AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಸೇನೆ ತಲುಪಿದ ನಾಗಾಸ್ತ್ರ; ನಾಗಪುರದ ಕಂಪನಿ ತಯಾರಿಸಿದ ಪ್ರಬಲ ಡ್ರೋನ್ ಅಸ್ತ್ರ ಇದು

Indian army gets Nagastra-1: ಮಹಾರಾಷ್ಟ್ರದ ಸೋಲಾರ್ ಇಂಡಸ್ಟ್ರೀಸ್​ಗೆ ಸೇರಿದ ಇಇಎಲ್ ಸಂಸ್ಥೆ ತಯಾರಿಸಿರುವ ಮಿಲಿಟರಿ ಶ್ರೇಣಿಯ ನಾಗಾಸ್ತ್ರ-1 ಡ್ರೋನ್​ಗಳ ಮೊದಲ ಬ್ಯಾಚ್ ಈಗ ಭಾರತೀಯ ಸೇನೆ ಕೈಸೇರಿದೆ. ಈ ಶ್ರೇಣಿಯ ಡ್ರೋನ್​ಗಳನ್ನು ಇದೆ ಮೊದಲ ಬಾರಿಗೆ ದೇಶೀಯವಾಗಿ ನಿರ್ಮಿಸಲಾಗಿರುವುದು. ಆಮದಿತ ಡ್ರೋನ್​ಗಳಿಗಿಂತ ಬಹಳ ಅಗ್ಗದ ಬೆಲೆಗೆ ಇವನ್ನು ತಯಾರಿಸಲಾಗಿದೆ. 2 ಮೀಟರ್​ನಷ್ಟು ನಿಖರವಾಗಿ ಈ ಡ್ರೋನ್​ಗಳು ಗುರಿಗೆ ಹೊಡೆಯಬಲ್ಲುವು. 30 ಕಿಮೀ ಶ್ರೇಣಿ ಹೊಂದಿವೆ.

ಭಾರತೀಯ ಸೇನೆ ತಲುಪಿದ ನಾಗಾಸ್ತ್ರ; ನಾಗಪುರದ ಕಂಪನಿ ತಯಾರಿಸಿದ ಪ್ರಬಲ ಡ್ರೋನ್ ಅಸ್ತ್ರ ಇದು
ನಾಗಾಸ್ತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2024 | 2:46 PM

Share

ನವದೆಹಲಿ, ಜೂನ್ 14: ಸಂಪೂರ್ಣ ದೇಶೀಯವಾಗಿ ತಯಾರಿಸಲಾಗಿರುವ ನಾಗಾಸ್ತ್ರ (Nagastra-1) ಎಂಬ ಪ್ರಬಲ ಮಿಲಿಟರಿ ಡ್ರೋನ್​ಗಳು ಭಾರತೀಯ ಸೇನೆಗೆ ಸರಬರಾಜಾಗಿವೆ. ನಾನಾಸ್ತ್ರ-1 ನ ಮೊದಲ ಬ್ಯಾಚ್ ಡ್ರೋನ್​ಗಳು ಸೇನೆಗೆ ಸಿಕ್ಕಿವೆ. ಯಾವುದೇ ರಿಸ್ಕ್ ಇಲ್ಲದೇ ಉಗ್ರರ ನೆಲೆಗಳು, ಸ್ಥಳಗಳ, ವ್ಯಕ್ತಿಗಳ ಮೇಲೆ ಕ್ಷಿಪ್ರವಾಗಿ ಮತ್ತು ನಿಖರವಾಗಿ ದಾಳಿ ಮಾಡಲು ಈ ಡ್ರೋನ್​ಗಳು ಹೇಳಿ ಮಾಡಿಸಿವೆ. ಈ ಶ್ರೇಣಿಯ ಮತ್ತು ಸಾಮರ್ಥ್ಯದ ಡ್ರೋನ್ ಅನ್ನು ಭಾರತದಲ್ಲಿ ತಯಾರಿಸಲಾಗಿರುವುದು ಇದೇ ಮೊದಲು. ಮಹಾರಾಷ್ಟ್ರದ ನಾಗಪುರದಲ್ಲಿರುವ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ಎಕನಾಮಿಕ್ ಎಕ್ಸ್​ಪ್ಲೋಸಿವ್ಸ್ ಲಿ (EEL- Economic Explosives Ltd) ಈ ಹೈಟೆಕ್ ಡ್ರೋನ್ ಅನ್ನು ತಯಾರಿಸಿದೆ.

