ಕಲ್ಕತ್ತಾ ಹೈಕೋರ್ಟ್‌ ಆವರಣದಲ್ಲಿ ಪ್ರತಿಭಟನೆ; ಪಿ ಚಿದಂಬರಂನ್ನು ಮಮತಾ ಸರ್ಕಾರದ ‘ದಲಾಲ್’ ಎಂದ ವಕೀಲರು

| Updated By: ರಶ್ಮಿ ಕಲ್ಲಕಟ್ಟ

Updated on: May 04, 2022 | 8:19 PM

ನ್ಯಾಯಾಲಯದಿಂದ ಹೊರಬರಲು ಹೊರಟಿದ್ದ ರಾಜ್ಯಸಭಾ ಸಂಸದ ಚಿದಂಬರಂ ವಿರುದ್ಧ ಕಾಂಗ್ರೆಸ್ ಸೆಲ್‌ಗೆ ಸೇರಿದ್ದ ವಕೀಲರ ಗುಂಪು ಕಪ್ಪು ವಸ್ತ್ರ ಮತ್ತು ಧ್ವಜಗಳನ್ನು ತೋರಿಸಿ ದಲಾಲ್ ಎಂದು ಕೂಗಿದೆ.

ಕಲ್ಕತ್ತಾ ಹೈಕೋರ್ಟ್‌ ಆವರಣದಲ್ಲಿ ಪ್ರತಿಭಟನೆ; ಪಿ ಚಿದಂಬರಂನ್ನು ಮಮತಾ ಸರ್ಕಾರದ ‘ದಲಾಲ್’ ಎಂದ ವಕೀಲರು
ಕಾಂಗ್ರೆಸ್ ನಾಯಕ ಚಿದಂಬರಂ ವಿರುದ್ಧ ವಕೀಲರ ಪ್ರತಿಭಟನೆ
Follow us on

ಕೊಲ್ಕತ್ತಾ: ಕಾಂಗ್ರೆಸ್ ನಾಯಕ ಪಿ ಚಿದಂಬರಂ (P Chidambaram) ಅವರು ಬುಧವಾರ ಕೋಲ್ಕತ್ತಾದಲ್ಲಿ ವಾದಿಸುವುದಕ್ಕಾಗಿ ಹಾಜರಾಗಲು ಕಲ್ಕತ್ತಾ ಹೈಕೋರ್ಟ್‌ಗೆ (Calcutta high court)ಭೇಟಿ ನೀಡಿದಾಗ ದೊಡ್ಡಮಟ್ಟದ ಪ್ರತಿಭಟನೆಯನ್ನು ಎದುರಿಸಿದರು. ನ್ಯಾಯಾಲಯದಿಂದ ಹೊರಬರಲು ಹೊರಟಿದ್ದ ರಾಜ್ಯಸಭಾ ಸಂಸದ ಚಿದಂಬರಂ ವಿರುದ್ಧ ಕಾಂಗ್ರೆಸ್ ಸೆಲ್‌ಗೆ ಸೇರಿದ್ದ ವಕೀಲರ ಗುಂಪು ಕಪ್ಪು ವಸ್ತ್ರ ಮತ್ತು ಧ್ವಜಗಳನ್ನು ತೋರಿಸಿ ದಲಾಲ್ (ಸಹಾನುಭೂತಿ ಹೊಂದಿದವರು) ಎಂದು ಕೂಗಿದೆ. ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ನ ಕಳಪೆ ಸ್ಥಿತಿಗೆ ಕೇಂದ್ರದ ಮಾಜಿ ಸಚಿವರನ್ನು ಪ್ರತಿಭಟನಾ ನಿರತ  ವಕೀಲರು ದೂಷಿಸಿದರು. ಹಿರಿಯ ವಕೀಲ ಚಿದಂಬರಂ ಕೃಷಿ ಸಂಸ್ಕರಣಾ ಸಂಸ್ಥೆ ಕೆವೆಂಟರ್ ಅನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ಚೌಧರಿ ಅವರು ಪ್ರಕರಣ ದಾಖಲಿಸಿರುವ ಕಂಪನಿಯನ್ನು ಚಿದಂಬರಂ ಹೇಗೆ ಪ್ರತಿನಿಧಿಸುತ್ತಾರೆ ಎಂದು ಪ್ರತಿಭಟನಾನಿರತ ವಕೀಲರು ಪ್ರಶ್ನಿಸಿದರು. ಮೆಟ್ರೋ ಡೈರಿಯ ಷೇರುಗಳನ್ನು ಖಾಸಗಿ ಕಂಪನಿಗೆ ಮಾರಾಟ ಮಾಡುವ ಟಿಎಂಸಿ ಸರ್ಕಾರದ ನಿರ್ಧಾರವನ್ನು ಚೌಧರಿ ಪ್ರಶ್ನಿಸಿದ್ದರು.


