Varun Singh Death: ವರುಣ್​ ಸಿಂಗ್​ ನಿಧನ ಸುದ್ದಿ ಕೇಳಿ ಅತ್ಯಂತ ವೇದನೆಯಾಯಿತು; ಪ್ರಧಾನಿ ಮೋದಿ ಸಂತಾಪ

| Updated By: Lakshmi Hegde

Updated on: Dec 15, 2021 | 3:01 PM

ಜೀವನ್ಮರಣದ ನಡುವೆ ಹೋರಾಟ ನಡೆಸಿದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಮರಣದಿಂದ ನೋವಾಗಿದೆ. ಅವರು ಶೌರ್ಯ ಮತ್ತು ಅದಮ್ಯ ಧೈರ್ಯ ಮನೋಭಾವ ಪ್ರದರ್ಶಿಸಿದ್ದ ಸೈನಿಕ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.

Varun Singh Death: ವರುಣ್​ ಸಿಂಗ್​ ನಿಧನ ಸುದ್ದಿ ಕೇಳಿ ಅತ್ಯಂತ ವೇದನೆಯಾಯಿತು; ಪ್ರಧಾನಿ ಮೋದಿ ಸಂತಾಪ
ವರುಣ್ ಸಿಂಗ್ ಮತ್ತು ಪ್ರಧಾನಿ ಮೋದಿ
Follow us on

Varun Singh Passes Away: ತಮಿಳುನಾಡಿನ ಸೇನಾ ಹೆಲಿಕಾಪ್ಟರ್ ಪತನ(Tamil Nadu Chopper Crash)ದಲ್ಲಿ ಗಾಯಗೊಂಡಿದ್ದ ಗ್ರೂಪ್​ ಕ್ಯಾಪ್ಟನ್ ವರುಣ್​ ಸಿಂಗ್ (Group Captain Varun Singh) ಇಂದು ನಿಧನರಾಗಿದ್ದಾರೆ. ವರುಣ್​ ಸಿಂಗ್​ ನಿಧನಕ್ಕೆ ಇಡೀ ರಾಷ್ಟ್ರವೇ ಸಂತಾಪ ಸೂಚಿಸುತ್ತಿದೆ. ರಾಜಕೀಯ ಪಕ್ಷಗಳ ನಾಯಕರು, ರಕ್ಷಣಾ ಅಧಿಕಾರಿಗಳು, ಗಣ್ಯರು, ಸಾರ್ವಜನಿಕರು ವರುಣ್​ ಸಿಂಗ್​​ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಡಿಸೆಂಬರ್ 8ರಂದು ತಮಿಳುನಾಡಿನಲ್ಲಿ ನಡೆದಿದ್ದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​, ಅವರ ಪತ್ನಿ ಮಧುಲಿಕಾ ಮತ್ತು 11 ಸೇನಾಧಿಕಾರಿಗಳು ಮೃತಪಟ್ಟಿದ್ದರು. ಬದುಕುಳಿದಿದ್ದು ವರುಣ್​ ಸಿಂಗ್ ಮಾತ್ರವಾಗಿತ್ತು.  ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಸುಮಾರು 1 ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಇಂದು ಕೊನೆಯುಸಿರೆಳೆದಿದ್ದಾರೆ. ಭಾರತೀಯ ವಾಯುಸೇನೆ ವರುಣ್​ ಸಿಂಗ್​ ಮರಣವನ್ನು ದೃಢಪಡಿಸುತ್ತಿದ್ದಂತೆ ಪ್ರಧಾನಿ ಮೋದಿ ಸೇರಿ, ಹಲವರು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.  

ಪ್ರಧಾನಮಂತ್ರಿ ನರೇಂದ್ರ ಮೋದಿ: ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ಅವರು ಹೆಮ್ಮೆ, ವೃತ್ತಿಪರತೆ ಮತ್ತು ಶೌರ್ಯದಿಂದ ಈ ದೇಶದಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನನಗೆ ತುಂಬ ವೇದನೆಯಾಗುತ್ತಿದೆ. ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನೆಂದೂ ನಾವು ಮರೆಯಲು ಸಾಧ್ಯವಿಲ್ಲ. ಅವರ ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರಿಗೆ ನನ್ನ ಸಾಂತ್ವನಗಳು. ಓಂ ಶಾಂತಿ.

