‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ ಬಳಿಕ ಯಶ್ ಮಾತು
ಯಶ್ ಅವರು ದೈವ ಭಕ್ತ. ಪ್ರತಿ ಸಿನಿಮಾ ಶೂಟ್ಗೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈಗ ಅವರು ‘ರಾಮಾಯಣ’ ಸಿನಿಮಾದ ಶೂಟ್ಗೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ರಾವಣನು ಶಿವನ ಭಕ್ತ. ಅವನಿಗೆ ಶಿವನ ಮೇಲೆ ಅಪಾರವಾದ ಭಕ್ತಿ. ಅದೇ ರೀತಿ ಯಶ್ ಕೂಡ ಶಿವನ ಭಕ್ತ.
ರಾಕಿಂಗ್ ಸ್ಟಾರ್ ಯಶ್ (Yash) ಅವರು ಮಧ್ಯ ಪ್ರದೇಶದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಶ್ ಅವರು ಶಿವನ ಭಕ್ತರು. ಅವರ ಮನೆಯ ಕುಲದೇವರು ಕೂಡ ಶಿವನೇ. ಈ ಕಾರಣಕ್ಕೆ ಶಿವನ ದರ್ಶನ ಪಡೆಯಲು ಅವರು ಮಹಾ ಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಯಶ್ ಅವರು ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ಮಂಗಳವಾರದಿಂದ (ಏಪ್ರಿಲ್ 22) ಅವರು ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ. ಅದಕ್ಕೂ ಮೊದಲು ಅವರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ವಿಶೇಷ ಎಂದರೆ ರಾವಣ ಕೂಡ ಶಿವನ ದೊಡ್ಡ ಭಕ್ತ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.