ನಾಲ್ಕು ವರ್ಷಗಳ ಹಿಂದೆಯೇ ಈಲ್ ಸಂಸ್ಥೆ ತನ್ನ ಈ ಡ್ರೋನ್​ಗಳ ಡೆಮೋವನ್ನು ಸೇನೆಗೆ ತೋರಿಸಿತ್ತು. 480 ಡ್ರೋನ್​ಗಳಿಗೆ ಆರ್ಡರ್ ಸಿಕ್ಕಿತ್ತು. ಈಗ ಮೊದಲ ಬ್ಯಾಚ್​ನಲ್ಲಿ 120 ಡ್ರೋನ್​ಗಳು ತಯಾರಾಗಿ ಸೇನೆಗೆ ಕಳುಹಿಸಲಾಗಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಈ ಡ್ರೋನ್​ಗಳು ಮುಕ್ಕಾಲು ಪಾಲು ದೇಶೀಯವಾಗಿ ನಿರ್ಮಾಣವಾಗಿವೆ. ಕೆಲ ಬಿಡಿಭಾಗಗಳನ್ನಷ್ಟೇ ಹೊರಗಡೆಯಿಂದ ತರಿಸಲಾಗಿದೆ. ಶೇ. 74ರಷ್ಟು ಭಾಗವನ್ನು ದೇಶೀಯವಾಗಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ಅಮೆರಿಕ-ಸೌದಿ ಮಧ್ಯೆ ಇನ್ಮುಂದೆ ಇರಲ್ಲ ಪೆಟ್ರೋಡಾಲರ್; ಚೀನಾ ಕಡೆ ವಾಲುತ್ತಿದೆಯಾ ಗ್ಲೋಬಲ್ ಪವರ್?

ಭಾರತದ ಬಳಿ ನಾಗಾಸ್ತ್ರ-1ರಂತಹ ಡ್ರೋನ್​ಗಳು ಇವೆ. ಆದರೆ, ಅವುಗಳನ್ನು ಇಸ್ರೇಲ್, ಪೋಲ್ಯಾಂಡ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಭಾರತದ ಖಾಸಗಿ ಕಂಪನಿಯಿಂದ ಭಾರತದಲ್ಲಿ ಈ ಶ್ರೇಣಿಯ ಡ್ರೋನ್ ಇದೇ ಮೊದಲ ಬಾರಿಗೆ ತಯಾರಿಸಲಾಗಿದೆ. ಇದರ ವಿಶೇಷತೆ ಎಂದರೆ ಟಾರ್ಗೆಟ್ ಇಟ್ಟ ಸ್ಥಳವನ್ನು ಇದು 2 ಮೀಟರ್ ನಿಖರತೆಯಲ್ಲಿ ಚಿಂದಿ ಉಡಾಯಿಸಬಲ್ಲುದು.

ಇದು ಗುರಿಯ ಜಾಗಕ್ಕೆ ಹೋಗಿ ಅಪ್ಪಳಿಸಿ ಸ್ಫೋಟಗೊಳ್ಳುತ್ತದೆ. ಒಂದು ರೀತಿಯಲ್ಲಿ ಆತ್ಮಹತ್ಯಾ ಡ್ರೋನ್ ಇದಾಗಿದೆ. 9 ಕಿಲೋ ಇರುವ ಇದರದ್ದು ಹಗುರ ತೂಕ. ಒಬ್ಬ ವ್ಯಕ್ತಿ ಇದನ್ನು ಹೊತ್ತು ಹೋಗಬಹುದು. ರಿಮೋಟ್ ಕಂಟ್ರೋಲ್ ಬಳಸಿ 15 ಕಿಮೀ ದೂರದವರೆಗೂ ಇದನ್ನು ಹಾರಿಸಬಹುದು. ಇದರ ಸ್ವಯಂಚಾಲಿತ ಶ್ರೇಣಿ 30 ಕಿಮೀ ಇದೆ. ಅಂದರೆ 30 ಕಿಮೀ ದೂರದ ಟಾರ್ಗೆಟ್ ಮೇಲೆ ಇದು ದಾಳಿ ಮಾಡಬಲ್ಲುದು. ಇದಕ್ಕಿರುವ ಬ್ಯಾಟರಿ ಶಕ್ತಿಯಿಂದ 30 ನಿಮಿಷದವರೆಗೂ ಡ್ರೋನ್ ಹಾರಾಡಬಲ್ಲುದು. ಇದು ಶಬ್ದ ಹೊರಡಿಸುವುದೂ ಬಹಳ ಕಡಿಮೆ. 200 ಮೀಟರ್​ಗಿಂತ ಹೆಚ್ಚು ಎತ್ತರದಲ್ಲಿ ಈ ಡ್ರೋನ್ ಶತ್ರುವಿನ ಕಣ್ಣಿಗೆ ಬೀಳುವುದೇ ಇಲ್ಲ.

