2020ರಿಂದ 466 ಎನ್‌ಜಿಒಗಳು ವಿದೇಶಿ ದೇಣಿಗೆ ಪರವಾನಗಿ ನವೀಕರಣವನ್ನು ನಿರಾಕರಿಸಿವೆ: ಕೇಂದ್ರ

ವಿದೇಶಿ ನಿಧಿಯನ್ನು ಸ್ವೀಕರಿಸಲು ಕಡ್ಡಾಯವಾಗಿರುವ ಪರವಾನಗಿಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸದ ಕಾರಣ ಕೇಂದ್ರವು 5,789 ಸಂಸ್ಥೆಗಳನ್ನು ಎಫ್​​ಸಿಆರ್​​ಎ ವ್ಯಾಪ್ತಿಯಿಂದ ತೆಗೆದುಹಾಕಿದೆ.

2020ರಿಂದ 466 ಎನ್‌ಜಿಒಗಳು ವಿದೇಶಿ ದೇಣಿಗೆ ಪರವಾನಗಿ ನವೀಕರಣವನ್ನು ನಿರಾಕರಿಸಿವೆ: ಕೇಂದ್ರ
ಸಂಸತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 29, 2022 | 2:46 PM

ದೆಹಲಿ: 2020 ರಿಂದ 466 ಸರ್ಕಾರೇತರ ಸಂಸ್ಥೆಗಳ (NGO) ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (FCRA) ಅಡಿಯಲ್ಲಿ ಪರವಾನಗಿ ನವೀಕರಣವನ್ನು ನಿರಾಕರಿಸಿವೆ ಎಂದು ಕೇಂದ್ರ ಗೃಹ ಸಚಿವಾಲಯ (Union home ministry)ಮಂಗಳವಾರ ಸಂಸತ್​​ನಲ್ಲಿ ತಿಳಿಸಿದೆ. 2020 ರಲ್ಲಿ 100, 2021 ರಲ್ಲಿ 341 ಮತ್ತು ಈ ವರ್ಷ 25 ಎನ್​​ಜಿಒಗಳು ಪರವಾನಗಿ ನವೀಕರಣವನ್ನು ನಿರಾಕರಿಸಿವೆ ಎಂದು ಕೇಂದ್ರ ಹೇಳಿದೆ. ಎಫ್​​ಸಿಆರ್​​ಎ ಪರವಾನಗಿ ನವೀಕರಣಕ್ಕಾಗಿ ಆಕ್ಸ್‌ಫ್ಯಾಮ್ ಇಂಡಿಯಾದ ಅರ್ಜಿಯನ್ನು ಡಿಸೆಂಬರ್ 2021 ರಲ್ಲಿ ತಿರಸ್ಕರಿಸಲಾಗಿದೆ. ಯುನೈಟೆಡ್ ಕಿಂಗ್‌ಡಮ್ ಕೂಡಾ ನಿರಾಕರಣೆ ಬಗ್ಗೆ ದನಿಯೆತ್ತಿತ್ತು. ವಿದೇಶಿ ನಿಧಿಯನ್ನು ಸ್ವೀಕರಿಸಲು ಕಡ್ಡಾಯವಾಗಿರುವ ಪರವಾನಗಿಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸದ ಕಾರಣ ಕೇಂದ್ರವು 5,789 ಸಂಸ್ಥೆಗಳನ್ನು ಎಫ್​​ಸಿಆರ್​​ಎ ವ್ಯಾಪ್ತಿಯಿಂದ ತೆಗೆದುಹಾಕಿದೆ. ದಾಖಲೆಗಳ ಪರಿಶೀಲನೆಯ ನಂತರ ಕಾನೂನು ಉಲ್ಲಂಘಿಸಿದ 179 ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈ ಸಂಸ್ಥೆಗಳಲ್ಲಿ ಹೆಚ್ಚಿನವರು ತಮ್ಮ ಪರವಾನಗಿಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೆ ನಿರ್ಧಾರಗಳು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅರ್ಜಿಗಳನ್ನು ನಿರ್ಧರಿಸಲು ಸರ್ಕಾರ ಕಳೆದ ವಾರ ಜೂನ್ 30 ರವರೆಗೆ ಗಡುವನ್ನು ವಿಸ್ತರಿಸಿದೆ.

