ಭಯೋತ್ಪಾದಕರ ಬೆಂಬಲಿಗರ ಆಸ್ತಿ ಮುಟ್ಟುಗೋಲು, ಅವರ ಕುಟುಂಬಕ್ಕಿಲ್ಲ ಸರ್ಕಾರಿ ಉದ್ಯೋಗ

|

Updated on: Jun 14, 2024 | 3:52 PM

ಅಮಿತ್​​​ ಶಾ ಅಧಿಕಾರ ಸ್ವೀಕಾರಿಸುತ್ತಿದ್ದಂತೆ, ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದ್ದಾರೆ. ಇದೀಗ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ, ಉಗ್ರರಲ್ಲಿ ಭಯ ಸೃಷ್ಟಿಸಿದೆ. ಜಮ್ಮು ಮತ್ತು ಕಾಶ್ಮೀರದ ಮಾದರಿಯಲ್ಲಿ ಭಯೋತ್ಪಾದಕರ ಬೆಂಬಲಿಗರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹಿರಿಯ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳ ಸಭೆಯಲ್ಲಿ ಕೇಂದ್ರವು ನಿರ್ಧರಿಸಿದೆ.

ಭಯೋತ್ಪಾದಕರ ಬೆಂಬಲಿಗರ ಆಸ್ತಿ ಮುಟ್ಟುಗೋಲು, ಅವರ ಕುಟುಂಬಕ್ಕಿಲ್ಲ ಸರ್ಕಾರಿ ಉದ್ಯೋಗ
Follow us on

ದೆಹಲಿ, ಜೂ.14: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಎನ್​ಡಿಎ ಬೆಂಬಲದೊಂದಿಗೆ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕಾರಿಸಿ, ಕಚೇರಿಯಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ದಿನದಂದು ರೈತರಿಗೆ ದೊಡ್ಡ ಗಿಫ್ಟ್​​​​ ನೀಡಿದ್ದರು. ಇದೀಗ ಗೃಹಸಚಿವ ಅಮಿತ್​​​ ಶಾ ಅವರು ಮಹತ್ವದ ನಿರ್ಧಾರ ತೆಗೆದುಕೊಳ್ಳವ ಮೂಲಕ ಉಗ್ರರಿಗೆ ಕೆಟ್ಟ ದಿನಗಳನ್ನು ನೆನಪಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾದರಿಯಲ್ಲಿ ಭಯೋತ್ಪಾದಕರ ಬೆಂಬಲಿಗರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹಿರಿಯ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳ ಸಭೆಯಲ್ಲಿ ಕೇಂದ್ರವು ನಿರ್ಧರಿಸಿದೆ. ಅಮಿತ್​​​ ಶಾ ಗೃಹ ಸಚಿವರಾಗಿ ಅಧಿಕಾರ ಸ್ವೀಕಾರಿಸಿದ ನಂತರ ತೆಗೆದುಕೊಂಡ ಮೊದಲ ಮಹತ್ವದ ನಿರ್ಧಾರ ಇದ್ದಾಗಿದೆ. ಇದು ಮಾತ್ರವಲ್ಲದೆ ಅವರ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈಗಾಗಲೇ ಎನ್‌ಡಿಎ ಸರ್ಕಾರ ಭಯೋತ್ಪಾದಕರ ಬೆಂಬಲಿಗರ ಪಟ್ಟಿಯನ್ನೂ ಮಾಡಲಿದೆ. ಭಯೋತ್ಪಾದಕ ಕೃತ್ಯಗಳನ್ನು ಮಾಡುವ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಲಾಗುವುದಿಲ್ಲ. ಇತ್ತೀಚಿನ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಹಾಗೂ ಅಮರನಾಥ ಯಾತ್ರೆ ಸಮಯದಲ್ಲಿ ನಡೆದ ದಾಳಿ ಬಗ್ಗೆ ನೆನ್ನೆ ಮೋದಿ ಅವರು ಉನ್ನತ ಅಧಿಕಾರಿಗಳ ಸಭೆಯನ್ನು ಕರೆದರು. ಈ ಸಮಯಲ್ಲಿ ಗೃಹ ಸಚಿವ ಅಮಿತ್​​​ ಶಾ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಕಳೆದ ಕೆಲವು ದಿನಗಳಿಂದ, ರಿಯಾಸಿ, ಕಥುವಾ ಮತ್ತು ದೋಡಾದಲ್ಲಿ ಭಯೋತ್ಪಾದಕ ದಾಳಿಗಳು ನಡೆದಿದ್ದು, 7 ಯಾತ್ರಿಕರು ಮತ್ತು ಒಬ್ಬ ಸಿಆರ್‌ಪಿಎಫ್ ಜವಾನ ಸೇರಿದಂತೆ 9 ಜನರು ಸಾವನ್ನಪ್ಪಿದರು ಹಾಗೂ 7 ಭದ್ರತಾ ಸಿಬ್ಬಂದಿ ಮತ್ತು ಇತರರು ಗಾಯಗೊಂಡಿದ್ದಾರೆ. ಪಿರ್ ಪಂಜಾಲ್ ವ್ಯಾಪ್ತಿಯ ಕೆಳಗಿರುವ ಜಮ್ಮುವಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ದಾಳಿಯ ಘಟನೆಗಳು ಹೆಚ್ಚಿವೆ. ಜಮ್ಮುವಿಗೆ ಸಂಪರ್ಕ ಕಲ್ಪಿಸುವ ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತದೊಳಗೆ ನುಸುಳುವಿಕೆ ಹೆಚ್ಚುತ್ತಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆ ತಲುಪಿದ ನಾಗಾಸ್ತ್ರ; ನಾಗಪುರದ ಕಂಪನಿ ತಯಾರಿಸಿದ ಪ್ರಬಲ ಡ್ರೋನ್ ಅಸ್ತ್ರ ಇದು

ಅಮರನಾಥ ಯಾತ್ರೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದ ಮೇಲೆ ದಾಳಿ ಮಾಡಲು ನೋಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದೆ, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್ ಸೇರಿದಂತೆ 500 ಕ್ಕೂ ಹೆಚ್ಚು ಕಂಪನಿಗಳ ಅರೆಸೇನಾ ಪಡೆಗಳನ್ನು ಅಮರನಾಥ ಯಾತ್ರೆ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಇನ್ನು ಮೋದಿ ನಡೆಸಿದ ಸಭೆಯಲ್ಲಿ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳಲ್ಲದೆ, ಗೃಹ ಸಚಿವಾಲಯದ ಕಾಶ್ಮೀರ ವಿಭಾಗ ಮತ್ತು ಮಿಲಿಟರಿ ಗುಪ್ತಚರ ವಿಭಾಗ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