ಅಪ್ಪಂದಿರ ದಿನ: ನಿಮ್ಮ ತಂದೆಗೆ ಯಾವ ಹಣಕಾಸು ಗಿಫ್ಟ್ ಕೊಡಬಹುದು? ಇಲ್ಲಿದೆ ಐಡಿಯಾ

Father's Day 2024: ಇವತ್ತು ಜೂನ್ 16, ವಿಶ್ವ ಅಪ್ಪಂದಿರ ದಿನವಾಗಿದೆ. ಹುಟ್ಟಿದಾಗಿನಿಂದ ಆರಂಭವಾಗಿ ನೀವು ಕೆಲಸಕ್ಕೆ ಸೇರುವ ತನಕ ನಿಮ್ಮನ್ನು ತಿದ್ದಿ ತೀಡಿ ಬೆಳೆಸಿದವರು ಅಪ್ಪ. ಈಗ ಹಣಕಾಸು ವಿಚಾರದಲ್ಲಿ ಸ್ವತಂತ್ರರಾಗಿರುವ ನೀವು ಅಪ್ಪನಿಗೆ ಅದ್ಭುತ ಗಿಫ್ಟ್ ಕೊಡಬೇಕೆಂದಿದ್ದರೆ ಅದು ಹಣಕಾಸು ಗಿಫ್ಟ್ ಆಗಿರುವುದು ಉತ್ತಮ. ಕುಟುಂಬಕ್ಕೋಸ್ಕರ ಇಡೀ ಸಂಪಾದನೆ ವಿನಿಯೋಗಿಸಿದ ಅಪ್ಪನಿಗೆ ಏನು ಗಿಫ್ಟ್ ಕೊಡಬಹುದು, ಒಂದಷ್ಟು ಐಡಿಯಾಗಳು ಇಲ್ಲಿವೆ...

ಅಪ್ಪಂದಿರ ದಿನ: ನಿಮ್ಮ ತಂದೆಗೆ ಯಾವ ಹಣಕಾಸು ಗಿಫ್ಟ್ ಕೊಡಬಹುದು? ಇಲ್ಲಿದೆ ಐಡಿಯಾ
ಅಪ್ಪಂದಿರ ದಿನ
Follow us
|

Updated on: Jun 16, 2024 | 6:00 AM

ಅಪ್ಪ ಎಂದರೆ ಅದು ಸ್ವಾವಲಂಬನೆ, ರಕ್ಷಣೆಯ ಸಂಕೇತ. ಇಡೀ ಕುಟುಂಬದ ಒಳಿತಿಗಾಗಿ ಜೀವ ಸವೆಸುವ ವ್ಯಕ್ತಿ. ಮಕ್ಕಳಿಗೆ ಜೀವನದ ಪಾಠ ಕಲಿಸುವ ಮಾಸ್ತರ. ಇವತ್ತು ಜೂನ್ 16, ವಿಶ್ವ ಅಪ್ಪಂದಿರ ದಿನ. ಜಗತ್ತಿನ ಎಲ್ಲರ ಅಪ್ಪಂದಿರಿಗೆ ಗೌರವ ಸಲ್ಲಿಸಬಹುದು. ಗೌರವ ಸಲ್ಲಿಸುವುದಷ್ಟೇ ಅಲ್ಲ, ನಿಮ್ಮ ತಂದೆಗೆ ಉಡುಗೊರೆ ಕೊಡಬೇಕೆಂದಿದ್ದರೆ ಒಂದಷ್ಟು ಒಳ್ಳೆಯ ಐಡಿಯಾಗಳು ಇಲ್ಲಿವೆ. ಅದರಲ್ಲೂ ತಾವು ಜೀವನವಿಡೀ ದುಡಿದ ಹಣವನ್ನು ಸಂಸಾರಕ್ಕಾಗಿ ವಿನಿಯೋಗಿಸಿದ ಅಪ್ಪನಿಗೆ ನಿಮ್ಮಿಂದ ಸಾಧ್ಯವಾದರೆ ಹಣಕಾಸು ನೆರವು ಒದಗಿಸುವುದು ಬಹಳ ಉತ್ತಮ.

