Viral : ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಕಲ್ಲಂಗಡಿ ಹಣ್ಣನ್ನು ತೊಡೆಯಿಂದಲೇ ಪುಡಿ ಮಾಡಿ ಗಿನ್ನಿಸ್ ದಾಖಲೆ ಬರೆದ ಟರ್ಕಿ ಮಹಿಳೆ
ಕೆಲವರು ತಮ್ಮ ವಿಚಿತ್ರ ಪ್ರತಿಭೆ ಹಾಗೂ ಯಾರು ಮಾಡದ ಕೆಲಸವನ್ನು ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವುದನ್ನು ನೋಡಿರಬಹುದು. ಈಗಾಗಲೇ ಅದೆಷ್ಟೋ ಜನರು ಸಾಹಸಮಯ ಕೆಲಸಕ್ಕೆ ಕೈಹಾಕಿ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಹೌದು ಇದೀಗ, ಟರ್ಕಿ ಮೂಲದ ಮಹಿಳೆಯೊಬ್ಬರು ಕೇವಲ ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಕಲ್ಲಂಗಡಿಗಳನ್ನು ತನ್ನ ತೊಡೆಯಿಂದ ಪುಡಿಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂಬಲು ಅಸಾಧ್ಯವಾಗುವಂತಹ ಸಾಹಸ ಮಾಡುವ ಮೂಲಕ ಗಿನ್ನಿಸ್ ದಾಖಲೆಗಳನ್ನು ಬರೆಯುವುದನ್ನು ನೋಡಿರಬಹುದು..ಕೆಲವರಂತೂ ಈ. ಗಿನ್ನಿಸ್ ದಾಖಲೆ ಮಾಡಬೇಕೆಂದು ಹೊಸ, ಹೊಸ ಪ್ರಯತ್ನಕ್ಕೆ ಮುಂದಾಗುತ್ತಾರೆ. ಕೆಲ ವ್ಯಕ್ತಿಗಳು ವಿಶ್ವ ದಾಖಲೆ ಮಾಡಲು ಹೋಗಿ ಸಾಹಸಮಯ ಕೆಲಸಕ್ಕೆ ಕೈ ಹಾಕುತ್ತಾರೆ. ಇನ್ನು ಕೆಲವರು ಮಾಡುವ ದಾಖಲೆಗಳು ನಂಬಲು ಅಸಾಧ್ಯವಾಗಿರುತ್ತದೆ. ಆದರೆ ಇದೀಗ ಇಲ್ಲೊಬ್ಬಳು ಮಹಿಳೆ ತನ್ನ ತೊಡೆಯಿಂದಲೇ ಕಲ್ಲಂಗಡಿಗಳನ್ನು ಪುಡಿ ಮಾಡಿ ಅಚ್ಚರಿ ಮೂಡಿಸಿದ್ದಾಳೆ.
ಹೌದು, ಟರ್ಕಿ ಮೂಲದ ಮಹಿಳೆಯೂ ಕೇವಲ ಒಂದೇ ನಿಮಿಷದಲ್ಲಿ ಅತಿ ಹೆಚ್ಚು ಕಲ್ಲಂಗಡಿಗಳನ್ನು ತನ್ನ ತೊಡೆಯಿಂದ ಪುಡಿಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಈ ಮಹಿಳೆಯ ಹೆಸರು ಗೊಜ್ಡೆ ಡೋಗನ್. ಕಳೆದ ವರ್ಷ ಫೆ.5 ರಂದು ಇಟಲಿಯ ಮಿಲನ್‌ನಲ್ಲಿ ಲೊ ಶೋ ಡೀ ದಾಖಲೆಗಾಗಿ ನಿಗದಿಪಡಿಸಿದ ಸಮಯದೊಳಗೆ ಗೊಜ್ಡೆ ಡೋಗನ್ ಐದು ಕಲ್ಲಂಗಡಿಗಳನ್ನು ಪುಡಿಮಾಡ ಸೈ ಎನಿಸಿಕೊಂಡಿದ್ದಳು.
Most watermelons crushed with the thighs in one minute (female) – 5 achieved by Gözde Doğan 🇹🇷 pic.twitter.com/X6jyAJQCGi
— Guinness World Records (@GWR) January 17, 2025
ಆದರೆ ಇತ್ತೀಚೆಗಷ್ಟೇ ಈ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮಹಿಳೆಯ ಸಾಧನೆಯ ವಿಡಿಯೋವೊಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ, ಒಂದು ನಿಮಿಷದಲ್ಲಿ ತನ್ನ ತೊಡೆಗಳಿಂದ ಕಲ್ಲಂಗಡಿಗಳನ್ನು ಪುಡಿಮಾಡಿದರು ಎಂದು ಶೀರ್ಷಿಕೆ ನೀಡಲಾಗಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಪ್ರಜ್ಞೆ ತಪ್ಪಿದ ಮರಿಯನ್ನು ಬಾಯಲ್ಲೇ ಕಚ್ಚಿಕೊಂಡು ಪಶು ಚಿಕಿತ್ಸಾಲಯಕ್ಕೆ ಹೊತ್ತೊಯ್ದ ತಾಯಿ ಶ್ವಾನ, ವಿಡಿಯೋ ವೈರಲ್
ಗಿನ್ನಿಸ್ ದಾಖಲೆ ನಿರ್ಮಿಸಿದ ಗೊಜ್ಡೆ ಡೋಗನ್ ಅವರು ಇದರ ಒಂದೆರಡು ವೀಡಿಯೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈಗ ನನ್ನ ಹೆಸರು ಬುಕ್ ಆಫ್ ರೆಕಾರ್ಡ್ಸ್‌ನಲ್ಲಿದೆ. ಕೇವಲ ಕಾಲುಗಳನ್ನು ಬಳಸಿ ಒಂದು ನಿಮಿಷದಲ್ಲಿ ಹೆಚ್ಚಿನ ಕಲ್ಲಂಗಡಿಗಳನ್ನು ಮುರಿದ ದಾಖಲೆಯನ್ನು ನಾನು ಹೊಂದಿದ್ದೇನೆ. ಒಂದು ನಿಮಿಷದಲ್ಲಿ ಇದನ್ನು ಮಾಡುವುದು ಸುಲಭವಲ್ಲ ಎಂದು ತಮ್ಮ ಗೆಲುವಿನ ಬಗ್ಗೆ ಖುಷಿಯಿಂದ ಪ್ರತಿಕ್ರಿಯಿಸಿದ್ದಾಳೆ.
ಈ ವಿಡಿಯೋ ಈಗಾಗಲೇ ನಲವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಇದು ನಂಬಲು ಸಾಧ್ಯವೇ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಆಕೆಯು ತನ್ನ ತೊಡೆಯನ್ನು ಸ್ವಚ್ಛಗೊಳಿಸುವುದರಲ್ಲೇ ಸಮಯ ವ್ಯರ್ಥ ಮಾಡಿದ್ದಾಳೆ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