ಟ್ವಿಟ್ಟರ್ ಖರೀದಿಸಿದ ಮೊತ್ತಕ್ಕೆ ಟೆಸ್ಲಾದಲ್ಲಿ ಇಲಾನ್ ಮಸ್ಕ್​ಗೆ ಸಂಭಾವನೆ; ಷೇರುದಾರರಿಂದ ಒಪ್ಪಿಗೆ ಮುದ್ರೆ, ಇನ್ನೇನಿದ್ರೂ ಕೋರ್ಟ್ ಒಪ್ಪಿಗೆ ಬಾಕಿ

Elon Musk pay package of 44.9 billion dollar: ಇಲಾನ್ ಮಸ್ಕ್ ಅವರಿಗೆ 44.9 ಬಿಲಿಯನ್ ಡಾಲರ್ ಸಂಭಾವನೆ ಕೊಡುವ ಪ್ರಸ್ತಾಪಕ್ಕೆ ಟೆಸ್ಲಾ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ. ಗುರುವಾರ (ಜೂನ್ 13) ನಡೆದ ವೋಟಿಂಗ್​ನಲ್ಲಿ ಹೆಚ್ಚಿನ ಮತಗಳು ಮಸ್ಕ್ ಪರವಾಗಿ ಬಿದ್ದಿವೆ. ಮಸ್ಕ್ ಅವರಿಗೆ ಈ ಸಂಭಾವನೆಯು ನಗದು ಬದಲು ಷೇರು ಮತ್ತಿತರ ರೂಪದಲ್ಲಿ ಸಿಗಲಿದೆ. ಆದರೆ, ಡೆಲಾವೇರ್ ಕೋರ್ಟ್ ಈ ಹಿಂದೆ ಮಸ್ಕ್​ಗೆ ಕೊಡಲಾಗುವ ಪೇ ಪ್ಯಾಕೇಜ್ ಮೊತ್ತವನ್ನು ತಿರಸ್ಕರಿಸಿತ್ತು. ಟೆಸ್ಲಾ ಆಡಳಿತ ಮಂಡಳಿ ಅಥವಾ ಇಲಾನ್ ಮಸ್ಕ್ ಮತ್ತೊಮ್ಮೆ ಡೆಲಾವೇರ್ ಕೋರ್ಟ್ ಮುಂದೆ ಹೋಗಿ ಮರುಮನವಿ ಸಲ್ಲಿಸಬಹುದು.

ಟ್ವಿಟ್ಟರ್ ಖರೀದಿಸಿದ ಮೊತ್ತಕ್ಕೆ ಟೆಸ್ಲಾದಲ್ಲಿ ಇಲಾನ್ ಮಸ್ಕ್​ಗೆ ಸಂಭಾವನೆ; ಷೇರುದಾರರಿಂದ ಒಪ್ಪಿಗೆ ಮುದ್ರೆ, ಇನ್ನೇನಿದ್ರೂ ಕೋರ್ಟ್ ಒಪ್ಪಿಗೆ ಬಾಕಿ
ಇಲಾನ್ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2024 | 12:18 PM

ವಾಷಿಂಗ್ಟನ್, ಜೂನ್ 14: ಟೆಸ್ಸಾ ಸಿಇಒ ಇಲಾನ್ ಮಸ್ಕ್ ಅವರ 44.9 ಬಿಲಿಯನ್ ಡಾಲರ್ ಸಂಭಾವನೆಯ ಪ್ಯಾಕೇಜ್​ಗೆ (compensation package) ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ. ನಿನ್ನೆ ಗುರುವಾರ ನಡೆದ ಟೆಸ್ಲಾ ಷೇರುದಾರರ ವೋಟಿಂಗ್​ನಲ್ಲಿ (shareholders voting) ಮಸ್ಕ್ ಅವರ ಬೃಹತ್ ಪೇ ಪ್ಯಾಕೇಜ್​ಗೆ ಸಮ್ಮತಿ ಸಿಕ್ಕಿದೆ. ಕೋರ್ಟ್ ಈ ಪ್ಯಾಕೇಜ್ ಪ್ರಸ್ತಾಪವನ್ನು ತಿರಸ್ಕರಿಸಿದರೂ ಟೆಸ್ಲಾ ಆಡಳಿತ ಮಂಡಳಿ ಇಲಾನ್ ಮಸ್ಕ್​ಗೆ (Elon Musk) ದಾಖಲೆಯ 44.9 ಬಿಲಿಯನ್ ಡಾಲರ್ ಪೇ ಪ್ಯಾಕೇಜ್ ಕೊಡುವ ಪ್ರಸ್ತಾಪಕ್ಕೆ ಒಪ್ಪಿಗೆ ಕೊಟ್ಟಿತ್ತು. ಇದೀಗ ಷೇರುದಾರರೂ ಒಪ್ಪಿಕೊಂಡಿದ್ದಾರೆ. ವೋಟಿಂಗ್ ರಿಸಲ್ಟ್ ಬಂದ ಬಳಿಕ ಇಲಾನ್ ಮಸ್ಕ್ ಅವರು ಷೇರುದಾರರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಇಲ್ಲಿ 44.9 ಬಿಲಿಯನ್ ಡಾಲರ್ ಎಂದರೆ ರುಪಾಯಿ ಕರೆನ್ಸಿಯಲ್ಲಿ ಮೂರು ಲಕ್ಷ ಕೋಟಿ ರೂಗಿಂತ ಅಧಿಕವಾಗುತ್ತದೆ.

