ಅಮೆರಿಕ-ಸೌದಿ ಮಧ್ಯೆ ಇನ್ಮುಂದೆ ಇರಲ್ಲ ಪೆಟ್ರೋಡಾಲರ್; ಚೀನಾ ಕಡೆ ವಾಲುತ್ತಿದೆಯಾ ಗ್ಲೋಬಲ್ ಪವರ್?

America-Saudi Arabia petro dollar agreement: ಸೌದಿ ಅರೇಯಾ ಜೊತೆ 1974ರಲ್ಲಿ ಅಮೆರಿಕ ಮಾಡಿಕೊಂಡಿದ್ದ ಪೆಟ್ರೋಡಾಲರ್ ಒಪ್ಪಂದ ಈ ವರ್ಷ ಮುಗಿದಿದೆ. ಒಪ್ಪಂದವನ್ನು ಮುಂದುವರಿಸದಿರಲು ಸೌದಿ ಅರೇಬಿಯಾ ಮಹತ್ವದ ನಿರ್ಧಾರ ಮಾಡಿದೆ. ಇದು ಡಾಲರ್ ಕರೆನ್ಸಿ ಮತ್ತು ಅಮೆರಿಕದ ಪ್ರಾಬಲ್ಯವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ವಿಶ್ವದಲ್ಲಿ ಅಮೆರಿಕ ಅಲ್ಲದೆ ಬೇರೆ ಬೇರೆ ಪವರ್ ಸೆಂಟರ್​​ಗಳು ನಿರ್ಮಾಣ ಆಗಬಹುದು.

ಅಮೆರಿಕ-ಸೌದಿ ಮಧ್ಯೆ ಇನ್ಮುಂದೆ ಇರಲ್ಲ ಪೆಟ್ರೋಡಾಲರ್; ಚೀನಾ ಕಡೆ ವಾಲುತ್ತಿದೆಯಾ ಗ್ಲೋಬಲ್ ಪವರ್?
ಡಾಲರ್ ಕರೆನ್ಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2024 | 1:46 PM

ನವದೆಹಲಿ, ಜೂನ್ 14: ಜಾಗತಿಕವಾಗಿ ಮತ್ತು ರಾಜಕೀಯವಾಗಿ ಬಹಳ ಮಹತ್ವದ ಬೆಳವಣಿಗೆಯಲ್ಲಿ ಸೌದಿ ಅರೇಬಿಯಾ ಅಮೆರಿಕದೊಂದಿಗೆ ಮಾಡಿಕೊಂಡಿದ್ದ 50 ವರ್ಷದ ಹಿಂದಿನ ಪೆಟ್ರೋಡಾಲರ್ ಒಪ್ಪಂದ (US – Saudi Arabia petro dollar agreement) ಅಂತ್ಯಗೊಂಡಿದೆ. 1975ರ ಜೂನ್ 8ರಂದು ಈ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಜೂನ್ 9ಕ್ಕೆ ಅದರ ನವೀಕರಣ ಮಾಡಬೇಕಿತ್ತು. ಆದರೆ, ಒಪ್ಪಂದ ಮುಂದುವರಿಸದಿರಲು ಸೌದಿ ಅರೇಬಿಯಾ ನಿರ್ಧರಿಸಿದೆ. ಇದರೊಂದಿಗೆ ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯೆ ಐವತ್ತು ವರ್ಷದಿಂದ ಇದ್ದ ಕೊಡು ಕೊಳ್ಳುವಿಕೆಯ ವ್ಯವಹಾರಕ್ಕೆ ಇನ್ಮುಂದೆ ಕಟ್ಟುಪಾಡುಗಳ ಬಂಧ ಇರುವುದಿಲ್ಲ. ತಜ್ಞರ ಪ್ರಕಾರ ಈ ಬೆಳವಣಿಗೆ ನಾನಾ ರೀತಿಯಲ್ಲಿ ಮಹತ್ವದ್ದಾಗಿದೆ. ಅಂದಾಜುಗಳ ಪ್ರಕಾರ, ಮೊದಲನೆಯದು ಡಾಲರ್ ಪ್ರಾಬಲ್ಯ ಕಡಿಮೆ ಆಗಬಹುದು. ಎರಡನೆಯದು, ಜಾಗತಿಕವಾಗಿ ರಾಜಕೀಯ ಪವರ್ ಸೆಂಟರ್​ಗಳಲ್ಲಿ ಬದಲಾವಣೆ ಆಗಬಹುದು.

ಏನಿದು ಪೆಟ್ರೋಡಾಲರ್ ಒಪ್ಪಂದ?