ಗೃಹ ಸಚಿವ ಅಮಿತ್​ ಶಾ: ಗ್ರೂಪ್​ ಕ್ಯಾಪ್ಟನ್​ ವರುಣ್ ಸಿಂಗ್​ ನಿಧನದ ಸುದ್ದಿ ಕೇಳಿ ತುಂಬ ನೋವಾಯಿತು. ಅವರ ವೀರ ಆತ್ಮಕ್ಕೆ ದೇವರು ಆಶೀರ್ವದಿಸಲಿ. ಅವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ
ರಾಷ್ಟ್ರಪತಿ ರಾಮನಾಥ ಕೋವಿಂದ್​: ಜೀವನ್ಮರಣದ ನಡುವೆ ಹೋರಾಟ ನಡೆಸಿದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಮರಣದಿಂದ ನೋವಾಗಿದೆ. ಅವರು ಶೌರ್ಯ ಮತ್ತು ಅದಮ್ಯ ಧೈರ್ಯ ಮನೋಭಾವ ಪ್ರದರ್ಶಿಸಿದ್ದ ಸೈನಿಕ. ಇಡೀ ರಾಷ್ಟ್ರ ಅವರಿಗೆ ಆಭಾರಿಯಾಗಿದೆ. ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನದ ಸುದ್ದಿ ಕೇಳಿ ಸಂಕಟವಾಯಿತು. ಅವರ ಅತ್ಯಮೂಲ್ಯ ಸೇವೆಯನ್ನು ದೇಶವೆಂದೂ ಮರೆಯುವುದಿಲ್ಲ. ವರುಣ್ ಸಿಂಗ್ ಶೌರ್ಯಕ್ಕೆ ನನ್ನ ಸಲಾಂ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ: ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ಅವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಾಂತ್ವನಗಳು. ಇಡೀ ದೇಶಕ್ಕೆ ಇದೊಂದು ದುಃಖದ ಸನ್ನಿವೇಶ. ವರುಣ್​ ಸಿಂಗ್​ ಕುಟುಂಬದೊಂದಿಗೆ ನಾವಿದ್ದೇವೆ.
ರಕ್ಷಣಾ ಸಚಿವ ರಾಜನಾಥ್​ ಸಿಂಗ್​: ವರುಣ್ ಸಿಂಗ್ ಸಾವಿನ ಸುದ್ದಿ ಕೇಳಿ ನನಗೆ ಆಗುತ್ತಿರುವ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ಹೋರಾಡಿದ ವೀರ ಅವರು. ಇಂಥ ದುಃಖದ ಸನ್ನಿವೇಶದಲ್ಲಿ ಅವರ ಕುಟುಂಬದೊಟ್ಟಿಗೆ ನಾವಿದ್ದೇವೆ.

ಇನ್ನುಳಿದಂತೆ ಭಾರತದ ಮಾಜಿ ಕ್ರಿಕೆಟರ್​ಗಳಾದ ವಿವಿಎಸ್ ಲಕ್ಷ್ಮಣ್​, ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್​​ ಕೂಡ ಸಂತಾಪ ಸೂಚಿಸಿದ್ದಾರೆ. ಹಾಗೇ, ಬಹುತೇಕ ಎಲ್ಲ ಕೇಂದ್ರ ಸಚಿವರುಗಳು, ಕಾಂಗ್ರೆಸ್​ ನಾಯಕರು, ಭಾರತೀಯ ಸೇನೆ ಎಡಿಜಿ, ಜನರಲ್​ ಎಂ.ಎಂ.ನರವಾಣೆ, ಎಲ್ಲ ಶ್ರೇಣಿಯ ಸೇನಾಧಿಕಾರಿಗಳೂ ಕೂಡ ಟ್ವೀಟ್ ಮೂಲಕ ನೋವು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊವಿಡ್ ನಿರೋಧಕ ಲಸಿಕಾ ಆಂದೋಲನಕ್ಕೆ ಇನ್ನಷ್ಟು ವೇಗ: ಜೈಕೋವ್ ಲಸಿಕೆ ಶೀಘ್ರ ಲಭ್ಯ