RR vs LSG: ಸೋಲಿಗೆ ಸ್ಯಾಂಡಿ ಕಾರಣ: ರಿಯಾನ್ ಪರಾಗ್
IPL 2025 LSG vs RR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 36ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 180 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 178 ರನ್ಗಳಿಸಿ ಕೇವಲ 2 ರನ್ಗಳಿಂದ ಸೋಲೊಪ್ಪಿಕೊಂಡಿದೆ.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 36ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಲಕ್ನೋ ಸೂಒರ್ ಜೈಂಟ್ಸ್ (LSG) ತಂಡವು 2 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 180 ರನ್ ಕಲೆಹಾಕಿತು.
181 ರನ್ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 19 ಓವರ್ಗಳಲ್ಲಿ 172 ರನ್ ಕಲೆಹಾಕಿತ್ತು. ಅದರಂತೆ ಕೊನೆಯ ಓವರ್ನಲ್ಲಿ 9 ರನ್ಗಳ ಗುರಿ ಪಡೆದ ಆರ್ಆರ್ ತಂಡವು ಕೇವಲ 6 ರನ್ಗಳಿಸಿ 2 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ನಮ್ಮ ಪರಾಜಯಕ್ಕೆ ಕೊನೆಯ ಓವರ್ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ನಾವು ಅಂತಿಮ ಓವರ್ನಲ್ಲಿ ಅತ್ಯಧಿಕ ರನ್ ನೀಡಿದ್ದೆವು. ಇದುವೇ ಸೋಲಿಗೆ ಕಾರಣವಾಯ್ತು ಎಂದು ತಿಳಿಸಿದ್ದಾರೆ.
181 ರನ್ಗಳ ಗುರಿ ಬೆನ್ನತ್ತಿದ್ದರೂ, ನಾವು 18-19ನೇ ಓವರ್ ವರೆಗೆ ಮೇಲುಗೈ ಸಾಧಿಸಿದ್ದೆವು. ಬಹುಶಃ 19ನೇ ಓವರ್‌ನಲ್ಲೇ ನಾವು ಪಂದ್ಯವನ್ನು ಮುಗಿಸಬೇಕಿತ್ತು. ಅದಕ್ಕೆ ನಾನು ನನ್ನನ್ನೇ ದೂಷಿಸುತ್ತೇನೆ. ಏಕೆಂದರೆ ನಾವು ಪಂದ್ಯವನ್ನು ಕೊನೆಯವರೆಗೆ ತೆಗೆದುಕೊಂಡು ಹೋಗಿದ್ದು ತಪ್ಪು ಎಂಬುದು ನನ್ನ ಭಾವನೆ.
ಇದಕ್ಕೂ ಮುನ್ನ ನಾವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 165-170 ರೊಳಗೆ ನಿಯಂತ್ರಿಸುವ ವಿಶ್ವಾಸವಿತ್ತು. ಆದರೆ ಸ್ಯಾಂಡಿ (ಸಂದೀಪ್ ಶರ್ಮಾ) ಓವರ್ ನಮ್ಮ ಪಾಲಿಗೆ ದುಬಾರಿಯಾಯಿತು, ಅವರು ನಮ್ಮ ಪರ ಕೆಟ್ಟ ಪಂದ್ಯವನ್ನಾಡಿದ್ದಾರೆ. ಇದುವೇ ಪಂದ್ಯದ ಚಿತ್ರಣ ಬದಲಿಸಿತು ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ರಿಯಾನ್ ಪರಾಗ್ ಈ ಹೇಳಿಕೆ ನೀಡಲು ಮುಖ್ಯ ಕಾರಣ, ರಾಜಸ್ಥಾನ್ ರಾಯಲ್ಸ್ ಪರ ಸಂದೀಪ್ ಶರ್ಮಾ 20ನೇ ಓವರ್ನಲ್ಲಿ ಬರೋಬ್ಬರಿ 27 ರನ್ಗಳನ್ನು ಬಿಟ್ಟು ಕೊಟ್ಟಿರುವುದು. ಅಬ್ದುಲ್ ಸಮದ್ ಕೊನೆಯ ಓವರ್ನಲ್ಲಿ 4 ಭರ್ಜರಿ ಸಿಕ್ಸ್ ಸಿಡಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಕೋರ್ ಅನ್ನು 180 ಕ್ಕೆ ತಂದು ನಿಲ್ಲಿಸಿದ್ದರು.
ಇದನ್ನೂ ಓದಿ: Tim David: ಟಿಮ್ ಡೇವಿಡ್ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಒಂದು ವೇಳೆ ಸಂದೀಪ್ ಶರ್ಮಾ ಕೊನೆಯ ಓವರ್ನಲ್ಲಿ 4 ಸಿಕ್ಸರ್ಗಳನ್ನು ಹೊಡೆಸಿಕೊಳ್ಳದಿದ್ದರೆ, ಈ ಪಂದ್ಯವು ರಾಜಸ್ಥಾನ್ ರಾಯಲ್ಸ್ ಪರ ಇರುತ್ತಿತ್ತು. ಇದಾಗ್ಯೂ ನಾವು 181 ರನ್ಗಳನ್ನು ಬೆನ್ನಟ್ಟಬೇಕಿತ್ತು. ಏಕೆಂದರೆ ಪಿಚ್ ಬಗ್ಗೆ ಯಾವುದೇ ದೂರುಗಳನ್ನು ಹೇಳುವಂತಿಲ್ಲ. ಬ್ಯಾಟಿಂಗ್ ಮಾಡಲು ಉತ್ತಮವಾಗಿತ್ತು. ಆದರೆ ಕೆಲ ಎಸೆತಗಳಿಂದಾಗಿ ನಾವು ಪಂದ್ಯವನ್ನು ಕಳೆದುಕೊಂಡಿದ್ದೇವೆ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.