ITR filing: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

ITR filing methods: ಫಾರ್ಮ್ 16 ಬಂದಿದ್ದು, ಐಟಿ ರಿಟರ್ನ್ ಅನ್ನು ದಂಡರಹಿತವಾಗಿ ಸಲ್ಲಿಸಲು ಜುಲೈ 31ರವರೆಗೂ ಕಾಲಾವಕಾಶ ಇದೆ. ಆಡಿಟರ್​ಗೆ ಕೊಟ್ಟು ರಿಟರ್ನ್ ಫೈಲ್ ಮಾಡಿಸಬಹುದು. ನೀವೇ ಸ್ವತಃ ಕೂತು ರಿಟರ್ನ್ ಫೈಲ್ ಮಾಡುವಷ್ಟು ಪ್ರಕ್ರಿಯೆ ಸರಳವಾಗಿದೆ. ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಪ್ಯಾನ್ ಬಳಸಿ ಲಾಗಿನ್ ಆದರೆ ಅಲ್ಲಿ ನೀವು ಐಟಿಆರ್ ಸಲ್ಲಿಕೆ ಮಾಡಬಹುದು. ಆ ಕ್ರಮಗಳ ವಿವರ ಇಲ್ಲಿದೆ...

ITR filing: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ
ಇನ್ಕಮ್ ಟ್ಯಾಕ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 14, 2024 | 4:48 PM

ನೀವು ಕೆಲಸ ಮಾಡುವ ಕಂಪನಿ ವತಿಯಿಂದ ಈಗಾಗಲೇ ನಿಮಗೆ ಫಾರ್ಮ್ 16 ಸಿಕ್ಕಿರಬಹುದು. 2023-24ರ ಹಣಕಾಸು ವರ್ಷಕ್ಕೆ ನೀವು ಈ ಫಾರ್ಮ್ ಮೂಲಕ ರಿಟರ್ನ್ ಸ್ಲಲಿಕೆ ಮಾಡಬಹುದು. 2023-24ರ ಹಣಕಾಸು ವರ್ಷವನ್ನು 2024-25ರ ಅಸೆಸ್ಮೆಂಟ್ ವರ್ಷ ಎಂದೂ ಪರಿಗಣಿಸಲಾಗುತ್ತದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16 ಕೊಡಲು ನಾಳೆ ಶನಿವಾರವೇ (ಜೂನ್ 15) ಕೊನೆಯ ದಿನ. ಬಹುತೇಕ ಉದ್ಯೋಗಿಗಳಿಗೆ ಇಷ್ಟರೊಳಗೆ ಫಾರ್ಮ್ 16 ಸಿಕ್ಕಿರುತ್ತದೆ. ಐಟಿ ರಿಟರ್ನ್ ಫೈಲ್ (IT Returns filing) ಮಾಡಲು ವ್ಯಕ್ತಿಗಳಾದರೆ 2024ರ ಜುಲೈ 31ಕ್ಕೆ ಡೆಡ್​ಲೈನ್ ಇದೆ. ಅಷ್ಟರೊಳಗೆ ರಿಟರ್ನ್ ಫೈಲ್ ಮಾಡಿದರೆ ದಂಡ ಕಟ್ಟುವ ಅಗತ್ಯ ಇರುವುದಿಲ್ಲ. ಆಡಿಟಿಂಗ್ ಅವಶ್ಯಕತೆ ಇರುವ ಕಂಪನಿಗಳಿಗೆ ಐಟಿಆರ್ ಸಲ್ಲಿಸಲು ಅಕ್ಟೋಬರ್ 31ರವರೆಗೂ ಕಾಲಾವಕಾಶ ಇರುತ್ತದೆ.

ಐಟಿಆರ್ ಸಲ್ಲಿಕೆಗೆ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲಿ…

ನೀವೇ ಖುದ್ದಾಗಿ ಐಟಿ ರಿಟರ್ನ್ ಫೈಲ್ ಮಾಡಲು ಸಿದ್ಧವಿದ್ದರೆ ಫಾರ್ಮ್ 16 ಜೊತೆಗೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವಿವಿಧ ಬ್ಯಾಂಕ್ ಖಾತೆಗಳ ವಿವರವನ್ನು ಇಟ್ಟಿಕೊಳ್ಳಿ. ಅಷ್ಟೇ ಅಲ್ಲ, ನೀವು ಪಿಪಿಎಫ್ ಇತ್ಯಾದಿ ಟ್ಯಾಕ್ಸ್ ಸೇವಿಂಗ್ಸ್ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಿದ್ದರೆ ಅದರ ಪ್ರೂಫ್ ದಾಖಲೆ ಇರಲಿ.

