ಹೊಸ ಜೀವನಕ್ಕೆ ಕಾಲಿಟ್ಟ ವರನಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ ಗೆಳೆಯರ ಬಳಗ, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಕೆಲ ವಿಡಿಯೋಗಳು ನಗೆಗಡಲಲ್ಲಿ ತೇಲಿಸಿದರೆ ಇನ್ನು ಕೆಲವು ವಿಡಿಯೋ ನೋಡಿದಾಗ ಮನಸ್ಸಿಗೆ ಬೇಸರವಾಗುವುದುಂಟು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವಧು ವರರಿಗೆ ನೀಲಿ ಬಣ್ಣದ ಡ್ರಮ್ ಉಡುಗೊರೆಯಾಗಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಉತ್ತರ ಪ್ರದೇಶ, ಏಪ್ರಿಲ್ 20: ಮದುವೆ (marriage) ಎರಡು ಕುಟುಂಬವನ್ನು ಒಂದಾಗಿಸುವ ಘಳಿಗೆಯದು. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ವಧು ವರರಿಗಿಂತ ಹೆಚ್ಚಾಗಿ ಫ್ಯಾಮಿಲಿ ಫ್ರೆಂಡ್ಸ್ ಈ ದಿನವನ್ನು ಸಖತ ಎಂಜಾಯ್ ಮಾಡುತ್ತಾರೆ. ಹೌದು, ಮನೆ ಮಂದಿ, ಸ್ನೇಹಿತರು ಎಲ್ಲರೂ ಜೊತೆ ಸೇರಿ ಹಾಡು ಕುಣಿತ, ಮೋಜು ಮಸ್ತಿ ಮಾಡುತ್ತಾ ಸಂಭ್ರಮಿಸುತ್ತಿರುತ್ತಾರೆ. ಅದರಲ್ಲಿ ಹೊಸದಾಗಿ ಕಾಲಿಟ್ಟ ನವ ಜೋಡಿಗಳ ಕಾಲೇಳೆಯುವುದು ಇದೆ. ಈ ಮದುವೆ ಮನೆಯಲ್ಲಿ ನಡೆಯುವ ತರ್ಲೆ ತಮಾಷೆಯಯ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುವುದಿರುತ್ತದೆ. ವಧು-ವರರಿಗೆ ಸ್ನೇಹಿತರೆಲ್ಲರೂ ಜೊತೆಗೆ ನೀಲಿ ಬಣ್ಣದ ಡ್ರಮ್ (blue colour drum) ಅನ್ನು ಉಡುಗೊರೆಯಾಗಿ ನೀಡಿದ್ದು ಈ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಉತ್ತರ ಪ್ರದೇಶ (uttara pradesh) ದ ಹಮೀರ್‌ಪುರ (hamir pur) ದಲ್ಲಿ ನಡೆದ ಮದುವೆಯಲ್ಲಿ ಸ್ನೇಹಿತರು ಈ ರೀತಿ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಈ ತಮಾಷೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
@betabdilshad ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವೇದಿಕೆಯ ಮೇಲೆ ನೂತನ ವಧುವರರು ನಿಂತುಕೊಂಡಿದ್ದಾರೆ. ಶುಭಾಶಯ ತಿಳಿಸಲು ವರನ ಸ್ನೇಹಿತರ ದಂಡೇ ವೇದಿಕೆಯನ್ನು ಏರಿದ್ದು, ನೀಲಿ ಬಣ್ಣದ ಡ್ರಮ್ ನ್ನು ಉಡುಗೊರೆಯಾಗಿ ನವ ಜೋಡಿಗೆ ನೀಡಿದ್ದಾರೆ. ವರ ಒಂದು ಕ್ಷಣ ಈ ಉಡುಗೊರೆಯನ್ನು ನೋಡಿ ಗಾಬರಿಯಾಗಿದ್ದು, ಆದರೆ ತನ್ನ ಪತಿಯ ಸ್ನೇಹಿತರ ಈ ರೀತಿ ವಿಭಿನ್ನ ಉಡುಗೊರೆ ಕಂಡು ವಧುವು ಬಿದ್ದು ಬಿದ್ದು ನಕ್ಕಿದ್ದಾಳೆ. ಈ ದೃಶ್ಯವನ್ನು ಅಲ್ಲೇ ಇದ್ದ ಯಾರೋ ಒಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : ಮದರಂಗಿ ಹಾಕಿಸಿಕೊಂಡು ಬರುವೆ ಎಂದು ಹೇಳಿ ಪಾರ್ಲರ್ ಗೆ ಹೋದ ವಧು ನಾಪತ್ತೆ!
ವೈರಲ್ ವಿಡಿಯೋ ಇಲ್ಲಿದೆ ನೋಡಿ;
तमाम लोग आहत हो रहे कि सोशल मीडिया पर नीले ड्रम का मजाक बन रहा और यहां शादी बारात तक मे नीले ड्रम गिफ्ट में दिये जाने शुरू हो गये हैं-
हमीरपुर में शादी समारोह के दौरान जयमाला स्टेज पर ब्लू ड्रम गिफ्ट में दिए जाने का मामला सामने आया है
इसका वीडियो भी सोशल मीडिया पर खूब वायरल है pic.twitter.com/UCeRZZWZUQ
— Andaz e Hunar अंदाज़-ए-हुनर (@betabdilshad) April 19, 2025
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಯೊಂದಿಗೆ ನೆಟ್ಟಿಗರು ಹಾಸ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು, ಈ ರೀತಿಯ ಸ್ನೇಹಿತರು ಇದ್ದರೇನೇ ನಿಜಕ್ಕೂ ಮಜಾ ಬರೋದು ಎಂದಿದ್ದಾರೆ. ಇನ್ನೊಬ್ಬರು, ವರ ಆತಂಕಗೊಂಡಂತೆ ಕಾಣುತ್ತಿದ್ದು, ಆ ವಧುವಿನ ಮುಖದಲ್ಲಿ ನಗು ನೋಡಿ ಎಂದಿದ್ದಾರೆ. ಮತ್ತೊಬ್ಬರು, ಈಗ ಮದುವೆಯ ನಿಜವಾದ ಮಜಾ ಇಲ್ಲಿಂದಲೇ ಪ್ರಾರಂಭವಾಗುತ್ತದೆ ಎಂದಿದ್ದಾರೆ. ಮತ್ತೊರ್ವ, ನನಗೆ ಈ ರೀತಿಯ ಐಡಿಯಾ ಬಂದಿರಲಿಲ್ಲ. ನಾನು ಕೂಡ ನನ್ನ ಸ್ನೇಹಿತನ ಮದುವೆಗೆ ಈ ರೀತಿಯ ಉಡುಗೊರೆಯನ್ನೇ ನೀಡುವೆ ಎಂದು ತಮಾಷೆಯಾಗಿ ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