ಕುತೂಹಲ ಎಂದರೆ, ಹೆಚ್ಚೂಕಡಿಮೆ ಇಷ್ಟೇ ಮೊತ್ತಕ್ಕೆ ಇಲಾನ್ ಮಸ್ಕ್ ಅವರು 2022ರಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ್ದರು. ಆಗ ಅಷ್ಟು ದೊಡ್ಡ ಮೊತ್ತದ ವ್ಯವಸ್ಥೆ ಮಾಡಲು ಟೆಸ್ಲಾದಲ್ಲಿ ತಮಗಿದ್ದ ಶೇ. 22ರಷ್ಟು ಷೇರುಪಾಲಿನಲ್ಲಿ ಒಂದಷ್ಟು ಷೇರುಗಳನ್ನು ಮಾರಿದ್ದರು. ಈಗ ಟೆಸ್ಲಾದಲ್ಲಿ ಇಲಾನ್ ಅವರ ಷೇರುಪಾಲು ಶೇ. 13ರಷ್ಟಿದೆ.

ಇದನ್ನೂ ಓದಿ: ಭಾರತಕ್ಕೆ ಹೋಲಿಸಿದರೆ ಚೀನಾ ಷೇರುಪೇಟೆ ಹೇಗೆ? ಚೀನೀ ದೌರ್ಬಲ್ಯ ಬಿಚ್ಚಿಟ್ಟ ಮಾರ್ಗನ್ ಸ್ಟಾನ್ಲೀ ಅಧಿಕಾರಿ

ಈಗ ಟೆಸ್ಲಾ ಷೇರುದಾರರು ಇಲಾನ್ ಮಸ್ಕ್ ಅವರಿಗೆ 44.9 ಬಿಲಿಯನ್ ಡಾಲರ್ ಸಂಭಾವನೆ ಯೋಜನೆಗೆ ಒಪ್ಪಿಕೊಂಡರಾದರೂ ಅದು ಜಾರಿಗೆ ಬರಬೇಕಾದರೆ ಕೋರ್ಟ್ ಸಮ್ಮತಿ ಬೇಕಾಗುತ್ತದೆ. ಸದ್ಯ ಅಮೆರಿಕದ ಡೆಲಾವೇರ್ ಚಾನ್ಸರಿ ಕೋರ್ಟ್ ಇಲಾನ್ ಮಸ್ಕ್ ಅವರಿಗೆ ನೀಡುವ ಈ ಸಂಭಾವನೆಯನ್ನು ತಿರಸ್ಕರಿಸಿದ್ದಾರೆ. ಷೇರುದಾರರು ಒಪ್ಪಿಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಬಹುದು. ಈ ಪ್ರಕರಣ ಇತ್ಯರ್ಥಗೊಳ್ಳಲು ವರ್ಷವೇ ಆಗಬಹುದು.

ಇಲಾನ್ ಮಸ್ಕ್ ಅವರಿಗೆ ಯಾಕಿಷ್ಟು ಬೃಹತ್ ಸಂಭಾವನೆ?

