ಶ್ರೀನಗರ ತಲುಪಿದ ಅಮಿತ್ ಶಾ; ಉಗ್ರರ ದಾಳಿಯಿಂದ ಮೃತರಾದ ಪೊಲೀಸ್ ಅಧಿಕಾರಿಯ ಕುಟುಂಬ ಭೇಟಿ, ಸರ್ಕಾರಿ ಉದ್ಯೋಗದ ಭರವಸೆ
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂರು ದಿನಗಳಲ್ಲಿ ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಗೃಹಸಚಿವ ಅಮಿತ್ ಶಾ ಅವರ ಜಮ್ಮು-ಕಾಶ್ಮೀರ (Amit Shah Jammu-Kashmir Visit) ಪ್ರವಾಸ ಇಂದಿನಿಂದ ಶುರುವಾಗಿದ್ದು, ಈಗಾಗಲೇ ಶ್ರೀನಗರಕ್ಕೆ ತೆರಳಿದ್ದಾರೆ. ಶ್ರೀನಗರ ತಲುಪಿದ ಅಮಿತ್ ಶಾ ಮೊಟ್ಟಮೊದಲು ಹುತಾತ್ಮ ಪೊಲೀಸ್ ಅಧಿಕಾರಿಯೊಬ್ಬರ ಕುಟುಂಬವನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಫರ್ವೀಜ್ ಅಹ್ಮದ್ ದಾರ್ ಎಂಬ ಪೊಲೀಸ್ ಅಧಿಕಾರಿ ಇಬ್ಬರು ಉಗ್ರರಿಂದ ದಾಳಿಗೆ ಒಳಗಾಗಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಅವರ ಪತ್ನಿ, 13 ವರ್ಷದ ಮಗಳು ಮತ್ತು 10 ವರ್ಷದ ಮಗನನ್ನು ಇಂದು ಅಮಿತ್ ಶಾ ಭೇಟಿಯಾಗಿದ್ದಾರೆ. ಇಡೀ ದೇಶ ನಿಮ್ಮೊಂದಿಗೆ ಇದೆ. ಪೊಲೀಸ್ ಅಧಿಕಾರಿ ದಾರ್ ಹಾಗೂ ಇನ್ನೂ ಅನೇಕ ರಕ್ಷಣಾ ಅಧಿಕಾರಿಗಳು ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಜಿಸಿದ್ದಾರೆ. ಅವರ ತ್ಯಾಗವನ್ನೆಂದೂ ನಾವು ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಇದೇ ಹೊತ್ತಲ್ಲಿ ಫರ್ವೇಜ್ ದಾರ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.
.@JmuKmrPolice के शहीद जवान परवेज अहमद दार के घर जाकर उन्हें श्रद्धांजलि दी। मुझे व पूरे देश को उनकी बहादुरी पर गर्व है। उनके परिजनों से भेंट की और उनकी पत्नी को सरकारी नौकरी दी।
मोदी जी ने जो नए J&K की कल्पना की है, उसको साकार करने के लिए J&K पुलिस पूरी तन्मयता से प्रयासरत है। pic.twitter.com/Krv6CNfdJu
— Amit Shah (@AmitShah) October 23, 2021
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂರು ದಿನಗಳಲ್ಲಿ ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ ಶ್ರೀನಗರ ಏರ್ಪೋರ್ಟ್ ತಲುಪಿದ ಅಮಿತ್ ಶಾ ಅವರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸ್ವಾಗತಿಸಿದರು.ಇದೇ ವೇಳೆ ಅಲ್ಲಿನ ಹಲವು ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಅಮಿತ್ ಶಾ ಅಲ್ಲಿನ ಭದ್ರತಾ ಸಿಬ್ಬಂದಿಯೊಂದಿಗೆ ಉನ್ನತ ಮಟ್ಟದ ಭದ್ರತಾ ಪರಿಶೀಲನೆ ಸಭೆ ನಡೆಸಲಿದ್ದಾರೆ. ಶ್ರೀನಗರ-ಶರ್ಜಾಹ್(ಯುಎಇ) ನಡುವಿನ ಮೊದಲ ವಿಮಾನ ಹಾರಾಟಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿಲಿದ್ದಾರೆ. ಶ್ರೀನಗರದಿಂದ ಶಾರ್ಜಾಹ್ಗೆ ವಿಮಾನ ಹಾರಾಟ ಶುರುಮಾಡುವುದಾಗಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಳೆದ ತಿಂಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಭರವಸೆ ನೀಡಿದ್ದರು.
ಇದನ್ನೂ ಓದಿ: ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡಿಲ್ಲ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
Prabhas Birthday: ‘ಬಾಹುಬಲಿ’ಗೂ ಮುನ್ನವೇ ಆಕ್ಷನ್ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಪ್ರಭಾಸ್; ಯಾವುವು ಆ ಚಿತ್ರಗಳು?
Published On - 1:24 pm, Sat, 23 October 21