2021 ರಲ್ಲಿ 341 ಪ್ರಕರಣಗಳಲ್ಲಿ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿರುವುದು 2020 ರಿಂದ ಅತ್ಯಧಿಕವಾಗಿದೆ. ಸುಮಾರು 6,000 ಸಂಸ್ಥೆಗಳು ಡಿಸೆಂಬರ್ 31 ರವರೆಗೆ ನವೀಕರಣಗಳನ್ನು ನಿರಾಕರಿಸಿವೆ. ಜೂನ್ 30ರ ನಂತರ ಅಂತಿಮ ನಿರಾಕರಣೆಗಳ ಸಂಖ್ಯೆ ತಿಳಿಯಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಎಫ್‌ಸಿಆರ್‌ಎ ಎಂದರೇನು? 1976 ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿದೇಶಿ ಶಕ್ತಿಗಳು ಸ್ವತಂತ್ರ ಸಂಸ್ಥೆಗಳ ಮೂಲಕ ಹಣವನ್ನು ನೀಡುವ ಮಾಡುವ ಮೂಲಕ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂಬ ಆತಂಕದ ವಾತಾವರಣದಲ್ಲಿ ಎಫ್‌ಸಿಆರ್‌ಎ ಜಾರಿಗೊಳಿಸಲಾಯಿತು. ಈ ಕಳವಳಗಳು 1969ರಲ್ಲೇ ಸಂಸತ್ತಿನಲ್ಲಿ ವ್ಯಕ್ತವಾಗಿದ್ದವು.

ವಿದೇಶಿ ನಿಧಿಯ ಬಳಕೆಯ ಮೇಲೆ “ಕಾನೂನನ್ನು ಕ್ರೋಢೀಕರಿಸಲು” ಮತ್ತು “ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕಾರಕವಾದ ಯಾವುದೇ ಚಟುವಟಿಕೆಗಳಿಗೆ” ಅವುಗಳ ಬಳಕೆಯನ್ನು “ನಿಷೇಧಿಸಲು” 2010 ರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ ತಿದ್ದುಪಡಿ ಮಾಡಲಾದ ಎಫ್​​ಸಿಆರ್​​ಎ ಅನ್ನು ಜಾರಿಗೊಳಿಸಲಾಯಿತು.

2020 ರಲ್ಲಿ ಪ್ರಸ್ತುತ ಸರ್ಕಾರವು ಕಾನೂನನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿತು, ಸರ್ಕಾರಕ್ಕೆ ಎನ್‌ಜಿಒಗಳು ವಿದೇಶಿ ನಿಧಿಯ ಸ್ವೀಕೃತಿ ಮತ್ತು ಬಳಕೆಯ ಮೇಲೆ ಬಿಗಿಯಾದ ನಿಯಂತ್ರಣ ಮತ್ತು ಪರಿಶೀಲನೆಯನ್ನು ನೀಡಿತು. FCRA ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿ ಅಥವಾ NGO ಕಾಯಿದೆಯಡಿಯಲ್ಲಿ ನೋಂದಾಯಿಸಿಕೊಳ್ಳಬೇಕು, ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿದೇಶಿ ನಿಧಿಯ ಸ್ವೀಕೃತಿಗಾಗಿ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಆ ನಿಧಿಗಳನ್ನು ಯಾವ ಉದ್ದೇಶಕ್ಕಾಗಿ ಸ್ವೀಕರಿಸಲಾಗಿದೆಯೋ ಮತ್ತು ಕಾಯಿದೆಯಲ್ಲಿ ಸೂಚಿಸಿದಂತೆ ಮಾತ್ರ ಬಳಸಿಕೊಳ್ಳಬೇಕಿದೆ.

ಇದನ್ನೂ ಓದಿ: ವಿದೇಶಿ ದೇಣಿಗೆ ಸಂಗ್ರಹ: ಎನ್‌ಜಿಒಗಳ ರದ್ದಾದ ಎಫ್‌ಸಿಆರ್‌ಎ ಪರವಾನಗಿ ನವೀಕರಿಸುವ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