ನಗದೀಕರಣ ನೀತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರಿ ಸ್ವತ್ತುಗಳನ್ನು ಮಾರುತ್ತಿದೆ: ಪಿ ಚಿದಂಬರಂ
P Chidambaram: ಅರ್ಥಶಾಸ್ತ್ರದಲ್ಲಿ ಸ್ವತ್ತು ತೆಗೆಯುವಿಕೆ (asset stripping) ಎಂಬ ಪರಿಕಲ್ಪನೆ ಇದೆ. ಅದೇ ಇಲ್ಲಿ ನಡೆಯುತ್ತಿದೆ. ಈ ನೀತಿಯ ಬಗ್ಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ. ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಈ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ
ದೆಹಲಿ: ಕೇಂದ್ರ ಸರ್ಕಾರ ನಗದೀಕರಣ ಯೋಜನೆ ವಿರುದ್ಧ ಟೀಕಾಪ್ರಹಾರ ಮಾಡಿದ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ (P Chidambaram) ಶುಕ್ರವಾರ ಸರ್ಕಾರವು ದೇಶದ ಆಸ್ತಿಯನ್ನು ನಗದೀಕರಣ ನೀತಿಯ ಹೆಸರಿನಲ್ಲಿ ಮಾರಾಟ ಮಾಡಲು ಚಿಂತಿಸುತ್ತಿದೆ ಎಂದು ಆರೋಪಿಸಿದರು. ಮುಂಬೈನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ “ಕಳೆದ 70 ವರ್ಷಗಳಲ್ಲಿ ನಿರ್ಮಿಸಲಾಗಿರುವ ಎಲ್ಲವನ್ನೂ ಆಯ್ದ ಕೆಲವರ ಕೈಯಲ್ಲಿ ಗಿರವಿ ಇಡಲಾಗುತ್ತಿದೆ. ಜನರು ಈ ಅಪಾಯದ ಬಗ್ಗೆ ತಿಳಿದಿರಬೇಕು ಮತ್ತು ಅದರ ವಿರುದ್ಧ ಪ್ರತಿಭಟಿಸಬೇಕು ಎಂದು ಹೇಳಿದ್ದಾರೆ. “ಅರ್ಥಶಾಸ್ತ್ರದಲ್ಲಿ ಸ್ವತ್ತು ತೆಗೆಯುವಿಕೆ (asset stripping) ಎಂಬ ಪರಿಕಲ್ಪನೆ ಇದೆ. ಅದೇ ಇಲ್ಲಿ ನಡೆಯುತ್ತಿದೆ. ಈ ನೀತಿಯ ಬಗ್ಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ. ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಈ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಉತ್ತರಿಸುವುದಿಲ್ಲಎಂದಿದ್ದಾರೆ.
ಕಳೆದ ತಿಂಗಳು, ಕೇಂದ್ರವು ಅಂದಾಜು 6 ಲಕ್ಷ ಕೋಟಿ ಮೌಲ್ಯದ ನಾಲ್ಕು ವರ್ಷಗಳ ರಾಷ್ಟ್ರೀಯ ನಗದೀಕರಣ ಯೋಜನೆ (NMP) ಅನ್ನು ಬಿಡುಗಡೆ ಮಾಡಿತು. ಈ ನೀತಿಯು ಖಾಸಗಿ ವಲಯವನ್ನು ತೊಡಗಿಸಿಕೊಳ್ಳುವ ಮೂಲಕ ಕಂದಾಯ ಹಕ್ಕುಗಳನ್ನು ಅವರಿಗೆ ವರ್ಗಾಯಿಸುವ ಮೂಲಕ ಮತ್ತು ಯೋಜನೆಗಳಲ್ಲಿ ಮಾಲೀಕತ್ವದ ಮೂಲಕ ಮತ್ತು ದೇಶಾದ್ಯಂತ ಮೂಲಸೌಕರ್ಯ ಸೃಷ್ಟಿಗೆ ಉತ್ಪತ್ತಿಯಾದ ಹಣವನ್ನು ಬಳಸುವ ಮೂಲಕ ಬ್ರೌನ್ ಫೀಲ್ಡ್ ಯೋಜನೆಗಳಲ್ಲಿನ ಮೌಲ್ಯವನ್ನು ಅನ್ಲಾಕ್ ಮಾಡುವ ಗುರಿಯನ್ನು ಹೊಂದಿದೆ.
