IPL 2025 – PSL 2025: ಎರಡು ಲೀಗ್ಗಳಲ್ಲಿ ಅಬ್ದುಲ್ ಸಮದ್ ಸಿಡಿಲಬ್ಬರ
IPL 2025 vs PSL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮತ್ತು ಪಾಕಿಸ್ತಾನ್ ಸೂಪರ್ ಲೀಗ್ಗಳಲ್ಲಿ (ಪಿಎಸ್ಎಲ್ 2025) ಅಬ್ದುಲ್ ಸಮದ್ ಹೆಸರಿನ ಆಟಗಾರರು ಅಬ್ಬರಿಸಿದ್ದಾರೆ. ಅದು ಸಹ ಒಂದೇ ಕ್ರಮಾಂಕದಲ್ಲಿ ಕಣಕ್ಕಿಳಿದು, ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ.

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಡೆಯುತ್ತಿದ್ದರೆ, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ (PSL 2025) ಜರುಗುತ್ತಿದೆ. ಈ ಎರಡು ಲೀಗ್ಗಳಲ್ಲಿ ಶನಿವಾರ ಇಬ್ಬರು ಅಬ್ದುಲ್ ಸಮದ್ (Abdul Samad) ಅಬ್ಬರಿಸಿದ್ದಾರೆ. ಅದು ಸಹ ಸಿಡಿಲಬ್ಬರದೊಂದಿಗೆ ಎಂಬುದು ವಿಶೇಷ. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯುತ್ತಿರುವ ಅಬ್ದುಲ್ ಸಮದ್ ಐಪಿಎಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದರೆ, ಅತ್ತ ಪಿಎಸ್ಎಲ್ನಲ್ಲಿ ಬ್ಯಾಟ್ ಬೀಸಿದ ಅಬ್ದುಲ್ ಸಮದ್ ಬಿರುಸಿನ ಬ್ಯಾಟಿಂಗ್ನೊಂದಿಗೆ ಮುಂಚಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಬ್ದುಲ್ ಸಮದ್ 10 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ಗಳೊಂದಿಗೆ 30 ರನ್ ಚಚ್ಚಿದ್ದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಕೋರ್ 180 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
IPL ನಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ವಿಡಿಯೋ:
That’s how you wrap up an innings 💥
🎥 Abdul Samad went into slam mode to take #LSG to a total of 180/5 💪
Updates ▶️ https://t.co/02MS6ICvQl#TATAIPL | #RRvLSG | @LucknowIPL pic.twitter.com/mTQjKq3r5E
— IndianPremierLeague (@IPL) April 19, 2025
ಇತ್ತ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಮುಲ್ತಾನ್ ಸುಲ್ತಾನ್ ವಿರುದ್ಧದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಬ್ದುಲ್ ಸಮದ್ 14 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 40 ರನ್ ಬಾರಿಸಿದ್ದರು. ಈ ಮೂಲಕ ಪೇಶಾವರ್ ಝಲ್ಮಿ ತಂಡದ ಸ್ಕೋರ್ ಅನ್ನು 227 ಕ್ಕೇರಿಸಿದ್ದರು.
PSL ನಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ವಿಡಿಯೋ:
The solid arm of Abdul Sammad sends it past the ropes 🔥#HBLPSLX l #ApnaXHai l #PZvMS pic.twitter.com/px95GsC7Py
— PakistanSuperLeague (@thePSLt20) April 19, 2025
ಇದೀಗ ಇಬ್ಬರು ಅಬ್ದುಲ್ ಸಮದ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ವಿಡಿಯೋ ವೈರಲ್ ಆಗಿದೆ. ಅದು ಕೂಡ ಒಂದೇ ಕ್ರಮಾಂಕದಲ್ಲಿ ಕಣಕ್ಕಿಳಿದು ಒಂದೇ ದಿನ ಅಬ್ಬರಿಸುವ ಮೂಲಕ ಎಂಬುದೇ ವಿಶೇಷ.
ಗೆದ್ದು ಬೀಗಿದ LSG ಮತ್ತು PSZ:
ಐಪಿಎಲ್ನಲ್ಲಿ ಅಬ್ದುಲ್ ಸಮದ್ ಕಣಕ್ಕಿಳಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 180 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 178 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 2 ರನ್ಗಳಿಂದ ರೋಚಕ ಜಯ ಸಾಧಿಸಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ 2023ರಲ್ಲಿ 14 ವರ್ಷ… 2025ರಲ್ಲೂ 14 ವರ್ಷ..!
ಪಿಎಸ್ಎಲ್ನಲ್ಲಿ ಅಬ್ದುಲ್ ಸಮದ್ ಆಡಿದ ಪೇಶಾವರ್ ಝಲ್ಮಿ ತಂಡ 20 ಓವರ್ಗಳಲ್ಲಿ 227 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಲ್ತಾನ್ ಸುಲ್ತಾನ್ಸ್ ತಂಡ 107 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಪೇಶಾವರ್ ಝಲ್ಮಿ ತಂಡ 120 ರನ್ಗಳ ಭರ್ಜರಿ ಜಯ ಸಾಧಿಸಿದೆ.