ವಲಸೆ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾರಿಗೆ ಸೌಲಭ್ಯ, ಸಮುದಾಯ ಭೋಜನ ಶಾಲೆ ಒದಗಿಸಲು ಸುಪ್ರೀಂ ಸೂಚನೆ

|

Updated on: May 13, 2021 | 3:44 PM

ಅರ್ಜಿಯ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ದೇಶದ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಕಾರ್ಡ್ ಇಲ್ಲದೆಯೂ ಪಡಿತರ ನೀಡಬೇಕು. ಜತೆಗೆ ಅಗತ್ಯ ಬಿದ್ದಲ್ಲಿ ಬೇಯಿಸಿದ ಆಹಾರವನ್ನು ಸಹ ಸರ್ಕಾರಗಳು ಒದಗಿಸಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದರು. ಈ ಮನವಿ ಆಲಿಸಿದ ಕೋರ್ಟ್, ಈ ಸೂಚನೆ ನೀಡಿದೆ.

ವಲಸೆ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಸಾರಿಗೆ ಸೌಲಭ್ಯ, ಸಮುದಾಯ ಭೋಜನ ಶಾಲೆ ಒದಗಿಸಲು ಸುಪ್ರೀಂ ಸೂಚನೆ
ಸಾಂಕೇತಿಕ ಚಿತ್ರ
Follow us on

ದೆಹಲಿ: ಮರಳಿ ತಮ್ಮ ಸ್ವಂತ ಊರುಗಳಿಗೆ ಹೋಗಬಯಸುವ ಕಾರ್ಮಿಕರಿಗೆ ಸಮುದಾಯ ಭೋಜನಶಾಲೆ ಮತ್ತು ಕಡಿಮೆ ದರದಲ್ಲಿ ಸಾರಿಗೆ ವ್ಯವಸ್ಥೆ ಮಾಡುವಂತೆ ಸುಪ್ರೀಂಕೋರ್ಟ್​ ದೆಹಲಿ ಎನ್​ಸಿಆರ್ ಅಥಾರಿಟಿಗೆ ಸೂಚನೆ ನೀಡಿದೆ. ದೇಶದಲ್ಲಿ ಕೊವಿಡ್ ಸೋಂಕು ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ. ದೆಹಲಿ ಎನ್​ಸಿಆರ್ ಅಥಾರಿಟಿ ವಲಸೆ ಕಾರ್ಮಿಕರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ. ಸದ್ಯ ದೆಹಲಿಗೆ ಮಾತ್ರ ಸೀಮಿತವಾಗಿ ಸರ್ಕಾರ ಸಮುದಾಯ ಭೋಜನ ಶಾಲೆ ಮತ್ತು ಕಡಿಮೆ ದರದಲ್ಲಿ ಸಾರಿಗೆ ವ್ಯವಸ್ಥೆಯ ಸೌಲಭ್ಯವನ್ನು ವಲಸೆ ಕಾರ್ಮಿಕರಿಗೆ ಒದಗಿಸಬೇಕು ಎಂದು ಸೂಚಿಸಿದೆ.

ದೇಶವನ್ನು ಕಾಡುತ್ತಿರುವ ಕೊವಿಡ್ ಪಿಡುಗಿನ ನಿರ್ವಹಣೆಯಲ್ಲಿ ವಲಸೆ ಕಾರ್ಮಿಕರ ಕ್ಷೇಮ ಪಾಲನೆಗೆ ಯಾವುದೇ ಭಂಗ ಉಂಟಾಗಬಾರದು ಎಂದು ಕೋರಿ ಈ ಮುನ್ನ ಅರ್ಜಿ ಸಲ್ಲಿಸಲಾಗಿತ್ತು. ಆಕ್ಟಿವಿಸ್ಟ್​ಗಳಾದ ಹರ್ಷ ಮಂದರ್, ಅಂಜಲಿ ಭಾರದ್ವಾಜ್ ಮತ್ತು ಜಗದೀಪ್ ಚೊಕ್ಕಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಂ. ಆರ್.ಶಾ ಅವರುಗಳಿದ್ದ ಪೀಠ ವಿಚಾರಣೆ ನಡೆಸಿತು. ವಲಸೆ ಕಾರ್ಮಿಕರಿಗೆ ಮರಳಿ ತಮ್ಮ ಗೂಡು ಸೇರಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ಆಹಾರ ಭದ್ರತೆ ಒದಗಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಅರ್ಜಿಯ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ದೇಶದ ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಪಡಿತರ ಕಾರ್ಡ್ ಇಲ್ಲದೆಯೂ ಪಡಿತರ ನೀಡಬೇಕು. ಜತೆಗೆ ಅಗತ್ಯ ಬಿದ್ದಲ್ಲಿ ಬೇಯಿಸಿದ ಆಹಾರವನ್ನು ಸಹ ಸರ್ಕಾರಗಳು ಒದಗಿಸಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದರು. ಈ ಮನವಿ ಆಲಿಸಿದ ಕೋರ್ಟ್, ಈ ಸೂಚನೆ ನೀಡಿದೆ.

ಇದನ್ನೂ ಓದಿ: ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ, ಉಚಿತ ಶಿಕ್ಷಣ: ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಘೋಷಣೆ

Vaccine Shortage: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ, ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

(Community Kitchen in transport for migrant workers direct Supreme Court on Covid 19)

Published On - 3:20 pm, Thu, 13 May 21