ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಳಿಯ ಪರಿಸ್ಥಿತಿ ಇಂದೂ ಕೂಡ ಮುಂದುವರೆದಿದೆ. ನಾಲ್ಕೈದು ದಿನಗಳಿಂದ ದೆಹಲಿ ಜನರು ಚಳಿಯಲ್ಲಿ ಗಡಗಡ ನಡುಗುತ್ತಿದ್ದು ಇನ್ನೂ ಮೂರು ದಿನ ಇಷ್ಟೇ ಚಳಿ ಅನುಭವಿಸಬೇಕಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತಾಪಮಾನ ಕುಸಿತ ಕಂಡ ಪರಿಣಾಮ ಮಂಜು ಮುಸುಕಿದ ವಾತಾವರಣ ದೆಹಲಿ ಜನರನ್ನು ಕಾಡಿದ್ದು, 201 ಮೀಟರ್ಗಳ ಗೋಚರತೆ ದಾಖಲಾಗಿದೆ.
ದೆಹಲಿ ಲೋಧಿ ರಸ್ತೆಯಲ್ಲಿ ಕನಿಷ್ಠ 3.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ ಭಾಗಗಳಲ್ಲೂ ಚಳಿ ಹವಾಮಾನ ಮುಂದುವರೆದಿದೆ. ದೆಹಲಿ ಭಾಗದಲ್ಲಿ ಶೀತಗಾಳಿ ಪರಿಣಾಮ ಮುಂದಿನ ಮೂರು ದಿನಗಳವರೆಗೆ ಇರಲಿದೆ. ತಾಪಮಾನ 3 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿಕೆ ಕೊಟ್ಟಿದೆ.
ಡಿಸೆಂಬರ್ 26ರಂದು ಹಿಮಾಲಯ ಭಾಗದಲ್ಲಿ ಮತ್ತೊಂದು ಶೀತಗಾಳಿ ಬೀಸುವ ಸಾಧ್ಯತೆ ಇದ್ದು ತಾಪಮಾನ ಕುಸಿತ ಕಾಣಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಪಂಜಾಬ್, ಹರ್ಯಾಣ ಸಹಿತ ಉತ್ತರ ಭಾರತದ ಇತರ ಪ್ರದೇಶಗಳಲ್ಲೂ ಮಂಜು ಮುಸುಕಿದ ವಾತಾವರಣ, ಚಳಿ ಹವಾಮಾನ ಕಂಡುಬಂದಿದೆ.
Delhi: A thick layer of fog engulfs the national capital; visuals from Indira Gandhi International Airport and ITO. pic.twitter.com/LFQ1ymXHnt
— ANI (@ANI) December 23, 2020
ದೆಹಲಿಯಲ್ಲಿ ಗುರುವಾರ 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಶುಕ್ರವಾರ ಗರಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಜಫಾರ್ಪುರ್ ಕಳೆದ ಶುಕ್ರವಾರ ಕನಿಷ್ಠ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡಿತ್ತು.
ನಗರದ ಗಾಳಿ ಗುಣಮಟ್ಟ ಸೂಚ್ಯಂಕವು (AQI) ಇಂದು ಬೆಳಗ್ಗೆ 9 ಗಂಟೆಯ ವರದಿಯಂತೆ 438 ಆಗಿದೆ. ಹಿಂದಿನ 24 ಗಂಟೆಗಳಲ್ಲಿ 418 AQI ದಾಖಲಾಗಿತ್ತು. ಸೋಮವಾರ 332 ಮತ್ತು ಭಾನುವಾರ 290 AQI ಕಂಡುಬಂದಿತ್ತು. ಈ ಮೂಲಕ ಗಾಳಿ ಗುಣಮಟ್ಟ ಸೂಚ್ಯಂಕದಲ್ಲಿ ಏರಿಕೆ ಕಾಣಬಹುದಾಗಿದೆ.
Overall Air Quality Index (AQI) stands at 404 (severe category) in Delhi, says System of Air Quality and Weather Forecasting & Research (SAFAR) pic.twitter.com/Fu7JMezSu1
— ANI (@ANI) December 23, 2020
ದೆಹಲಿ ಚಳಿ! ಇನ್ನೂ ನಾಲ್ಕು ದಿನ ಮುಂದುವರಿಯಲಿದೆ 3-4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ
Published On - 12:30 pm, Wed, 23 December 20