ಉತ್ತರಾಖಂಡ ಪ್ರತಿಪಕ್ಷ ನಾಯಕಿ, ಕಾಂಗ್ರೆಸ್​ನ ಹಿರಿಯ ರಾಜಕಾರಣಿ ಡಾ. ಇಂದಿರಾ ಹೃದಯೇಶ್​ ನಿಧನ; ಸಭೆಗೆ ತೆರಳಿದ್ದವರು ಕೊನೆಯುಸಿರೆಳೆದರು

| Updated By: Lakshmi Hegde

Updated on: Jun 13, 2021 | 1:46 PM

Indira Hridayesh Death: ಉತ್ತರಾಖಂಡ ರಾಜಕಾರಣದಲ್ಲಿ ಕಳೆದ ಎರಡು ದಶಕಗಳಿಂದಲೂ ತೊಡಗಿಸಿಕೊಂಡಿದ್ದ ಕಾಂಗ್ರೆಸ್​ನ ಪ್ರಮುಖ ನಾಯಕಿಯಾಗಿದ್ದ ಡಾ. ಇಂದಿರಾ ಹೃದಯೇಶ್​ರಿಗೆ 80 ವರ್ಷ ವಯಸ್ಸಾಗಿತ್ತು. ರಾಜಕೀಯದಲ್ಲಿ ಸಾಕಷ್ಟು ಪಕ್ವವಾಗಿದ್ದ ಅವರು ಸದಾ ಗಾಂಭೀರ್ಯದಿಂದ, ತಾಳ್ಮೆಯಿಂದ ಇರುತ್ತಿದ್ದರು.

ಉತ್ತರಾಖಂಡ ಪ್ರತಿಪಕ್ಷ ನಾಯಕಿ, ಕಾಂಗ್ರೆಸ್​ನ ಹಿರಿಯ ರಾಜಕಾರಣಿ ಡಾ. ಇಂದಿರಾ ಹೃದಯೇಶ್​ ನಿಧನ; ಸಭೆಗೆ ತೆರಳಿದ್ದವರು ಕೊನೆಯುಸಿರೆಳೆದರು
ಇಂದಿರಾ ಹೃದಯೇಶ್
Follow us on

ದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕಿ, ಉತ್ತರಾಖಂಡ್​ ಪ್ರತಿಪಕ್ಷ ನಾಯಕಿ ಡಾ. ಇಂದಿರಾ ಹೃದಯೇಶ್​ ಇಂದು ನಿಧನರಾದರು. ದೆಹಲಿಯಲ್ಲಿರುವ ಉತ್ತರಾಖಂಡ ಭವನದಲ್ಲಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ನಡೆಯಲಿದ್ದ ಕಾಂಗ್ರೆಸ್​ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಡಾ. ಇಂದಿರಾ, ಉತ್ತರಾಖಂಡ ಭವನದ ರೂಂ ನಂಬರ್​ 303ರಲ್ಲಿ ತಂಗಿದ್ದರು. ಅವರ ಮೃತದೇಹವನ್ನು ಉತ್ತರಾಖಂಡಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ.

ಉತ್ತರಾಖಂಡ ರಾಜಕಾರಣದಲ್ಲಿ ಕಳೆದ ಎರಡು ದಶಕಗಳಿಂದಲೂ ತೊಡಗಿಸಿಕೊಂಡಿದ್ದ ಕಾಂಗ್ರೆಸ್​ನ ಪ್ರಮುಖ ನಾಯಕಿಯಾಗಿದ್ದ ಡಾ. ಇಂದಿರಾ ಹೃದಯೇಶ್​ರಿಗೆ 80 ವರ್ಷ ವಯಸ್ಸಾಗಿತ್ತು. ರಾಜಕೀಯದಲ್ಲಿ ಸಾಕಷ್ಟು ಪಕ್ವವಾಗಿದ್ದ ಅವರು ಸದಾ ಗಾಂಭೀರ್ಯದಿಂದ, ತಾಳ್ಮೆಯಿಂದ ಇರುತ್ತಿದ್ದರು. ಅವರ ಈ ಸ್ವಭಾವದಿಂದಾಗಿ ಬೇರೆ ಪಕ್ಷದ ನಾಯಕರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಅವರ ಮರಣದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಉತ್ತರಾಖಂಡ ಕಾಂಗ್ರೆಸ್​ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶನಿವಾರ ದೆಹಲಿಗೆ ತೆರಳುವುದಕ್ಕೂ ಮೊದಲು ಡಾ. ಇಂದಿರಾ ಹೃದಯೇಶ್​ ಹಣದುಬ್ಬರ ವಿರೋಧಿಸಿ ಹಲ್ದ್ವಾನಿಯಲ್ಲಿ ಕಾಂಗ್ರೆಸ್​ ನಡೆಸಿದ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು. ಮುಂದಿನ ವರ್ಷ ನಡೆಯಲಿರುವ ಉತ್ತರಾಖಂಡ ವಿಧಾನಸಭೆ ಚುನಾವಣೆಯ ನಿಮಿತ್ತ ಕಾಂಗ್ರೆಸ್​ನ ಕಾರ್ಯತಂತ್ರ ಅಭಿಯಾನದ ಪ್ರಮುಖ ವ್ಯಕ್ತಿಯಾಗಿದ್ದ ಇಂದಿರಾ ಅವರು, ಇದಕ್ಕೆ ಸಂಬಂಧಪಟ್ಟ ಸಭೆಯಲ್ಲಿ ಪಾಲ್ಗೊಳ್ಳಲೆಂದೇ ದೆಹಲಿಗೆ ತೆರಳಿದ್ದರು.

ಇದನ್ನೂ ಓದಿ: ಯುವ ಜನರಿಗೆ ಪಕೋಡ ಮಾರಿ ಅಂತಾ ಹೇಳಿದ್ರು, ಈಗ ಎಣ್ಣೆ ಬೆಲೆನೂ ಜಾಸ್ತಿಯಾಗಿದೆ.. ಕೇಂದ್ರದ ವಿರುದ್ಧ ಡಿಕೆಶಿ ಆಕ್ರೋಶ

Congress Leader Indira Hridayesh dies of cardiacarrest In Delhi