ಸೌದಿ ಅರೇಬಿಯಾ ವಿಶ್ವದಲ್ಲೇ ಅತಿಹೆಚ್ಚು ತೈಲ ಸಂಪನ್ಮೂಲ ಹೊಂದಿರುವ ದೇಶಗಳಲ್ಲಿ ಒಂದು. ಐವತ್ತು ವರ್ಷದ ಹಿಂದೆ ಸೌದಿ ಅರೇಬಿಯಾ ಜೊತೆ ಅಮೆರಿಕ ಪೆಟ್ರೋಡಾಲರ್ ಒಪ್ಪಂದ ಮಾಡಿಕೊಂಡಿತು. ಅದರ ಪ್ರಕಾರ, ಸೌದಿ ಅರೇಬಿಯಾ ಯಾವುದೇ ದೇಶಕ್ಕೆ ತೈಲ ಮಾರಿದರೂ ಅದು ಡಾಲರ್ ಕರೆನ್ಸಿಯಲ್ಲಿ ವಹಿವಾಟು ನಡೆಯಬೇಕು ಎಂಬುದು ಪ್ರಮುಖ ಅಂಶ. ಇದಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾಗೆ ಆರ್ಥಿಕ ಮತ್ತು ಮಿಲಿಟರಿ ನೆರವು ಕೊಡಲು ಅಮೆರಿಕ ಬದ್ಧವಾಗಿರಬೇಕು.

ಪೆಟ್ರೋಡಾಲರ್ ಒಪ್ಪಂದದಿಂದ ಅಮೆರಿಕಕ್ಕೆ ಲಾಭ ಹಲವು

ಪೆಟ್ರೋಡಾಲರ್ ಒಪ್ಪಂದ ಇಷ್ಟೇ ಸಿಂಪಲ್. ಆದರೆ ಇದರಿಂದ ಅಮೆರಿಕಕ್ಕೆ ಆದ ಲಾಭ ಮಾತ್ರ ಬಹಳಷ್ಟು. ಸೌದಿಯ ತೈಲ ಕಂಪನಿಗಳು ಡಾಲರ್​ನಲ್ಲಿ ವ್ಯವಹರಿಸಬೇಕಿತ್ತು. ಇದನ್ನೇ ಪೆಟ್ರೋಡಾಲರ್ ಎನ್ನುವುದು. ತೈಲ ಖರೀದಿಸುವ ದೇಶಗಳು ಡಾಲರ್​ನಲ್ಲಿ ಪಾವತಿಸಬೇಕಿತ್ತು. ಎಲ್ಲೆಡೆ ಡಾಲರ್​ಗೆ ಬೇಡಿಕೆ ಹೆಚ್ಚಿತು. ಇದರ ಪರಿಣಾಮವಾಗಿ ಡಾಲರ್ ಅಂತಾರಾಷ್ಟ್ರೀಯ ಕರೆನ್ಸಿಯಾಯಿತು. ಬಹಳ ಪ್ರಬಲ ಕರೆನ್ಸಿಯಾಯಿತು.

ಇದನ್ನೂ ಓದಿ: ಟ್ವಿಟ್ಟರ್ ಖರೀದಿಸಿದ ಮೊತ್ತಕ್ಕೆ ಟೆಸ್ಲಾದಲ್ಲಿ ಇಲಾನ್ ಮಸ್ಕ್​ಗೆ ಸಂಭಾವನೆ; ಷೇರುದಾರರಿಂದ ಒಪ್ಪಿಗೆ ಮುದ್ರೆ, ಇನ್ನೇನಿದ್ರೂ ಕೋರ್ಟ್ ಒಪ್ಪಿಗೆ ಬಾಕಿ

ಅಮೆರಿಕಕ್ಕೆ ಟ್ರೇಡ್ ಡೆಫಿಸಿಟ್ ಬಹಳ ಇದೆ. ಬೇರೆ ದೇಶಗಳಾಗಿದ್ದರೆ ಮುರುಟಿಹೋಗುತ್ತಿದ್ದವು. ಆದರೆ ಪೆಟ್ರೋಡಾಲರ್ ದೆಸೆಯಿಂದ ಈ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಲು ಅಮೆರಿಕಕ್ಕೆ ಸಾಧ್ಯವಾಗಿತ್ತು.

ಇನ್ನೊಂದು ಸಂಗತಿ ಎಂದರೆ, ಸೌದಿ ಅರೇಬಿಯಾಗೆ ಡಾಲರ್ ಕರೆನ್ಸಿಯ ಪ್ರವಾಹವೇ ಬರುತ್ತಿತ್ತು. ಸೌದಿ ಮಾತ್ರವಲ್ಲ ತೈಲ ಉತ್ಪನ್ನ ದೇಶಗಳಿಗೆ ಸಾಕಷ್ಟು ಡಾಲರ್ ಕರೆನ್ಸಿ ಬರುತ್ತದೆ. ಈ ಹಣವನ್ನು ಈ ದೇಶಗಳು ಏನು ಮಾಡುತ್ತವೆ? ಇವರ ಹೆಚ್ಚಿನ ಹೂಡಿಕೆಗಳು ಅಮೆರಿಕದ ಮಾರುಕಟ್ಟೆಗೆ ಬಂದವು. ಇದರಿಂದ ವಿಶ್ವ ದೊಡ್ಡಣ್ಣನ ಆರ್ಥಿಕ ಹೊಟ್ಟೆಯೂ ತುಂಬಲು ಅನುಕೂಲವಾಯಿತು.

