೆಚ್ಚುತ್ತಲೇ ಇದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿದಿನ ಎನ್ನುವಂತೆ ಏರುತ್ತಲೇ ಇದೆ. ಅದರ ಪರಿಣಾಮ ಕಳೆದ ಎರಡು ವಾರಗಳಲ್ಲಿ (14 ದಿನ) ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ ಸರಾಸರಿ ₹ 8.40 ಹೆಚ್ಚಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಇಂಧನ ಬೆಲೆಗಳನ್ನು ದಿನಕ್ಕೆ ಪ್ರತಿ ಲೀಟರ್​ಗೆ ತಲಾ 80 ಪೈಸೆಯಂತೆ ಹೆಚ್ಚಿಸಲಾಗಿಯಿತು. ನಂತರದ ದಿನಗಳಲ್ಲಿ ಪೆಟ್ರೋಲ್ ಧಾರಣೆಯನ್ನು ಲೀಟರ್​ಗೆ 50 ಮತ್ತು 30, ಮತ್ತೆ 80 ಪೈಸೆಯಷ್ಟು ಹೆಚ್ಚಿಸಲಾಯಿತು. ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್​ಗೆ 40 ಪೈಸೆ ಹೆಚ್ಚಿಸಲಾಗಿದೆ.

ದೆಹಲಿಯಲ್ಲಿಂದು ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹ 103.81 ಮುಟ್ಟಿದೆ. ಲೀಟರ್ ಡೀಸೆಲ್ ಬೆಲೆ ₹ 95.07 ತಲುಪಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್​ ₹ 118.83, ಡೀಸೆಲ್ ₹ 103.07ಕ್ಕೆ ಮಾರಾಟವಾಗುತ್ತಿದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 109.34 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.42 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 113.03 ರೂ. ಡೀಸೆಲ್ ಬೆಲೆ ಲೀಟರ್​ಗೆ 98.22 ರೂ. ಆಗಿದೆ.

ಕ್ಯಾಬ್​ನಲ್ಲಿ ಎಸಿ ಸೌಲಭ್ಯ ನೀಡುವುದಿಲ್ಲ ಎಂದ ಕ್ಯಾಬ್ ಚಾಲಕ

ದೆಹಲಿಯ ಕ್ಯಾಬ್ ಚಾಲಕರೊಬ್ಬರು ಸಿಎನ್​ಜಿ ಬೆಲೆ ಏರಿಕೆ ಬಗ್ಗೆ ಮಾತನಾಡಿ, ಈ ಬೆಲೆ ಹೆಚ್ಚಳ ಪರಿಣಾಮವಾಗಿ ನಾವು ಕ್ಯಾಬ್​ನ ಎಸಿ ಸೇವೆ ಒದಗಿಸುವುದಿಲ್ಲ. ಹೆಚ್ಚಿದ ಬೆಲೆಯು ನಮ್ಮ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಎಸಿ ಸೌಲಭ್ಯ ನೀಡಿದರೆ ಮತ್ತಷ್ಟು ಹೊರೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್​​ನಿಂದ 3 ಹಂತದ ಅಭಿಯಾನ; ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗೆ ಹಾರ ಹಾಕಿ ಪ್ರತಿಭಟಿಸಲು ನಿರ್ಧಾರ

ಇದನ್ನೂ ಓದಿ: Petrol Diesel Price Hike: ಮತ್ತೆ 110 ರೂ.ಗಳತ್ತ ಪೆಟ್ರೋಲ್, ಡೀಸೆಲ್ ಬೆಲೆಯೂ ಏರಿಕೆ; ಇಂಧನ ದರ ಎಷ್ಟಾಗಿದೆ? ಇಲ್ಲಿ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada