ವಿಡಿಯೋ: ಹೊರಗೆ ಬಿಸಿಲು ಸುಡುತ್ತಿದೆ ಎಂದು ಎಸಿಯ ತಂಪು ವಾತಾವರಣದಲ್ಲಿದ್ದ ಎಟಿಎಂಗೆ ನುಗ್ಗಿತ್ತು ನಾಗರ, ಅದ ನೋಡಿ ಥರ ಥರ ಥರಗುಟ್ಟಿದ ಗ್ರಾಹಕ
ಎಟಿಎಂಗೆ ಹಣ ತೆಗೆಯಲು ಹೋದ ಗ್ರಾಹಕರು ಭಯದಿಂದ ಓಡಿ ವಾಪಸ್ ಬಂದಿದ್ದಾರೆ. ವಿಶಾಖಪಟ್ಟಣದ ಸಿಂಧಿಯಾ ಶಿಪ್‌ಯಾರ್ಡ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್‌ನಲ್ಲಿ ನಾಗರ ಹಾವೊಂದು ಎಟಿಎಂಗೆ ನುಗ್ಗಿತ್ತು.
ಎಟಿಎಂಗೆ ಹಣ ಡ್ರಾ ಮಾಡಲು ಹೋಗುತ್ತಿದ್ದೀರಾ.. ಹುಷಾರಾಗಿರಿ.. ಒಳಹೋದ ನಂತರ ಯಾವ ರೀತಿಯ ದೃಶ್ಯಗಳನ್ನು ಅಲ್ಲಿ ನೋಡಬೇಕಾಗುತ್ತದೋ.. ಗುಂಡಿಗೆಯನ್ನು ಭದ್ರವಾಗಿಟ್ಟುಕೊಂಡು ಸಾಗಬೇಕು. ಬಾಗಿಲಿನ ಬದಿಯಲ್ಲಿ ಬಚ್ಚಿಟ್ಟುಕೊಂಡಿದ್ದು ನಿಮ್ಮ ಮೇಲೆ ಒಮ್ಮೆಲೆ ದಾಳಿ ಮಾಡಬಹುದು. ಅದೆಲ್ಲಾ ತಪ್ಪಿಸಸಿಕೊಂಡು ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿ ಮೆಷಿನ್‌ನಲ್ಲಿ ಕಾರ್ಡ್ ಹಾಕುವಾಗ ನಿಮ್ಮ ಕಾಲಿನ ಬಳಿಯೇ ಪ್ರತ್ಯಕ್ಷವಾಗಿ ಕಾಲಿಗೆ ಸುತ್ತುಕೊಂಡುಬಿಟ್ಟರೆ ಗತಿಯೇನು? ನಖಶಿಖಾಂತ ಥರಗುಟ್ಟುವುದು ಖಚಿತ. ಇನ್ನು ವಿಷಯಕ್ಕೆ ಬರುವುದಾದರೆ
ಎಟಿಎಂಗೆ ಹಣ ತೆಗೆಯಲು ಹೋದ ಗ್ರಾಹಕರು ಭಯದಿಂದ ಓಡಿ ವಾಪಸ್ ಬಂದಿದ್ದಾರೆ. ವಿಶಾಖಪಟ್ಟಣದ ಸಿಂಧಿಯಾ ಶಿಪ್‌ಯಾರ್ಡ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್‌ನಲ್ಲಿ ನಾಗರ ಹಾವೊಂದು ಎಟಿಎಂಗೆ ನುಗ್ಗಿದೆ. ನಗದು ಹಿಂಪಡೆಯಲು ಒಳಗೆ ಹೋದ ಗ್ರಾಹಕ ಅಲ್ಲಿ ಬುಸುಗುಟ್ಟುತ್ತಿದ್ದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಯಾರಿಗೆ ದಮ್ಮಿದೆಯೋ ಬನ್ನೀ ನನ್ನ ಮುಂದೆ ಎಂದು ಸವಾಲೆಸೆಯುವಂತೆ ಐದು ಅಡಿಯ ನಾಗರ ಹಾವು ಅಲ್ಲಿ ಓಲಾಡುತ್ತಿತ್ತು. ಅದನ್ನು ಕಂಡು ಹೌಹಾರಿದ ಗ್ರಾಹಕ ತಕ್ಷಣವೇ ಸಾವರಿಸಿಕೊಂಡು ಬ್ಯಾಂಕ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅವರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಹಾವು ಹಿಡಿಯುವವರು ಜಾಣ್ಮೆಯಿಂದ ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಇದರಿಂದ ಬ್ಯಾಂಕ್ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೇಸಿಗೆಯ ಬಿಸಿಲು ಸುಡುತ್ತಿದ್ದರಿಂದ ಹಾವು ತಣ್ಣನೆಯ ಎಟಿಎಂಗೆ ನುಗ್ಗಿರಬಹುದು ಎಂದು ಭಾವಿಸಲಾಗಿದೆ. ಇದೀಗ ವಿಡಿಯೋ ವೈರಲ್ ಆಗಿದೆ. ಎಟಿಎಂನಲ್ಲಿ ಹಾವು ಕಂಡು ನೆಟ್ಟಿಗರು ಸಹ ಕೊಂಚ ಭಯಗೊಂಡಿದ್ದಾರೆ. ಎಟಿಎಂಗೆ ಹೋಗುವಾಗ ಒಮ್ಮೆ ಸುತ್ತರಮುತ್ತಲು ಪರೀಕ್ಷಿಸಿಕೊಂಡು ಹೋಗುವಂತೆ ಸೂಚಿಸಲಾಗಿದೆ.
Published On - 4:37 pm, Tue, 16 May 23