ಗಮನಿಸಬೇಕಾದ ಸಂಗತಿ ಎಂದರೆ ಇಲಾನ್ ಮಸ್ಕ್ ಅವರಿಗೆ ನೀಡಲಾಗುವ 44.9 ಬಿಲಿಯನ್ ಡಾಲರ್ ಹಣ ಕ್ಯಾಷ್ ಅಲ್ಲ. ಇದು ಷೇರು ಇತ್ಯಾದಿ ಕಾಂಪೆನ್ಸೇಶನ್ ಆಗಿರುತ್ತದೆ. ಟೆಸ್ಲಾ ಸಿಇಒ ಆಗಿ ಮಸ್ಕ್ ಅವರು ಸಂಬಳ ಪಡೆಯುತ್ತಿಲ್ಲ. ಅವರಿಗೆ ಡಿವಿಡೆಂಡ್ ಇತ್ಯಾದಿಗಳ ಮೂಲಕ ಹಣ ಹರಿದುಬರುತ್ತದೆ.

ಇಲ್ಲಿ ಅವರು ಟೆಸ್ಲಾದಲ್ಲಿ ತಾನು ಹೊಂದಿರುವ ಷೇರುಪಾಲನ್ನು ಶೇ. 13ರಿಂದ ಶೇ 25ಕ್ಕೆ ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಟೆಸ್ಲಾದಲ್ಲಿ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಇರಾದೆ ಮಸ್ಕ್ ಅವರಿಗಿದೆ. ಅವರ ಟೆಸ್ಲಾದಿಂದ ಸೆಲ್ಫ್ ಡ್ರೈವಿಂಗ್ ಕಾರುಗಳ ಅಭಿವೃದ್ಧಿ ನಿರಂತರವಾಗಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೆಲ್ಫ್ ಡ್ರೈವಿಂಗ್ ಕಾರಿಗೆ ದೊಡ್ಡ ಮಾರುಕಟ್ಟೆ ಇರಲಿದೆ.

ಇದನ್ನೂ ಓದಿ: ಮರ್ಸೆಡೀಸ್ ಹೆಸರು ಯಾವ ಸಂಸ್ಥಾಪಕರದ್ದಲ್ಲ; ಇಲ್ಲಿದೆ ಈ ಬ್ರ್ಯಾಂಡ್ ಹಿಂದಿನ ಕುತೂಹಲದ ಸಂಗತಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಆಳ ಅಗಲವನ್ನು ಇಲಾನ್ ಮಸ್ಕ್ ಬಲ್ಲರು. ಟೆಸ್ಲಾದ ಛೇರ್ಮನ್ ಸೇರಿದಂತೆ ಎಂಜಿನಿಯರುಗಳ ತಂಡದವರೆಲ್ಲರೂ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಇಲಾನ್ ಮಸ್ಕ್ ಟೆಸ್ಲಾ ಬಿಟ್ಟು ಹೋದರೆ ಅವರಿಗಿರುವ ನೂರೆಂಟ್ ಐಡಿಯಾಗಳಲ್ಲಿ ಎಲ್ಲಿಯಾದರೂ ಹೊಸದಾಗಿ ಪ್ರಾಜೆಕ್ಟ್ ಆರಂಭಿಸಬಲ್ಲರು. ಕಷ್ಟವಾಗುವುದು ಟೆಸ್ಲಾಗೆಯೇ ಎಂದು ಮೊನ್ನೆಮೊನ್ನೆ ಟೆಸ್ಲಾ ಛೇರ್ಮನ್ ಹೇಳಿದ್ದರು.

ತಮ್ಮ ಕಾಂಪೆನ್ಸೇಶನ್ ಪ್ಯಾಕೇಜ್ ಬಗ್ಗೆ ಟೆಸ್ಲಾ ಷೇರುದಾರರ ವೋಟಿಂಗ್​ಗೆ ಮುನ್ನ ಇಲಾನ್ ಮಸ್ಕ್ ಒಂದು ಮಾತು ಹೇಳಿದ್ದರು. ತನಗೆ ಸಿಗುವ ಕಾಂಪೆನ್ಸೇಶನ್ ಪ್ಯಾಕೇಜ್ ಅನ್ನು ಬಳಸಲು ಆಗುವುದಿಲ್ಲ. ಷೇರುಗಳನ್ನು ಆರು ವರ್ಷ ಕಾಲ ಮಾರುವುದಿಲ್ಲ ಎಂದು ಭರವಸೆ ನೀಡಿದ್ದರು. ಈ ಕಾರಣಕ್ಕೆ ಶೇರ್​ಹೋಲ್ಡರ್​ಗಳು ಗ್ರೀನ್ ಸಿಗ್ನಲ್ ಕೊಟ್ಟಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