VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
IPL 2025 PBKS vs RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 37ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 157 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಜಯ ಸಾಧಿಸಿದೆ. ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕಿಚಾಯಿಸುವಂತೆ ಸಂಭ್ರಮಿಸಿದ್ದರು. ಇದು ಶ್ರೇಯಸ್ ಅಯ್ಯರ್ ಅವರ ಸೌಂಡ್ ಸೆಲೆಬ್ರೇಷನ್ಗೆ ರಿಯಾಕ್ಷನ್ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು.
ಏಕೆಂದರರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ RCB RCB… ಎಂಬ ನಿಮ್ಮ ಶಬ್ದ ಕೇಳಿಸುತ್ತಿಲ್ಲ ಎಂದು ಶ್ರೇಯಸ್ ಅಯ್ಯರ್ ಯಾವುದೇ ಸನ್ನೆ ಮಾಡಿರಲಿಲ್ಲ. ಬದಲಾಗಿ ಮುಲ್ಲನ್ಪುರ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್ ಮಾಡಿದ ಸನ್ನೆಯನ್ನೇ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
ಕೆಕೆಆರ್ ವಿರುದ್ಧ ಗೆದ್ದ ಬಳಿಕ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್ ಅಭಿಮಾನಿಗಳಿಗೆ ಸೌಂಡ್ ಕೇಳಿಸುತ್ತಿಲ್ಲ. ಮತ್ತಷ್ಟು ಜೋರಾಗಿ ಕೂಗಿ ಎಂದಷ್ಟೇ ಸನ್ನೆ ಮಾಡಿದ್ದರು. ಈ ವಿಡಿಯೋವನ್ನು ಎಡಿಟ್ ಮಾಡಿ, ಬೆಂಗಳೂರಿನಲ್ಲಿ ಆರ್ಸಿಬಿ ಅಭಿಮಾನಿಗಳನ್ನು ಶ್ರೇಯಸ್ ಅಯ್ಯರ್ ಕಿಚಾಯಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಇದನ್ನೇ ನಂಬಿರುವ ಬಹುತೇಕ ಆರ್ಸಿಬಿ ಅಭಿಮಾನಿಗಳು ಇದೀಗ ಶ್ರೇಯಸ್ ಅಯ್ಯರ್ ವರ್ತನೆಗೆ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಆರ್ಸಿಬಿ ಅಭಿಮಾನಿಗಳನ್ನು ಕಿಚಾಯಿಸಿಲ್ಲ ಎಂಬುದೇ ಸತ್ಯ. ಇದಾಗ್ಯೂ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಅವರನ್ನು ಟಾರ್ಗೆಟ್ ಮಾಡಿದ್ದೇಕೆ ಎಂಬುದೇ ಈಗ ಪ್ರಶ್ನೆ.
ವಿಶೇಷ ಸೂಚನೆ: ಶ್ರೇಯಸ್ ಅಯ್ಯರ್ ಅವರ ಸಂಭ್ರಮಾಚಣೆಯ ವಿಡಿಯೋ ಈ ಮೇಲೆ ನೀಡಲಾಗಿದ್ದು, ಅದನ್ನು ವೀಕ್ಷಿಸಿದರೆ ಅಸಲಿಯತ್ತು ಗೊತ್ತಾಗಲಿದೆ.