AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಹಂತದ ಜಪ್ತಿಗೆ ಮುಂದಾದ ಇಡಿ: 631 ಸೈಟ್​ಗಳ ಮಾಹಿತಿ ನೀಡುವಂತೆ ಮುಡಾಗೆ ಪತ್ರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 142 ಆಸ್ತಿಗಳನ್ನು ಇಡಿ ಜಪ್ತಿ ಮಾಡಿದ ಬಳಿಕ, ಮತ್ತೆ 631 ಆಸ್ತಿಗಳ ಬಗ್ಗೆ ತನಿಖೆ ಆರಂಭಿಸಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ, ಮುಡಾ ಅಧಿಕಾರಿಗಳಿಂದ ಸಂಪೂರ್ಣ ಆಸ್ತಿ ವಿವರ ಕೇಳಿದೆ. ಇಡಿ ಅಧಿಕಾರಿಗಳು ಮುಡಾ ಕಚೇರಿಯಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ.

ಮತ್ತೊಂದು ಹಂತದ ಜಪ್ತಿಗೆ ಮುಂದಾದ ಇಡಿ: 631 ಸೈಟ್​ಗಳ ಮಾಹಿತಿ ನೀಡುವಂತೆ ಮುಡಾಗೆ ಪತ್ರ
ಮತ್ತೊಂದು ಹಂತದ ಜಪ್ತಿಗೆ ಮುಂದಾದ ಇಡಿ: 631 ಸೈಟ್​ಗಳ ಮಾಹಿತಿ ನೀಡುವಂತೆ ಮುಡಾಗೆ ಪತ್ರ
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 18, 2025 | 3:10 PM

Share

ಮೈಸೂರು, ಜನವರಿ 18: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನಗಳ ಅಕ್ರಮ ಹಂಚಿಕೆ ಹಗರಣ ಕೇಸಲ್ಲಿ ನಿನ್ನೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಸುಮಾರು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿದೆ. ಭ್ರಷ್ಟರ ಬೇಟೆಯನ್ನು ಮುಂದುವರೆಸಿರುವ ಇಡಿ, ಮುಡಾದಿಂದ ಮತ್ತೊಂದು ಲಿಸ್ಟ್ ಕಳುಹಿಸುವಂತೆ ಸೂಚನೆ ನೀಡಿದೆ. ಈ ಕುರಿತಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಅಕ್ರಮ ಸಂಬಂಧ ಸಿಕ್ಕ ದಾಖಲೆ ಆಧಾರದಲ್ಲಿ ಇಡಿ ಅಧಿಕಾರಿಗಳು ಲಿಸ್ಟ್ ಕೇಳಿದ್ದಾರೆ.

ನಿನ್ನೆ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕೊಂಡಿರುವ ಇಡಿ ಇದೀಗ 631 ಮುಡಾ ನಿವೇಶನಗಳ ಬಗ್ಗೆ ಮಾಹಿತಿ ಕೇಳಿದೆ. ಈ ಕುರಿತಾಗಿ ದಿ.16-12-2024 ರಂದು ಮುಡಾಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದರು. ಅಕ್ರಮ ಹಣ ವರ್ಗಾವಣೆ ಹಿನ್ನಲೆಯಲ್ಲಿ ನಿವೇಶನಗಳ ವಿವರ ಕೇಳಲಾಗಿದೆ. ಸೈಟ್​ಗಳ ನಂಬರ್ ಮತ್ತು ಏರಿಯಾ ಎಲ್ಲದರ ವಿವವರವನ್ನು ನೀಡಿ ಮಾಹಿತಿ ಕೇಳಲಾಗಿದೆ.

ಇದನ್ನೂ ಓದಿ: ಮುಡಾ ಹಗರಣ: ಇಡಿಯಿಂದ 300 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು

ಇನ್ನು ಇಡಿ ಸುಮಾರು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕಿರುವ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟ್​ಗಳು ಸೇರಿದಂತೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿದ್ದ ಪ್ರಾಪರ್ಟಿ, ನಿವೇಶನ, ಜಮೀನು ಸೇರಿದಂತೆ ಇನ್ನಿತರ ಆಸ್ತಿ ಒಳಗೊಂಡಂತೆ ಅಂದಾಜು 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಜಯರಾಮ್​, ರಾಕೇಶ್​ ಪಾಪಣ್ಣ ರಿಯಲ್​ ಎಸ್ಟೇಟ್​ ಉದ್ಯಮಿಗಳಾಗಿದ್ದು, ಮಂಜುನಾಥ್​ ಹಾಗೂ ತೇಜಸ್​ ಎಂದುವವರಿಗೆ ಸೇರಿದ ಆಸ್ತಿ ಜಪ್ತಿ ಮಾಡಲಾಗಿದೆ. ಈ ಹಿಂದೆ ಮುಡಾ ಆಯುಕ್ತರಾಗಿದ್ದ ನಟೇಶ್​, ದಿನೇಶ್​ ಆಸ್ತಿ ಕೂಡ ಜಪ್ತಿ ಮಾಡಿದ್ದು, ಮತ್ತಷ್ಟು ಹೆಸರುಗಳು ಇಡಿ ಪಟ್ಟಿಯಲ್ಲಿರುವ ಇರುವ ಸಾಧ್ಯತೆ

ತನಿಖೆ ಮಾಡುವ ಮನಸ್ಸು ಇಲ್ಲ: ಆರ್​.ಅಶೋಕ್

ಮುಡಾದಲ್ಲಿ ಬಗೆದಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇಡಿ ಅಧಿಕಾರಿಗಳು 30 ಕೋಟಿ ರೂ.ನಷ್ಟು ಆಸ್ತಿ ಜಪ್ತಿ ಮಾಡಿದ್ದಾರೆ. 2 ತಿಂಗಳಿಂದ ಪತ್ರ ಬರೆದಿದ್ದೇನೆ, ಆದರೂ ಯಾವುದೇ ಉತ್ತರ ನೀಡಿಲ್ಲ. ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ಮಾಡಲು ಇಷ್ಟ ಇಲ್ಲ ಅನಿಸುತ್ತೆ. ಇಡಿ ಅಧಿಕಾರಿಗಳು ತನಿಖೆ ಮಾಡಿ ವರದಿ ನೀಡಿದರೂ ಸಹ ನೋಡಿಲ್ಲ. ಲೋಕಾಯುಕ್ತರಿಗೆ ತನಿಖೆ ಮಾಡುವ ಮನಸ್ಸು ಇಲ್ಲ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.