ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿ ಮಾಡಿದವರು ಎಷ್ಟು ಮಂದಿ?-ಇಲ್ಲಿದೆ ನೋಡಿ ಕೇಂದ್ರ ನೀಡಿದ ಮಾಹಿತಿ
ಕಳೆದ ವರ್ಷ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಇದುವರೆಗೆ ಹೊರಗಿನವರು ಇಬ್ಬರು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡಿದ್ದಾಗಿ ಹೇಳಿತ್ತು. ಆದರೆ ಒಂದೇ ವರ್ಷದಲ್ಲಿ 32 ಜನರು ಹೆಚ್ಚಾಗಿದ್ದು, ಈ ಬಾರಿಯ ವಿವರಣೆಯಿಂದ ಗೊತ್ತಾಗಿದೆ.
ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ ಆರ್ಟಿಕಲ್ 370ನ್ನು (Article 370) ರದ್ದುಗೊಳಿಸಿದ ಮೇಲೆ ಇಲ್ಲಿಯವರೆಗೆ ಒಟ್ಟು 34 ಜನರು ಇಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಇಂದು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ (Jammu-Kashmir) ವಿಶೇಷ ಸ್ಥಾನ-ಮಾನ ಕಲ್ಪಿಸಿದ್ದ ಆರ್ಟಿಕಲ್ 370ನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿದೆ. ಹೀಗಾಗಿ ಅಲ್ಲಿ ದೇಶದ ವಿವಿಧ ಭಾಗಗಳ ಜನರೂ ಆಸ್ತಿ, ಭೂಮಿ ಖರೀದಿ ಮಾಡಬಹುದಾಗಿದೆ. ಆದರೆ ಈ ಸ್ಥಾನಮಾನ ಇದ್ದಾಗ ಇಂದು ಸಂಸತ್ತಿನಲ್ಲಿ ಲಿಖಿತ ದಾಖಲೆಗೊಂದಿಗೆ ಮಾಹಿತಿ ನೀಡಿದ ರೈ, ಜಮ್ಮು, ರಿಯಾಸಿ, ಉಧಾಂಪುರ್ ಮತ್ತು ಗಂದರ್ಬಾಲ್ಗಳಲ್ಲಿ ಆಸ್ತಿ ಖರೀದಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಆಸ್ತಿಗಳ ಬಗೆಗಾಗಲೀ, ಅವುಗಳ ಮಾಲೀಕರ ಬಗ್ಗೆಯಾಗಲೀ ತುಂಬ ವಿವರ ನೀಡಿಲ್ಲ.
ಕಳೆದ ವರ್ಷ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಇದುವರೆಗೆ ಹೊರಗಿನವರು ಇಬ್ಬರು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡಿದ್ದಾಗಿ ಹೇಳಿತ್ತು. ಆದರೆ ಒಂದೇ ವರ್ಷದಲ್ಲಿ 32 ಜನರು ಹೆಚ್ಚಾಗಿದ್ದು, ಈ ಬಾರಿಯ ವಿವರಣೆಯಿಂದ ಗೊತ್ತಾಗಿದೆ. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಮೇಲೆ ಕೇಂದ್ರ ಸರ್ಕಾರ ಇಲ್ಲಿನ ಭೂಮಿ ಖರೀದಿ ನಿಯಮಗಳನ್ನು ಬದಲಾವಣೆ ಮಾಡಿದೆ. ಜಮ್ಮು-ಕಾಶ್ಮೀರದ ಅಭಿವೃದ್ಧಿ ಕಾಯ್ದೆಯ ಸೆಕ್ಷನ್ 17ರಲ್ಲಿದ್ದ ರಾಜ್ಯದ ಶಾಶ್ವತ ನಿವಾಸಿ ಎಂಬ ಶಬ್ದವನ್ನು ಕೈಬಿಟ್ಟಿದೆ. ಇದು ಹೊರಗಿನವರು ಇಲ್ಲಿನ ಭೂಮಿ ಖರೀದಿ ಮಾಡುವುದಕ್ಕೆ ಸಂಬಂಧಪಟ್ಟು ಇರುವ ಸೆಕ್ಷನ್. ಅದರಲ್ಲಿ ಬದಲಾವಣೆ ಮಾಡಿದ ಬಳಿಕ ಕೃಷಿಯೇತರ ಭೂಮಿಯನ್ನು ಹೊರಗಿನವರೂ ಖರೀದಿ ಮಾಡಲು ಅನುಮತಿ ಸಿಕ್ಕಿದೆ.
ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ರದ್ದುಗೊಳಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ನೆನಪಿದೆ. ಅಲ್ಲಿನ ಸ್ಥಳೀಯ ರಾಜಕೀಯ ಪಕ್ಷಗಳ ನಾಯಕರಂತೂ ಈಗಲೂ ಸಹ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಅಲ್ಲಿನ ಭೂಮಿ ಖರೀದಿ ನಿಯಮಗಳ ಬದಲಾವಣೆ ಮಾಡಿದ್ದೂ ಪ್ರತಿಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ 2ನೇ ದಿನಕ್ಕೆ; ರೈತರು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಆಗ್ರಹ