ಕತ್ತೆಗಳನ್ನು ಕದ್ದ ಆರೋಪದಡಿ ಕಾಂಗ್ರೆಸ್ ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಎನ್ಎಸ್ಯುಐ (ಕಾಂಗ್ರೆಸ್ನ ಸ್ಟುಡೆಂಟ್ ಯೂನಿಯನ್) ಅಧ್ಯಕ್ಷ ವೆಂಕಟ್ ಬಲ್ಮೂರ್ ಎಂಬುವರು ಬಂಧಿತರು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ (K. Chandrasekhar Rao) ಹುಟ್ಟುಹಬ್ಬದ ದಿನ ಇವರು ಕತ್ತೆಯೊಂದಿಗೆ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಇಂಥದ್ದೊಂದು ದೂರು ದಾಖಲಾಗಿದೆ. ವೆಂಕಟ್ ಬಲ್ಮೂರ್ ಜತೆಗೆ ಇನ್ನಿತರ ಕೆಲವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅವರೆಲ್ಲರೂ ಪರಾರಿಯಾಗಿದ್ದಾರೆ.
ತೆಲಂಗಾಣ ಎನ್ಎಸ್ಯುಐ ವೆಂಕಟ್ ಬಲ್ಮೂರ್ ವಿರುದ್ಧ ಜಮ್ಮಿಕುಂಟಾ ಅಧ್ಯಕ್ಷ ತಂಗುಟೋರಿ ರಾಜ್ಕುಮಾರ್ ಎಂಬುವರು ದೂರು ದಾಖಲಿಸಿದ್ದರು. ನನ್ನ ಕತ್ತೆಗಳನ್ನು ಕದ್ದಿದ್ದಾರೆ ಎಂದು ವೆಂಕಟ್ ಬಲ್ಮೂರು ಸೇರಿ ಏಳು ಮಂದಿಯ ವಿರುದ್ಧ ದೂರು ಕೊಟ್ಟಿದ್ದರು. ಕಾನೂನುಬಾಹಿರ ಸಭೆ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಕಳ್ಳತನ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತೋರಿದ ಆರೋಪದಡಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆ.17ರಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು 68ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಂದು ಅವರ ಅಭಿಮಾನಿಗಳು ರಾಜ್ಯಾಧ್ಯಂತ ಹಣ್ಣವಿತರಣೆ, ರಕ್ತದಾನ ಶಿಬಿರದಂಥ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ದೇಗುಲಗಳಲ್ಲಿ ವಿಶೇಷ ಪೂಜೆ, ಹೋಮ-ಹವನ, ಪ್ರಾರ್ಥನೆ ಸಲ್ಲಿಸಿದವರೂ ಇದ್ದಾರೆ. ಇನ್ನೊಂದೆಡೆ ಕರೀಂನಗರದಲ್ಲಿ ಮೇಯರ್ ನೇತೃತ್ವದಲ್ಲಿ ಕೋಳಿಗಳನ್ನು ವಿತರಿಸಲಾಗಿತ್ತು. ಇದೇ ಕರೀಂನಗರದಲ್ಲಿ ಇನ್ನೊಂದೆಡೆ ವೆಂಕಟ್ ಬಲ್ಮೂರ್ ತನ್ನ ಸಹಚರರೊಂದಿಗೆ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಾತವಾಹನಾ ಯೂನಿರ್ವಸಿಟಿ ಬಳಿ ಕತ್ತೆಗಳೊಂದಿಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ಫೋಟೋ ಶೇರ್ ಮಾಡಿಕೊಂಡಿದ್ದ ಅವರು, ರೈತರು, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಜೀವನ ಹಾಳು ಮಾಡಿದ್ದಕ್ಕೆ ಮತ್ತು ಸುಳ್ಳು ಭರವಸೆಗಳ, ಹುಸಿ ಪ್ರಚಾರ ನಡೆಸಿದ್ದಕ್ಕೆ ಈ ಪ್ರತಿಭಟನೆ ಎಂದು ಹೇಳಿದ್ದರು. ಇವರು ಕತ್ತೆಯ ಮುಖಕ್ಕೆ ಕೆಸಿಆರ್ ಫೋಟೋ ಹಾಕಿದ್ದರು, ಅಷ್ಟೇ ಅಲ್ಲ, ಆ ಕತ್ತೆ ಎದುರಿಗೆ ಕೇಕ್ ಇಟ್ಟು ಕಟ್ ಮಾಡಿಸಿದ್ದರು.
>For ruining the lives of farmers, students and unemployed youth.
>For false promises, fake propaganda#HappyBirthdayKCR #TelanganaDrohiDiwas @INCTelangana @revanth_anumula @manickamtagore @PonnamLoksabha pic.twitter.com/Jz6vfPi3Hr— Venkat Balmoor (@VenkatBalmoor) February 17, 2022
ಇದನ್ನೂ ಓದಿ: ಚೀನಾನಲ್ಲಿ ಶೂನ್ಯ-ಕೋವಿಡ್ ನೀತಿ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ ಕಂಡುಬಂದಿದೆ!
Published On - 8:05 am, Sat, 19 February 22