VIDEO: ನಿನ್ನ ಕೋಚ್ ಕೂಡ ಗೊತ್ತು ಕಣೋ… ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
IPL 2025 RCB vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 37ನೇ ಪಂದ್ಯದಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿದೆ. ಮುಲ್ಲನ್ಪುರ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 157 ರನ್ ಕಲೆಹಾಕಿದರೆ, ಈ ಗುರಿಯನ್ನು ಆರ್ಸಿಬಿ 18.5 ಓವರ್ಗಳಲ್ಲಿ ಚೇಸ್ ಮಾಡಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 37ನೇ ಪಂದ್ಯವು ಆಟಗಾರರ ನಡುವಣ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ಮೊದಲಿಗೆ ವಿರಾಟ್ ಕೊಹ್ಲಿ (Virat Kohli) ಹಾಗೂ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ (Harpreet Brar) ಮಾತಿನ ಚಕಮಕಿ ನಡೆಸಿದರೆ, ಆ ಬಳಿಕ ಶ್ರೇಯಸ್ ಅಯ್ಯರ್ ಹಾಗೂ ಕಿಂಗ್ ಕೊಹ್ಲಿ ಕಿತ್ತಾಡಿಕೊಂಡಿದ್ದರು.
ಅದರಲ್ಲೂ ಹರ್ಪ್ರೀತ್ ಬ್ರಾರ್ ನಡುವಣ ಮಾತಿನ ಚಕಮಕಿ ನಡುವೆ ವಿರಾಟ್ ಕೊಹ್ಲಿ, ಎಲ್ಲೆ ಮೀರಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಮಾತಿನ ನಡುವೆ ಕಿಂಗ್ ಕೊಹ್ಲಿ ನಾನು 20 ವರ್ಷದಿಂದ ಇಲ್ಲಿದ್ದೀನಿ. ನಿನ್ನ ಕೋಚ್ ಕೂಡ ನನಗೆ ಗೊತ್ತಿದೆ ಎಂದು ಹೇಳುತ್ತಿರುವುದು ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಇದಾಗ್ಯೂ ವಿರಾಟ್ ಕೊಹ್ಲಿ ಯುವ ಸ್ಪಿನ್ನರ್ನನ್ನು ಟಾರ್ಗೆಟ್ ಮಾಡಿದ್ಯಾಕೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.
ವಿಶೇಷ ಎಂದರೆ ಇದೇ ಹರ್ಪ್ರೀತ್ ಬ್ರಾರ್ ಕಳೆದ ಸೀಸನ್ನಲ್ಲಿ ವಿರಾಟ್ ಕೊಹ್ಲಿಯನ್ನು ತಮ್ಮ ಕುಟುಂಬಸ್ಥರಿಗೆ ಪರಿಚಯಿಸಿ ಫೋಟೋ ತೆಗೆಸಿಕೊಂಡಿದ್ದರು. ಆದರೆ ಈ ಬಾರಿಯ ಸೀಸನ್ನಲ್ಲಿ ಕೊಹ್ಲಿ ಹಾಗೂ ಬ್ರಾರ್ ನಡುವೆ ವಾಗ್ಯುದ್ಧ ನಡೆದಿರುವುದೇ ಅಚ್ಚರಿ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 157 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.5 ಓವರ್ಗಳಲ್ಲಿ 159 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.