ಫಿಕ್ಸೆಡ್ ಡೆಪಾಸಿಟ್ ಅಥವಾ ಆರ್​ಡಿ ಇಡಿ

ನಿಮ್ಮ ತಂದೆಗೆ ತುರ್ತಾಗಿ ಹಣದ ಅಗತ್ಯ ಬೀಳಬಹುದು. ಅಂಥ ಸಂದರ್ಭದಲ್ಲಿ ಮಕ್ಕಳ ಬಳಿ ಅವರು ಹಣ ಕೇಳಲು ಹಿಂದೆ ಮುಂದೆ ನೋಡಬಹುದು. ನೀವು ಅವರ ತುರ್ತು ಅಗತ್ಯಕ್ಕೆಂದು ಒಂದಷ್ಟು ಹಣವನ್ನು ಎಫ್​ಡಿಯಲ್ಲಿ ಇಡಿ. ಅಥವಾ ಆರ್​ಡಿ ಮುಖಾಂತರ ನಿಯಮಿತವಾಗಿ ಎಮರ್ಜೆನ್ಸಿ ಫಂಡ್ ಸೇರಿಸುತ್ತಾ ಹೋಗಿ.

ಇದನ್ನೂ ಓದಿ: ITR filing: ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

ಸಾಲ ಇದ್ದರೆ ತೀರಿಸಿ…

ವಯಸ್ಸಾದ ಕಾಲಕ್ಕೆ ಸಾಲ ಇದ್ದರೆ ಅದು ಮಾನಸಿಕವಾಗಿ ಸಾಕಷ್ಟು ಬಾಧೆ ಮಾಡುತ್ತದೆ. ನಿಮ್ಮ ತಂದೆ ಯಾವುದೇ ಕಾರಣಕ್ಕಾದರೂ ಸಾಲ ಮಾಡಿದ್ದರೆ ಅದನ್ನು ತೀರಿಸಿರಿ. ಇದು ನಿಮ್ಮ ತಂದೆಗೆ ಕೊಡುವ ಅತ್ಯುತ್ತಮ ಹಣಕಾಸು ಗಿಫ್ಟ್ ಆಗಿರುತ್ತದೆ. ಎಷ್ಟೆಂದರೂ ಅವರು ನಿಮಗೆ ಮತ್ತು ಕುಟುಂಬಕ್ಕೋಸ್ಕರವೇ ಸಾಲ ಮಾಡಿರಬಹುದು.

ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ

ನಿಮ್ಮ ತಂದೆ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್​​ನಲ್ಲಿ ಹೂಡಿಕೆ ಮಾಡಿ ಗೊತ್ತಿರದಿದ್ದರೆ ಮೊದಲು ಆ ಕೆಲಸ ಮಾಡಿ. ಲಂಪ್ಸಮ್ ಹಣ ಇದ್ದರೆ ಹಾಕಬಹುದು. ಅಥವಾ ಎಸ್​ಐಪಿ ಆರಂಭಿಸಬಹುದು.

ಇದನ್ನೂ ಓದಿ: ಟ್ಯಾಕ್ಸ್ ಸೇವಿಂಗ್ ಫಿಕ್ಸೆಡ್ ಡೆಪಾಸಿಟ್​ನ ಲಾಕ್ ಇನ್ ಅವಧಿ ಐದರಿಂದ ಮೂರು ವರ್ಷಕ್ಕೆ ಇಳಿಸಲು ಬ್ಯಾಂಕುಗಳು ಸಜ್ಜು

ಹೆಲ್ತ್ ಇನ್ಷೂರೆನ್ಸ್ ಮಾಡಿಸಿ….

ನಿಮ್ಮ ತಂದೆಗೆ ಆರೋಗ್ಯ ವಿಮೆ ಇಲ್ಲದೇ ಹೋಗಿದ್ದರೆ, ಮತ್ತು ನಿಮ್ಮ ಬಳಿ ಇಡೀ ಕುಟುಂಬಕ್ಕೆ ಕವರ್ ಆಗುವಂತಹ ಹೆಲ್ತ್ ಇನ್ಷೂರೆನ್ಸ್ ಪ್ಲಾನ್ ಇಲ್ಲದೇ ಇದ್ದರೆ ಮೊದಲು ಅದನ್ನು ಮಾಡಿಸಿ. ಫ್ಯಾಮಿಲಿ ಫ್ಲೋಟರ್ ಪ್ಲಾನ್ ಪಡೆದರೆ ನಿಮ್ಮ ತಂದೆ, ತಾಯಿಯನ್ನು ಒಳಗೊಂಡಂತೆ ಕುಟುಂಬದ ಎಲ್ಲರಿಗೂ ವಿಮಾ ಕವರೇಜ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