ಪೂಂಚ್​​ನ ಹಳ್ಳಿಯೊಂದರಲ್ಲಿದ್ದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ; ಚೈನೀಸ್​ ಪಿಸ್ತೂಲ್ ವಶ​

ಪೂಂಚ್​​ನ ಹಳ್ಳಿಯೊಂದರಲ್ಲಿದ್ದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ; ಚೈನೀಸ್​ ಪಿಸ್ತೂಲ್ ವಶ​
ಪ್ರಾತಿನಿಧಿಕ ಚಿತ್ರ

ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ತಡೆಗಟ್ಟಲು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ನಿನ್ನೆ ಬಂಡಿಪೋರಾ ಪೊಲೀಸರು ಎರಡು ಭಯೋತ್ಪಾದನಾ ಚಟುವಟಿಕೆ ಘಟಕಗಳ ಮೇಲೆ ದಾಳಿ ನಡೆಸಿದ್ದರು.

TV9kannada Web Team

| Edited By: Lakshmi Hegde

Apr 04, 2022 | 10:17 AM

ಜಮ್ಮು-ಕಾಶ್ಮೀರದ (Jammu Kashmir)ಪೂಂಚ್​ ಜಿಲ್ಲೆಯಲ್ಲಿ, ಗಡಿ ನಿಯಂತ್ರಣ ರೇಖೆ ಬಳಿಯೇ ಇರುವ ನೂರ್​ಕೋಟೆ ಹಳ್ಳಿಯಲ್ಲಿ ಭಯೋತ್ಪಾದಕರ ಅಡಗುತಾಣಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿದ್ದರು. ಭಯೋತ್ಪಾದಕರ ಈ ಅಡಗುತಾಣಗಳಲ್ಲಿ ಚೈನೀಸ್ ಪಿಸ್ತೂಲ್​, ಎಕೆ 47 ರೈಫಲ್ಸ್​, ವಿವಿಧ ಮಾದರಿಯ ಗನ್​ಗಳು ಸೇರಿ ಹಲವು ಮಾರಕಾಸ್ತ್ರಗಳು ಇದ್ದವು ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.  ಭಾನುವಾರ ಸಾಯಂಕಾಲ ಈ ದಾಳಿ ನಡೆದಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ತಡೆಗಟ್ಟಲು ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ನಿನ್ನೆ ಬಂಡಿಪೋರಾ ಪೊಲೀಸರು ಎರಡು ಭಯೋತ್ಪಾದನಾ ಚಟುವಟಿಕೆ ಘಟಕಗಳ ಮೇಲೆ ದಾಳಿ ನಡೆಸಿ, ಲಷ್ಕರ್​ ಇ ತೊಯಬಾ ಸಂಘಟನೆಗೆ ನೆರವು ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ್ದರು. ಬಂಡಿಪೋರಾದ ಅಷ್ಟಾಂಗೋ ಎಂಬ ಪ್ರದೇಶದಲ್ಲಿ ಪೊಲೀಸರು ಮೂವರನ್ನು ಮತ್ತು ರಾಖ್​​ ಹಾಜಿನ್​ ಎಂಬಲ್ಲಿ ಇನ್ನೊಬ್ಬಾತನನ್ನು ಅರೆಸ್ಟ್ ಮಾಡಿದ್ದರು. ಇರ್ಫಾನ್ ಅಹ್ಮದ್​ ಭಟ್​, ಸಜದ್​ ಅಹ್ಮದ್​ ಮಿರ್​, ಇರ್ಫಾನ್​ ಅಹ್ಮದ್ ಜಾನ್​ ಎಂಬುವರು ಅಷ್ಟಾಂಗೋದಲ್ಲಿ ಬಂಧಿತರಾದವರಾಗಿದ್ದು, ಇರ್ಫಾನ್ ಅಜೀಜ್ ಭಟ್​ ರಾಖ್​​ ಹಾಜಿನ್​​ನಲ್ಲಿ ಅರೆಸ್ಟ್ ಆಗಿದ್ದಾನೆ. ಇವವರೆಲ್ಲ ಉಗ್ರರಿಗೆ ಸಾರಿಗೆ, ಸಂಪರ್ಕ ಮತ್ತಿತರ ವಿಚಾರಗಳಿಗೆ ನೆರವು ನೀಡುತ್ತಿದ್ದರು. ಇವರಿಂದಲೂ ಅಪಾರ ಪ್ರಮಾಣದ ಶಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಏನೋ ಹೇಳಿದ ಎಂದು ಮಾರ್ಕೆಟ್​​ನಲ್ಲಿ ಅಪ್ರಾಪ್ತನಿಗೆ ಒದ್ದು, ಕಪಾಳಕ್ಕೆ ಹೊಡೆದ ಪೊಲೀಸ್​; ಮರುಕ್ಷಣವೇ ಅಮಾನತು

Follow us on

Related Stories

Most Read Stories

Click on your DTH Provider to Add TV9 Kannada