LIVE: Shri @PChidambaram_IN addresses a press conference in @INCMumbai https://t.co/DSgNc7mSKl
— Congress (@INCIndia) September 3, 2021
ನಗದೀಕರಣಕ್ಕೆ ಸ್ಪಷ್ಟ ಚೌಕಟ್ಟನ್ನು ಒದಗಿಸಲು ಮತ್ತು ಸಂಭಾವ್ಯ ಹೂಡಿಕೆದಾರರಿಗೆ ಹೂಡಿಕೆಯ ಆಸಕ್ತಿಯನ್ನು ಸೃಷ್ಟಿಸಲು ಸ್ವತ್ತುಗಳ ಸಿದ್ಧ ಪಟ್ಟಿಯನ್ನು ನೀಡಲು NMP ಅನ್ನು ಘೋಷಿಸಲಾಗಿದೆ. ಇವುಗಳು ಬ್ರೌನ್‌ಫೀಲ್ಡ್ ಸ್ವತ್ತುಗಳೆಂದು ಸರ್ಕಾರ ಒತ್ತಿಹೇಳಿದೆ .ಇದು ಪ್ರಕ್ರಿಯೆಯ “ಅಪಾಯವನ್ನು ಕಡಿಮೆಗೊಳಿಸಿದೆ” ಮತ್ತು ಆದ್ದರಿಂದ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಬೇಕು. ನಗದೀಕರಣದ ವಹಿವಾಟುಗಳನ್ನು ರಚಿಸುವುದು, ಸ್ವತ್ತುಗಳ ಸಮತೋಲನ ಅಪಾಯದ ವಿವರವನ್ನು ಒದಗಿಸುವುದು ಮತ್ತು ಎನ್ಎಂಪಿಯಯ ಪರಿಣಾಮಕಾರಿ ಅನುಷ್ಠಾನವು ಪ್ರಮುಖ ಸವಾಲುಗಳಾಗಿವೆ.
“ಕಾಂಗ್ರೆಸ್ ಪ್ರಮುಖ ಅಲ್ಲದ ಸ್ವತ್ತುಗಳನ್ನು ಮಾತ್ರ ಮಾರಾಟ ಮಾಡಿದೆ. ನಮ್ಮ ಮಾನದಂಡವೆಂದರೆ ಪ್ರಮುಖ ಮತ್ತು ಕಾರ್ಯತಂತ್ರದ ಸ್ವತ್ತುಗಳನ್ನು ಎಂದಿಗೂ ಮಾರಾಟ ಮಾಡಲಾಗುವುದಿಲ್ಲ. ನಷ್ಟದಲ್ಲಿದ್ದ ಮತ್ತು ಸಣ್ಣ ಮಾರುಕಟ್ಟೆ ಪಾಲಿನೊಂದಿಗೆ ಮಾರಾಟವಾದವು. ಆದರೆ, ಮೋದಿ ಸರ್ಕಾರ ಎಲ್ಲವನ್ನೂ ಮಾರಾಟ ಮಾಡುತ್ತಿದೆ. ಈ ಸರ್ಕಾರವು ಕೊಂಕಣ ರೈಲ್ವೆ ಮತ್ತು ದೆಹಲಿ-ಮುಂಬೈ ಸರಕು ಕಾರಿಡಾರ್ ಅನ್ನು ಮಾರಾಟ ಮಾಡಲು ಯೋಜಿಸುತ್ತಿದೆ “ಎಂದು ಚಿದಂಬರಂ ಹೇಳಿದರು.
ಈ ಸ್ವತ್ತುಗಳನ್ನು ಮಾರುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ಮಾಜಿ ಹಣಕಾಸು ಸಚಿವರು, “ಈ ಸ್ವತ್ತುಗಳು ನಮಗೆ ಆದಾಯವನ್ನು ಉಂಟುಮಾಡುತ್ತವೆ. ಈ ಆಸ್ತಿಗಳು 1.5 ಲಕ್ಷ ಕೋಟಿ ರೂ.ಗಳನ್ನು ಪಡೆಯುತ್ತವೆ ಎಂದು ಹಣಕಾಸು ಸಚಿವರು ಹೇಳುತ್ತಾರೆ. ಆದರೆ ಈ ಆಸ್ತಿಗಳು ಉತ್ಪಾದಿಸುವ ಆದಾಯವನ್ನು ಕೇಂದ್ರ ಏಕೆ ಬಹಿರಂಗಪಡಿಸುತ್ತಿಲ್ಲ. ಈ ಆಸ್ತಿಗಳು ಪ್ರಸ್ತುತ ಸುಮಾರು 1.3 ಲಕ್ಷ ಕೋಟಿ ರೂಪಾಯಿಗಳದ್ದು ಎಂದು ನಾನು ನಂಬುತ್ತೇನೆ. ಆದ್ದರಿಂದ 70 ವರ್ಷಗಳಲ್ಲಿ ನಿರ್ಮಿಸಲಾದ ಸ್ವತ್ತುಗಳನ್ನು ಕೇವಲ 20,000 ಕೋಟಿ ಲಾಭಕ್ಕಾಗಿ ಮಾರಾಟ ಮಾಡುವುದರಲ್ಲಿ ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಉತ್ತರಾಧಿಕಾರಿಯನ್ನು ಈಗ ನೇಮಕ ಮಾಡುತ್ತಿಲ್ಲ, ಆದರೆ ಅವರು ದಲಿತ ಸಮುದಾಯದವರೇ ಆಗಿರುತ್ತಾರೆ: ಮಾಯಾವತಿ
ಇದನ್ನೂ ಓದಿ: ಕಾಶ್ಮೀರವೂ ಸೇರಿ ವಿಶ್ವದ ಎಲ್ಲ ಮುಸ್ಲಿಮರ ಪರ ದನಿ ಎತ್ತಲು ಹಕ್ಕಿದೆ: ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್
(Centre was planning to sell off its assets in the name of the monetisation policy says P Chidambaram)
Published On - 4:16 pm, Fri, 3 September 21