ಈಲ್ ತಯಾರಿಸಿರುವ ನಾಗಾಸ್ತ್ರ-1 ಡ್ರೋನ್​ಗಳು ಬಹಳ ಅಗ್ಗವೂ ಹೌದು. ಇಸ್ರೇಲ್, ಪೋಲ್ಯಾಂಡ್ ಇತ್ಯಾದಿ ನಿರ್ಮಿತ ಡ್ರೋನ್​ಗಳಿಗಿಂತ ಬಹಳ ಕಡಿಮೆ ಬೆಲೆಯಲ್ಲಿ ತಯಾರಿಸಲಾಗುತ್ತಿದೆ.

ಇದನ್ನೂ ಓದಿ: ಮರ್ಸೆಡೀಸ್ ಹೆಸರು ಯಾವ ಸಂಸ್ಥಾಪಕರದ್ದಲ್ಲ; ಇಲ್ಲಿದೆ ಈ ಬ್ರ್ಯಾಂಡ್ ಹಿಂದಿನ ಕುತೂಹಲದ ಸಂಗತಿ

ಮಿಂಚುತ್ತಿರುವ ಸೋಲಾರ್ ಇಂಡಸ್ಟ್ರೀಸ್

ನಾಗಾಸ್ತ್ರ ತಯಾರಿಸುವ ಇಇಎಲ್ ಕಂಪನಿಯು ಸೋಲಾರ್ ಇಂಡಸ್ಟ್ರೀಸ್​ಗೆ ಅಂಗಸಂಸ್ಥೆಯಾಗಿದೆ. ಡ್ರೋನ್ ಮಾತ್ರವಲ್ಲ ಇದು ಬೇರೆ ಡ್ರೋನ್​ಗಳನ್ನು ಹೊಡೆದುರುಳಿಸಬಲ್ಲ ಆ್ಯಂಟಿ-ಡ್ರೋನ್ ಮಿಸೈಲ್​ಗಳನ್ನು ಅಭಿವೃದ್ಧಿಪಡಿಸಿದೆ. ಇನ್ನು, ನಾಗಾಸ್ತ್ರ ಶ್ರೇಣಿಯಲ್ಲಿ ಇನ್ನೂ ಪ್ರಬಲ ಡ್ರೋನ್​ಗಳು ಅದರ ಬಳಿ ಇದೆ. 100 ಕಿಮೀ ದೂರದ ಶ್ರೇಣಿಯ ಡ್ರೋನ್ ಕೂಡ ಇದೆ. ಮುಂದಿನ ದಿನಗಳಲ್ಲಿ ಇವು ಸೇನೆಗೆ ಪ್ರಬಲ ಅಸ್ತ್ರಗಳಾಗಲಿವೆ.

ಡ್ರೋನ್, ಕ್ಷಿಪಣಿ ಮಾತ್ರವಲ್ಲ ಮಲ್ಟಿಮೋಡಲ್ ಹ್ಯಾಂಡ್ ಗ್ರೆನೇಡ್​ಗಳನ್ನೂ ಸೇನೆಗಾಗಿ ತಯಾರಿಸಿಕೊಡಲಾಗುತ್ತಿದೆ. ಮಿಲಿಟರಿ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಸೋಲಾರ್ ಇಂಡಸ್ಟ್ರೀಸ್ ಷೇರು ಮಾರುಕಟ್ಟೆಯಲ್ಲೂ ಕ್ಷಿಪ್ರ ಬೆಳವಣಿಗೆ ಹೊಂದಿದೆ. 2020ರಲ್ಲಿ 900 ರೂಗಿಂತ ಕಡಿಮೆ ಇದ್ದ ಇದರ ಷೇರುಬೆಲೆ ಈಗ 10,000 ರೂ ಗಡಿ ಸಮೀಪ ಹೋಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