ಇ-ಫೈಲಿಂಗ್ ಪೋರ್ಟಲ್​ನಲ್ಲಿ ನೊಂದಾವಣಿ ಮಾಡಿ…

ನೀವು ಮೊದಲ ಬಾರಿಗೆ ಇನ್ಕಮ್ ಟ್ಯಾಕ್ಸ್ ಇ-ಫೈಲಿಂಗ್ ಪೋರ್ಟಲ್​ಗೆ ಲಾಗಿನ್ ಆಗುತ್ತಿದ್ದರೆ ಪ್ಯಾನ್ ನಂಬರ್ ಮೂಲಕ ರಿಜಿಸ್ಟರ್ ಆಗಿ ಬಳಿಕ ಲಾಗಿನ್ ಆಗಿರಿ. 50 ಲಕ್ಷ ರೂವರೆಗೂ ಆದಾಯ ಇರುವ ಸಂಬಳದ ಉದ್ಯೋಗಿಗಳು ಐಟಿಆರ್-1 ಫಾರ್ಮ್ ಅನ್ನು ಆಯ್ದುಕೊಳ್ಳಬೇಕು. ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ಇದೇ ಫಾರ್ಮ್ ಆಗುತ್ತದೆ. ಬಿಸಿನೆಸ್ ಅಥವಾ ವೃತ್ತಿಪರ ಮೂಲಗಳಿಂದ ಆದಾಯ ಇಲ್ಲದ ಇತರ ವ್ಯಕ್ತಿಗಳು ಐಟಿಆರ್-2 ಫಾರ್ಮ್ ಪಡೆಯಬೇಕು.

ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್​ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು

ಬಿಸಿನೆಸ್ ಅಥವಾ ವೃತ್ತಿಪರ ಕೆಲಸಗಳಿಂದ ಆದಾಯ ಹೊಂದಿರುವ ವ್ಯಕ್ತಿಗಳಾದರೆ ಐಟಿಆರ್-3 ಫಾರ್ಮ್ ಭರ್ತಿ ಮಾಡಬೇಕು. ಬಿಸಿನೆಸ್ ಮತ್ತು ವೃತ್ತಿಪರ ಕೆಲಸ ಮಾತ್ರವೇ ಆದಾಯ ಮೂಲ ಆಗಿದ್ದರೆ ಐಟಿಆರ್-4 ಭರ್ತಿ ಮಾಡಬೇಕು.

ಫಾರ್ಮ್ ತುಂಬಿಸುವ ಕ್ರಮ

ನೀವು ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೇಳೆ ಡೌನ್​ಲೋಡ್ ಮಾಡುವ ಫಾರ್ಮ್​ನಲ್ಲಿ ನಿಮ್ಮ ಪ್ಯಾನ್ ಮೂಲಕ ಪಡೆಯಲಾಗಿರುವ ಮಾಹಿತಿ ಮೊದಲೇ ಭರ್ತಿಯಾಗಿರುತ್ತದೆ. ಈ ಮಾಹಿತಿ ನಿಖರವಾಗಿದೆಯಾ ನೋಡಿರಿ. ಯಾವುದಾದರೂ ಹೆಚ್ಚುವರಿ ಮಾಹಿತಿ ಸೇರಿಸಬಹುದು.

ನಿಮ್ಮ ಸಂಬಳ, ಆಸ್ತಿ, ವರ್ಷದಲ್ಲಿ ಗಳಿಸಿದ ಲಾಭ ಹಾಗೂ ಇತರ ಆದಾಯಗಳ ವಿವರ ಹಾಕಿರಿ. 80ಸಿ, 80ಡಿ ಮತ್ತಿತರ ಸೆಕ್ಷನ್​ಗಳ ಅಡಿಯಲ್ಲಿ ಡಿಡಕ್ಷನ್ಸ್ ಕ್ಲೇಮ್ ಮಾಡುವುದಿದ್ದರೆ ಅಂಥ ಹೂಡಿಕೆಗಳ ವಿವರ ಹಾಕಿರಿ. ಪ್ರತಿಯೊಂದು ಟ್ಯಾಬ್​ನಲ್ಲೂ ವಿವರ ಸರಿ ಇದ್ದಾಗ ವ್ಯಾಲಿಡೇಟ್ ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ: ಹೊಸ ಆದಾಯ ತೆರಿಗೆ ಸಿಸ್ಟಂ ಆಯ್ಕೆ ಮಾಡಿಕೊಂಡವರ ಸಂಖ್ಯೆ ಕಡಿಮೆ; ಏನು ಕಾರಣ?

ತೆರಿಗೆ ಬಾಕಿ ಇದ್ದರೆ ಪಾವತಿಸಿ…

ಕ್ಯಾಲ್ಕುಲೇಟ್ ಟ್ಯಾಕ್ಸ್ ಬಟನ್ ಬಳಸಿ ನೀವು ಕಟ್ಟಬೇಕಿರುವ ತೆರಿಗೆ ಮೊತ್ತ ಎಷ್ಟು ಎಂಬುದನ್ನು ನೋಡಬಹುದು. ಅಷ್ಟು ಬಾಕಿ ತೆರಿಗೆಯನ್ನು ನೀವು ಇ-ಪೇ ಮೂಲಕ ಕಟ್ಟಬಹುದು.

ಇದಾದ ಬಳಿಕ ಕೊನೆಯ ಹಂತದಲ್ಲಿ ಆಧಾರ್ ಒಟಿಪಿ ಇತ್ಯಾದಿ ಮೂಲಕ ವೆರಿಫಿಕೇಶನ್ ಮಾಡಬೇಕು. ಆನ್​ಲೈನ್​ನಲ್ಲೇ ವೆರಿಫೈ ಮಾಡಬಹುದು. ಅಥವಾ ಬೆಂಗಳೂರಿನಲ್ಲಿರುವ ಸಿಪಿಸಿ ಕಚೇರಿಗೆ ಐಟಿಆರ್-5 ಫಾರ್ಮ್​ಗೆ ಸಹಿ ಹಾಕಿ ಕೊರಿಯರ್ ಮೂಲಕ ಕಳುಹಿಸಬಹುದು. ಅಲ್ಲಿ ವೆರಿಫೈ ಮಾಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