ರಾಜಕೀಯವಾಗಿ ಅಮೆರಿಕಕ್ಕೆ ಈ ಒಪ್ಪಂದ ತಂದ ಪ್ರಮುಖ ಲಾಭ ಎಂದರೆ ತೈಲ ಸಂಪತ್ತು ಹೆಚ್ಚಿರುವ ಗಲ್ಫ್ ಪ್ರದೇಶದಲ್ಲಿ ಅಮೆರಿಕಕ್ಕೆ ಪ್ರಬಲ ಹಿಡಿತ ಸಿಕ್ಕಂತಾಗಿತ್ತು. ಆ ಪ್ರದೇಶದಲ್ಲಿ ಅಂಕೆ ಮೀರಿದವರ ಮೇಲೆ ಎರಗಿ ಹೋದರೂ ಪ್ರತಿರೋಧ ಬರದಂತಾಗಿತ್ತು. ಹೀಗಾಗಿ, ಅಮೆರಿಕ ಅಕ್ಷರಶಃ ವಿಶ್ವದ ದೊಡ್ಡಣ್ಣನ ಪಟ್ಟವನ್ನು ಗಟ್ಟಿ ಮಾಡಿಕೊಂಡಿತ್ತು.

ಪೆಟ್ರೋಡಾಲರ್ ಒಪ್ಪಂದ ಮುರಿದು ಬಿದ್ದ ಫಲಗಳೇನು?

ಈಗ ಅಮೆರಿಕ ಮತ್ತು ಸೌದಿ ನಡುವಿನ ಪೆಟ್ರೋಡಾಲರ್ ಒಪ್ಪಂದ ಅಂತ್ಯಗೊಂಡಿರುವುದರಿಂದ ಡಾಲರ್ ಕರೆನ್ಸಿ ಪ್ರಾಬಲ್ಯಕ್ಕೆ ಬ್ರೇಕ್ ಬಿದ್ದಂತಾಗುತ್ತದೆ. ಯೂರೋ, ಚೀನೀ ಯುವಾನ್ ಮೊದಲಾದ ಇತರ ಕರೆನ್ಸಿಗಳು ಪ್ರಬಲಗೊಳ್ಳಬಹುದು. ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಸಾಕಷ್ಟು ವಿಚಲನೆಗಳಾಗಬಹುದು.

ಇದನ್ನೂ ಓದಿ: ಭಾರತಕ್ಕೆ ಹೋಲಿಸಿದರೆ ಚೀನಾ ಷೇರುಪೇಟೆ ಹೇಗೆ? ಚೀನೀ ದೌರ್ಬಲ್ಯ ಬಿಚ್ಚಿಟ್ಟ ಮಾರ್ಗನ್ ಸ್ಟಾನ್ಲೀ ಅಧಿಕಾರಿ

ಡಾಲರ್​ನಲ್ಲಿ ಹೆಚ್ಚಿನ ವಹಿವಾಟು ನಡೆಸುವ ದೇಶಗಳ ಮೇಲೆ ಪರಿಣಾಮ ಬೀರಬಹುದು. ಅಮೆರಿಕ ಆರ್ಥಿಕವಾಗಿ ಸಂಕಷ್ಟಕ್ಕೆ ಬೀಳಬಹುದು. ಅಲ್ಲಿ ಕರೆನ್ಸಿ ಕೊರತೆಯಿಂದಾಗಿ ಬಡ್ಡಿದರ ಹೆಚ್ಚಾಗಬಹುದು.

ಕೋಲ್ಡ್ ವಾರ್ ಯುಗದ ಬಳಿಕ ಜಾಗತಿಕವಾಗಿ ಏಕೈಕ ಅತಿದೊಡ್ಡ ಪವರ್ ಸೆಂಟರ್ ಆಗಿರುವುದು ಅಮೆರಿಕ. ಇನ್ನೊಂದೆಡೆ ಚೀನಾ, ರಷ್ಯಾ ನೇತೃತ್ವದಲ್ಲಿ ಗುಂಪು ಸೇರಲಾಗುತ್ತಿದ್ದು, ಈ ಗ್ರೂಪ್​ನ ಪ್ರಾಬಲ್ಯ ಹೆಚ್ಚಾಗಬಹುದು. ಬೇರೆ ಬೇರೆ ಗುಂಪುಗಳೂ ರಚನೆಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