ಪುಟ್ಟ ಬಾಲಕನನ್ನು ತಲೆ-ಕೆಳಗೆ ಮಾಡಿದ ಮುಖ್ಯಶಿಕ್ಷಕನ ವಿರುದ್ಧ ಜಿಲ್ಲಾಧಿಕಾರಿ ಗರಂ; 2ನೇ ತರಗತಿ ವಿದ್ಯಾರ್ಥಿಯ ತಂದೆ ಹೇಳಿದ್ದೇನು?

| Updated By: Lakshmi Hegde

Updated on: Oct 29, 2021 | 12:05 PM

ಮುಖ್ಯಶಿಕ್ಷಕನ ಕೋಪಕ್ಕೆ ಹೆದರಿದ ಬಾಲಕ ಅಳಲು ಶುರು ಮಾಡಿದ್ದೇನೆ. ಇನ್ನು ಚೇಷ್ಟೆ ಮಾಡುವುದಿಲ್ಲ ನನ್ನನ್ನು ಕೆಳಗೆ ಇಳಿಸಿ ಎಂದು ಬೇಡಿಕೊಂಡಿದ್ದಾನೆ. ಅದಾದ ಸ್ವಲ್ಪ ಹೊತ್ತಿನ ನಂತರ ಪ್ರಿನ್ಸಿಪಾಲ್​ ಹುಡುಗನನ್ನು ಬಿಟ್ಟಿದ್ದಾರೆ.

ಪುಟ್ಟ ಬಾಲಕನನ್ನು ತಲೆ-ಕೆಳಗೆ ಮಾಡಿದ ಮುಖ್ಯಶಿಕ್ಷಕನ ವಿರುದ್ಧ ಜಿಲ್ಲಾಧಿಕಾರಿ ಗರಂ; 2ನೇ ತರಗತಿ ವಿದ್ಯಾರ್ಥಿಯ ತಂದೆ ಹೇಳಿದ್ದೇನು?
ಪುಟ್ಟ ಬಾಲಕನನ್ನು ತಲೆಕೆಳಗೆ ಮಾಡಿದ ಮುಖ್ಯ ಶಿಕ್ಷಕ (ಫೋಟೋ ಕೃಪೆ ಇಂಡಿಯಾ ಟುಡೆ)
Follow us on

ಮುಖ್ಯಶಿಕ್ಷಕರೊಬ್ಬರು (School Principal)  ಶಾಲೆಯ ಮೊದಲ ಫ್ಲೋರ್​​​ನಲ್ಲಿ ನಿಂತು, ಎರಡನೇ ತರಗತಿ ಹುಡುಗನೊಬ್ಬನ ಕಾಲು ಹಿಡಿದು, ಆತನನ್ನು ಉಲ್ಟಾ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಈ ಫೋಟೋ ನಿಜಕ್ಕೂ ಹೆದರಿಕೆ ಹುಟ್ಟಿಸುವಂತೆ ಇದೆ. ಮೊದಲ ಅಂತಸ್ತಿನ ಮೇಲೆ ನಿಂತ ಶಿಕ್ಷಕನ ಅಕ್ಕಪಕ್ಕ ಇನ್ನೂ ಕೆಲವು ವಿದ್ಯಾರ್ಥಿಗಳು ನಿಂತಿದ್ದಾರೆ. ಆ ಶಿಕ್ಷಕ 2ನೇ ತರಗತಿ ಬಾಲಕನ ಒಂದು ಕಾಲನ್ನು ಹಿಡಿದು ಅವನನ್ನು ತಲೆ ಕೆಳಗೆ ಮಾಡಿದ್ದಾನೆ. ಹಾಗೇ, ನೆಲದ ಕಡೆಗೆ ತಲೆ ಇದೆ. ಈ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಖಾಸಗಿ ಶಾಲೆಯೊಂದರದ್ದು ಎಂದು ಹೇಳಲಾಗಿದ್ದು, ಇದೀಗ ಜಿಲ್ಲಾಧಿಕಾರಿ (District Magistrate) ಶಿಕ್ಷಕನ ವಿರುದ್ಧ ದೂರು ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ.  

ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ ಸಂಸ್ಥಾನದ ಜ್ಯೂನಿಯರ್​ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್​ ಏನೋ ಚೇಷ್ಟೆ ಮಾಡಿದ ಎಂಬ ಕಾರಣಕ್ಕೆ ಶಾಲೆಯ ಪ್ರಿನ್ಸಿಪಾಲ್​​ ಮನೋಜ್​ ವಿಶ್ವಕರ್ಮ ಸಿಟ್ಟಾಗಿ, ಆತನಿಗೆ ಹೀಗೆ ಶಿಕ್ಷೆ ಕೊಡಲು ಮುಂದಾಗಿದ್ದಾರೆ. ಸೋನು ಸ್ವಬಾವತಃ ತುಂಟನಾಗಿದ್ದು,ಹೆದ ಗುರುವಾರ ಕೂಡ ತಿಂಡಿ ತಿನ್ನುವ ಹೊತ್ತಲ್ಲಿ ಏನೋ ಕುಚೇಷ್ಟೆ ಮಾಡಿದ್ದಾನೆ. ಅಷ್ಟಕ್ಕೇ ಕೋಪಗೊಂಡು ಅಲ್ಲಿಗೆ ಬಂದ ಮನೋಜ್​ ವಿಶ್ವಕರ್ಮ, ಒಂದೇ ಕೈಯಲ್ಲಿ ಪುಟ್ಟ ಹುಡುಗನ ಒಂದು ಕಾಲು ಎತ್ತಿಹಿಡಿದು ತಲೆ-ಕೆಳಗೆ ಮಾಡಿದ್ದಾರೆ. ಮೊದಲ ಫ್ಲೋರ್​​ನಲ್ಲಿ ನಿಂತು ಕೆಳಗೆ ಎಸೆಯುತ್ತೇನೆ ಎಂದು ಹೆದರಿಸಿದ್ದಾರೆ.

ಇನ್ನು ಮುಖ್ಯಶಿಕ್ಷಕನ ಕೋಪಕ್ಕೆ ಹೆದರಿದ ಬಾಲಕ ಅಳಲು ಶುರು ಮಾಡಿದ್ದೇನೆ. ಇನ್ನು ಚೇಷ್ಟೆ ಮಾಡುವುದಿಲ್ಲ ನನ್ನನ್ನು ಕೆಳಗೆ ಇಳಿಸಿ ಎಂದು ಬೇಡಿಕೊಂಡಿದ್ದಾನೆ. ಅದಾದ ಸ್ವಲ್ಪ ಹೊತ್ತಿನ ನಂತರ ಪ್ರಿನ್ಸಿಪಾಲ್​ ಹುಡುಗನನ್ನು ಬಿಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಈ ದೃಶ್ಯವನ್ನು ವಿಡಿಯೋ ಮಾಡಿದವರು ಯಾರೋ ಸೋಷಿಯಲ್ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ವಿಡಿಯೋ ನೋಡುತ್ತಿದ್ದಂತೆ ಜಿಲ್ಲಾಧಿಕಾರಿ ಪ್ರವೀಣ್​ ಕುಮಾರ್​ ಲಕ್ಷ್​ಕರ್​​ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೂಡಲೇ ಖಾಸಗಿ ಶಾಲೆಗೆ ಹೋಗಿ, ಘಟನೆಯ ತನಿಖೆ ನಡೆಸಿ ಎಂದು ಅಲ್ಲಿನ ಶಿಕ್ಷಣ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಹಾಗೇ, ಮುಖ್ಯ ಶಿಕ್ಷಕನ ವಿರುದ್ಧ ದೂರು ದಾಖಲಿಸಲೂ ನಿರ್ದೇಶನ ನಡೆಸಿದ್ದಾರೆ. ಇನ್ನು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ನೋಡಿದ ನೆಟ್ಟಿಗರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪುಟ್ಟ ಬಾಲಕನ ತಂದೆ ರಂಜಿತ್​ ಯಾದವ್​, ನನ್ನ ಮಗ ತುಂಟ ಹೌದು. ಅವನು ಉಳಿದ ಮಕ್ಕಳನ್ನು ಕರೆದುಕೊಂಡು ಗೋಲ್​ಗಪ್ಪಾ ತಿನ್ನಲು ಹೋಗಿದ್ದಕ್ಕೆ ಪ್ರಿನ್ಸಿಪಾಲ್​ ಹೀಗೆ ಶಿಕ್ಷೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ವಧುವಿನಂತೆ ರೆಡಿಯಾಗಿ ಕುಳಿತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ

ಕೊನೆಗೂ ಪ್ರಪೋಸ್​ ಮಾಡಿದ ಹರ್ಷ; ಇದು ವರುಧಿನಿಗೆ ಮೋಸ ಮಾಡಿದಂತೆ ಎಂದ ಭುವಿ, ಮುಂದೇನು?

Published On - 12:05 pm, Fri, 29 October 21