ಪ್ರತಿಭಟನಾಕಾರರಲ್ಲಿ ಒಬ್ಬರಾದ ವಕೀಲ ಕೌಸ್ತವ್ ಬಾಗ್ಚಿ, ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷರಿಂದ ಷೇರುಗಳ ಖರೀದಿಯನ್ನು ಆಕ್ಷೇಪಿಸುತ್ತಿರುವ ಘಟಕದ ಪರವಾಗಿ ಹಾಜರಾಗಿದ್ದಕ್ಕಾಗಿ ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡರು. ಚಿದಂಬರಂ ಸಿಡಬ್ಲ್ಯೂಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸದಸ್ಯರಾಗಿದ್ದಾರೆ ಮತ್ತು ಪ್ರಮುಖ ನಾಯಕರಾಗಿದ್ದಾರೆ ಎಂದ ಬಾಗ್ಚಿ. ನಾವು “ಕಾಂಗ್ರೆಸ್ ಕಾರ್ಯಕರ್ತರಾಗಿ” ಪ್ರತಿಭಟನೆಯನ್ನು ನಡೆಸಿದ್ದೇವೆ ವಕೀಲರಾಗಿ ಅಲ್ಲ. ಪಕ್ಷದ ಕಾರ್ಯಕರ್ತರು ಬಂಗಾಳದಲ್ಲಿ ಕಾಂಗ್ರೆಸ್ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡ ಯಾವುದೇ ನಾಯಕನ ವಿರುದ್ಧ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸುತ್ತಾರೆ ಎಂದು ಹೇಳಿದರು.

ಕೆಲವು ಕಾಂಗ್ರೆಸ್ ಬೆಂಬಲಿಗರಿಂದ ಪ್ರತಿಭಟನೆಯು ಸಹಜ ಪ್ರತಿಕ್ರಿಯೆಯಾಗಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಚೌಧರಿ ಹೇಳಿದ್ದಾರೆ. “ಕಲ್ಕತ್ತಾ ಹೈಕೋರ್ಟ್‌ನಲ್ಲಿ ಹಾಜರಿದ್ದ ಕೆಲವು ಕಾಂಗ್ರೆಸ್ ಬೆಂಬಲಿಗರು ಪ್ರತಿಭಟಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ಅವರ ಸಹಜ ಪ್ರತಿಕ್ರಿಯೆ ಎಂದು ನಾನು ನಂಬುತ್ತೇನೆ” ಎಂದು ಬೆರ್ಹಾಂಪೋರ್‌ನಲ್ಲಿರುವ ಚೌಧರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಚಿದಂಬರಂ ಅವರು ಪ್ರಕರಣದಲ್ಲಿ ಕಾಣಿಸಿಕೊಂಡ ಬಗ್ಗೆ ಕೇಳಿದಾಗ, ಚಿದಂಬರಂ ಅವರು ವೃತ್ತಿಪರ ಜಗತ್ತಿನಲ್ಲಿ ತಮ್ಮ ಆಯ್ಕೆಗಳನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದರು. “ಇದು ವೃತ್ತಿಪರ ಜಗತ್ತು. ಇದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಯಾರೂ ಅವನಿಗೆ ಅಥವಾ ಅವಳಿಗೆ ನಿರ್ದೇಶಿಸಲು ಸಾಧ್ಯವಿಲ್ಲ” ಎಂದು ಚೌಧರಿ ಹೇಳಿದರು.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:51 pm, Wed, 4 May 22